ಕನ್ನಡಿಗರ ಔದಾರ್ಯತೆ, ಹೃದಯವಂತಿಕೆ ಕುಂದಿಲ್ಲ– ಡಾ.ಶಾಂತಮೂರ್ತಿ ಕುಲಕರ್ಣಿ.

0
417

ಕೊಟ್ಟೂರು ತಾಲೂಕ ಕಛೇರಿಯ ಆವರಣದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ನಿಮಿತ್ಯ ತಹಶೀಲ್ದಾರರಾದ ಕುಮಾರಸ್ವಾಮಿ ಎಂ ಇವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದರು.
ನಂತರ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದಿಂದ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಅಲಂಕರಿಸಿದ ವಾಹನದಲ್ಲಿ ವಾದ್ಯತಂಡಗಳು, ಶಾಲಾ ಮಕ್ಕಳು ಹಾಗೂ ಆಟೋ ಚಾಲಕರೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಎಪಿಎಂಸಿ ಆವರಣದಲ್ಲಿನ ವೇದಿಕೆಯಲ್ಲಿ ಮುಕ್ತಾಯವಾಯಿತು.


ವೇದಿಕೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಕೊಟ್ಟೂರಿನ ಕೊಟ್ಟೂರೇಶ್ವರ ಮಹಾವಿದ್ಯಾಲದ ಪ್ರಾಚಾರ್ಯರಾದ ಡಾ.ಶಾಂತಮೂರ್ತಿ ಕುಲಕರ್ಣಿ ಇವರು ಆರುಕೋಟಿ ಕನ್ನಡಿಗರಿರುವ ಇಂದಿನ ಕನ್ನಡ ನಾಡು ಇಂಗ್ಲೆಂಡ್, ಸ್ಕಾಟ್ ಲ್ಯಾಂಡ್ ದೇಶಗಳಷ್ಟು ದೊಡ್ಡದಿದೆ, ಗ್ರೀಸ್ ನ ಎರಡು ಪಟ್ಟಿದೆ. ಇಂತಹ ನಾಡು ಹರಪ್ಪ-ಮಹೆಂಜೆದಾರೋ ಕಾಲದಷ್ಟು ಹಳೆಯದಾಗಿದ್ದು, ಕ್ರಿ.ಶ.3ನೇ ಶತಮಾತದಲ್ಲಿ ದಾಖಲೆ ದೊರೆಯುತ್ತಿದೆ. ಕಪ್ಪುಮಣ್ಣಿನಿಂದ ಕೂಡಿದ್ದರಿಂದ, ಎತ್ತರದ ಪ್ರದೇಶದ ನಾಡಾಗಿದ್ದರಿಂದ ಕರುನಾಡು ಎಂದು ಕರೆಸಿಕೊಂಡಿರುವ ನಾಡು ಸುಮಾರು ಎರಡೂವರೆ ಸಾವಿರ ವರ್ಷಗಳಷಷ್ಟು ಪ್ರಾಚೀನತೆಯನ್ನು ಹೊಂದಿದೆ. ಕಾವೇರಿಯಿಂದ ಗೋದಾವರಿವರೆಗೆ ಅಂದರೆ ಕೊಡಗಿನಿಂದ ಮಹರಾಷ್ಟ್ರದ ನಾಸಿಕ್ ವರೆಗೆ ಕನ್ನಡ ನಾಡು ವಿಸ್ತಾರವಾಗಿ ಹಬ್ಬಿದ್ದು, ನಂತರ ಹರಿದು ಹಂಚಿಹೋಗಿ 1956 ರಲ್ಲಿ ಕನ್ನಡ ಭಾಷೆಯಾಡುವ, ಕನ್ನಡ ನಾಡಿದ ಜನರನ್ನು ಹೊಂದುಗೂಡಿಸಿ ಏಕೀಕರಣಗೊಂಡ ಸಂತಸದ ಕ್ಷಣವೇ ಈ ಕನ್ನಡ ರಾಜ್ಯೋತ್ಸವ. ಮೊದಲು ಮೈಸೂರು ರಾಜ್ಯ ಉದಯವಾಗಿದ್ದು, ನಂತರ ಕರ್ನಾಟಕ ರಾಜ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಅಭಿಮಾನದ ಕೊರತೆ ಕಾಣುತ್ತಿದೆ. ಆದರೆ ಕನ್ನಡಿಗರ ಔದಾರ್ಯತೆ, ಹೃದಯವಂತಿಕೆ ಮಾತ್ರ ಹಾಗೇ ಉಳಿದಿದೆ ಎಂದು ಕನ್ನಡಿಗರ ಹೃದಯ ಶ್ರೀಮಂತಿಕೆ ಬಗ್ಗೆ ಕೊಂಡಾಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ದೇವರಮನಿ ಕೊಟ್ರೇಶ್ ಇವರು ಕನ್ನಡ ನೆಲ, ಜಲ, ಭಾಷೆ ಪ್ರೀತಿಸಬೇಕು. ಸಂಕುಚಿತ ಭಾವನೆ ಬಿಟ್ಟು ಕನ್ನಡಿಗರೆಲ್ಲಾ ಒಂದು ಎಂಬ ಅಭಿಮಾನ ಹೊಂದಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ ಎಂದರು.


