ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ; ಐದು ವರ್ಷದ ಕೈ ಶಾಸಕರ ಕೃಪಾಪೋಷಿತ ದುರಾಡಳಿತಕ್ಕೆ ಅಂತ್ಯ ಹಾಡಲು. ಎಲ್ಲಾ ವಾರ್ಡ್ ಗಳಲ್ಲೂ ಜೆಡಿಎಸ್ ಸ್ಪರ್ಧೆ.

0
166

ಹಗರಿಬೊಮ್ಮನಹಳ್ಳಿ/ವಿಜಯನಗರ: ಡಿ:6:-
ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಐದು ವರ್ಷಗಳಿಂದ ಆಡಳಿತದಲ್ಲಿದ್ದ ಶಾಸಕರ ಕೃಪಾಪೋಷಿತ ದುರಾಡಳಿತಕ್ಕೆ ಅಂತ್ಯಹಾಡಲು ಡಿಸೆಂಬರ್ 27 ರಂದು ನಡೆಯುವ ಚುನಾವಣೆಯಲ್ಲಿ ಇಲ್ಲಿನ ಪುರಸಭೆಯ ಎಲ್ಲ 23 ವಾರ್ಡ್ ಗಳಿಗೂ
ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೀಳಿಸುತ್ತೇವೆಂದು ಜಾತ್ಯಾತೀತ ಜನತಾದಳ ಪಕ್ಷದ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದಿಂದ ನಿಯೋಜಿತ ಅಭ್ಯರ್ಥಿಯಾಗಿರುವ ಡಾ.ತಿಪ್ಪೇಸ್ವಾಮಿ ವೆಂಕಟೇಶ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ ಹಳೇಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿ, ಐದು ವರ್ಷದ ಹಿಂದೆ ಸ್ಥಳಿಯ ಜನಪ್ರತಿನಿಧಿಗಳ ಕೈಗೆ ಪಟ್ಟಣದ ಜನತೆ ಅಧಿಕಾರ ಕೊಟ್ರು. ಆದರೆ ಅವರ ಹೆಸರಿನಲ್ಲಿ ಈ ಕ್ಷೇತ್ರದ ಶಾಸಕರು ಕಾರುಬಾರು ನಡೆಸಿದರೆಂದು ಸ್ಥಳಿಯ ಶಾಸಕ ಭೀಮಾನಾಯ್ಕ್ ಹೆಸರೆತ್ತದೆಯೇ ಜೆಡಿಎಸ್ ಜಿಲ್ಲಾ ಪ್ರಧಾನಕಾರ್ಯದರ್ಶಿಯು ಆದ ತಿಪ್ಪೇಸ್ವಾಮಿ ವೆಂಕಟೇಶ ವಾಗ್ದಾಳಿ ನಡೆಸಿದರು.

ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಮತ್ತು ಜನತೆಯ ಆಶೋತ್ತರ ಈಡೇರಿಸುವಲ್ಲಿ ಐದು ವರ್ಷಗಳ ಕಾಲ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಪಟ್ಟಣದ ಜನತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕನಿಷ್ಟಪಕ್ಷ ಬೀದಿ ಕಂಬಗಳಿಗೆ ವಿದ್ಯುತ್ ಬಲ್ಬಗಳನ್ನು ಹಾಕಿಸಲು ಆಡಳಿತದಲ್ಲಿದ್ದ ಸಮಿತಿಗೆ ಸಾಧ್ಯವಾಗಿಲ್ಲ ಎಂದರು.

ಪುರಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆಯಿಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡು ಪಕ್ಷಗಳಿಗೆ ಕಣದಲ್ಲಿ ಸಮರ್ಥವಾಗಿ ಫೈಟ್ ನೀಡುವ ತಾಖತ್ತಿರುವ ಯುವ ಅಭ್ಯರ್ಥಿಗಳನ್ನು ಕಷಕ್ಕೀಳಿಸಲಿದ್ದೇವೆ. ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದು ಅಭ್ಯರ್ಥಿಗಳ ಕೊರತೆ ಇದೆಯೇ ಎನ್ನುವ ಪ್ರಶ್ನೆಯೊಂದಕ್ಕೆ ತಿಪ್ಪೇಸ್ವಾಮಿ ವೆಂಕಟೇಶ ಉತ್ತರಿಸಿದರು.

ಈಗಾಗಲೇ ಟಿಕೆಟ್ ಬಯಸಿ ಸಾಕಷ್ಟು ಆಕಾಂಷಿಗಳು ಅರ್ಜಿಕೊಟ್ಟಿದ್ದಾರೆ. ಪಟ್ಟಣದ ಅಭಿವೃದ್ಧಿ ಬಗ್ಗೆ ಒಲವುವುಳ್ಳ, ವಾರ್ಡಿನ ಪ್ರಗತಿಯ ಕಣ್ಣೋಟ ಇಟ್ಟುಕೊಂಡಿರುವ. ಜನರಸೇವೆಗೆ ಕಂಕಣಾಧಾರಿಗಳಾದ ಅಭ್ಯರ್ಥಿಗಳಿಗೆ ಮೊದಲ ಅದ್ಯತೆ ನೀಡುತ್ತೆವೆಂದರು.

ಪಕ್ಷದ ಕ್ಷೇತ್ರದ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಹಿರಿಯ ಮುಖಂಡರಾದ ಅಡೂರು ಕೊಟ್ರಬಸಪ್ಪ, ಯುವ ಅಧ್ಯಕ್ಷ ಡಿಶ್ ಪಾಂಡುರಂಗನಾಯ್ಕ್, ನಗರ ಯುವ ಘಟಕ ಅಧ್ಯಕ್ಷ ಚಿಂತ್ರಪಳ್ಳಿ ಕೊಟ್ರೇಶ,ಕೊಟ್ಟೂರು ರವಿ, ಖಾಜಿ, ಬಾಚಿನಳ್ಳಿ ಕೊಟ್ರೇಶ ಸೇರಿದಂತೆ ಹಲವರು ಹಾಜರಿದ್ದರು.

-ಹುಳ್ಳಿಪ್ರಕಾಶ
ಸಂಪಾದಕರು, ಬಳ್ಳಾರಿ ಸುನಾಮಿಪತ್ರಿಕೆ.

LEAVE A REPLY

Please enter your comment!
Please enter your name here