ಕಾರ್ಯಕ್ರಮದ ವೇದಿಕೆಯಲ್ಲಿ ಬೆಣ್ಣಿ ವಿಜಯಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ ಹಾಗೂ ಸದಸ್ಯರಾದ ಕೆಂಗರಾಜ್, ವೀಣಾವಿವೇಕಾನಂದಗೌಡ ಎಪಿಎಂಸಿ ಉಪಾಧ್ಯಕ್ಷರು ಜಿ ಸಿದ್ದೇಶ್ ಮಂಗಾಪುರ, ಕಾರ್ಯದರ್ಶಿ ಈರಣ್ಣ, ಡಾ.ಬಿಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ದುರುಗೇಶ, ರೈತ ಸಂಘದ ಮುಖಂಡ ಭರಮಣ್ಣ, ನೌಕರ ಸಂಘದ ಕಾರ್ಯದರ್ಶಿ ಸಿದ್ದಪ್ಪ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಪ್ಪ , ಶಿಕ್ಷಣ ಇಲಾಖೆಯ ಇಸಿಒ ಆದ ಅಜ್ಜಪ್ಪ.ಸಿ. ನಿಂಗಪ್ಪ, ಆನಂದ ಹಾಗೂ ಇತರರು ಇದ್ದರು.
ಕನ್ನಡ ಭಾಷೆ, ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ದೇವರಮನಿ ಕೊಟ್ರೇಶ್, ನಸರುಲ್ಲಾ, ಮತ್ತಿಹಳ್ಳಿ ಪ್ರಕಾಶ್, ಬಿ ಮರಿಸ್ವಾಮಿ, ಎಂ ಮಾಲೀನಿ, ಬಿ ಮದ್ದಾನಪ್ಪ, ಎಂ ಶ್ರೀನಿವಾಸ್, ಸಿ.ಮ.ಗುರುಬಸವರಾಜ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಸನ್ಮಾನಿತರಲ್ಲಿ ಎಸ್.ಪ್ರಕಾಶ್ ಹಾಗೂ ಕೆ.ಕೊಟ್ರೇಶ್
ನವಚೇತನ, ಬಾಲಿಕಿಯರ ಸರ್ಕಾರಿ ಪ್ರೌಢಶಾಲೆ, ಗುರುದೇವ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಗಂಗೋತ್ರಿ, ವಿಸ್ ಡಂ ಶಾಲಾ ಮಕ್ಕಳಿಂದ ಕನ್ನಡ ನಾಡು, ನುಡಿಯ ಬಗ್ಗೆ ಸಾರುವ ಗೀತೆಗಳಿಗೆ ಮಾಡಿದ ನೃತ್ಯವು ನೋಡುಗರನ್ನ ಸೆಳೆದವು.
ಅಣಜಿ ಸಿದ್ದಲಿಂಗಪ್ಪ ಸ್ವಾಗತಿಸಿದರು, ಮನೋಹರಸ್ವಾಮಿ ಮತ್ತು ಕಾಂತರಾಜ್ ನಿರ್ವಹಿಸಿದರೆ, ಶಶಿಧರ ಮೈದೂರು ವಂದಿಸಿದರು.

LEAVE A REPLY

Please enter your comment!
Please enter your name here