ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಮತ್ತು ನಿಯಂತ್ರಣ ಕಾಯ್ದೆ ನೋಂದಣಿ ಕಾರ್ಯಗಾರ
ಪ್ರವಾಸೋದ್ಯಮ ಸೇವಾಸೌಲಭ್ಯಗಳ ದೊಡ್ಡ ಉದ್ಯಮ: ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಡಾ.ಎಸ್.ತಿಪ್ಪೇಸ್ವಾಮಿ

0
113

ಹೊಸಪೇಟೆ(ವಿಜಯನಗರ ಜಿಲ್ಲೆ),ಮಾ.09: ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ, ಹಂಪಿ-ಹೊಸಪೇಟೆ ಹೋಟೆಲ್ ಮಾಲೀಕರ ಸಂಘಗಳ ಸಹಯೋಗದೊಂದಿಗೆ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಮತ್ತು ನಿಯಂತ್ರಣ(ಕೆಟಿಟಿಎಫ್)ಕಾಯ್ದೆ 2015ರಡಿ ನೋಂದಣಿ ಮಾಡುವ ಕುರಿತ ಕಾರ್ಯಾಗಾರವನ್ನು ಹೊಸಪೇಟೆಯ ಹೋಟೆಲ್ ಮಲ್ಲಿಗೆಯಲ್ಲಿ ಆಯೋಜಿಸಲಾಗಿತ್ತು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಡಾ.ಎಸ್.ತಿಪ್ಪೇಸ್ವಾಮಿ ಅವರು ಮಾತನಾಡಿ, ಪ್ರವಾಸೋದ್ಯಮವು ಒಂದು ಸೇವಾ ಸೌಲಭ್ಯಗಳ ಬಹುದೊಡ್ಡ ಉದ್ಯಮವಾಗಿದ್ದು ಸದ್ದುಗದ್ದಲವಿಲ್ಲದೆ ಹೊಗೆ ರಹಿತವಾಗಿ ನಡೆಯುವ ವಿಶ್ವದ ಅತಿದೊಡ್ಡ ಕೈಗಾರಿಕೆಯಾಗಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ಹೋಟೆಲ್/ಲಾಡ್ಜಸ್/ರೆಸಾರ್ಟ್/ರೆಸ್ಟೊರೆಂಟ್ ಮತ್ತು ಮನೋರಂಜನಾ ಪಾರ್ಕ್‍ಗಳ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50 ರಷ್ಟು ರಿಯಾಯಿತಿ ಹಾಗೂ 3 ತಿಂಗಳ ವಿದ್ಯುಚ್ಛಕ್ತಿ ಡಿಮ್ಯಾಂಡ್/ಫಿಕ್ಸೆಡ್ ಡೆಪಾಸಿಟ್ ಇತರೆ ಸೌಲಭ್ಯಗಳನ್ನು ಸರ್ಕಾರದಿಂದ ಘೋಷಿಸಲಾಗಿದೆ ಎಂದರು.
ಈ ಸಂಬಂಧ ಇಲಾಖೆಯ ವೆಬ್‍ಸೈಟ್‍ಗಳಾದhಣಣಠಿs://ಞಣಣಜಿ.ಞಚಿಡಿಟಿಚಿಣಚಿಞಚಿಣouಡಿism.oಡಿgಅಥವಾhಣಣಠಿ://ತಿತಿತಿ.ಞಚಿಡಿಟಿಚಿಣಚಿಞಚಿಣouಡಿism.oಡಿgಗಳಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಉದ್ದೇಶದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಸರ್ಕಾರದ ಈ ಸೌಲಭ್ಯವನ್ನು ಪ್ರವಾಸಿ ಸೇವಾದಾತರು ಪಡೆದು ಕೊಳ್ಳಬೇಕೆಂದು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಂಪಿ-ಹೋಸಪೇಟೆ ಹೋಟೆಲ್ ಮಾಲಿಕರ ಸಂಘದ ಕಾರ್ಯದರ್ಶಿಗಳಾದ ಶ್ರೀಪಾದ್ ಅವರು ಎಲ್ಲಾ ಹೋಟೆಲ್ ಮಾಲಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಸರ್ಕಾರ ನೀಡಿರುವ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ಹಾಗೂ 3ತಿಂಗಳ ವಿದ್ಯುಚ್ಛಕ್ತಿ ಡಿಮಾಂಡ್/ಫಿಕ್ಸಡ್ ಡೆಪಾಸಿಟ್ ವiನ್ನಾ ಸೌಲಭ್ಯವನ್ನು ಕೆ.ಟಿ.ಟಿ.ಎಫ್ ನಲ್ಲಿ ನೊಂದಣಿ ಮಾಡಿಕೊಳ್ಳುವುದರ ಮೂಲಕ ಪಡೆಯಬಹುದು ಎಂದು ತಿಳಿಸಿದರು.
ಈ ಕಾರ್ಯಗಾರದಲ್ಲಿ ಬೆಂಗಳೂರಿನ ಪ್ರವಾಸೊದ್ಯಮ ಇಲಾಖೆಯ ತಾಂತ್ರಿಕ ಸಿಬ್ಬಂದಿಗಳಾದ ವಿನೋದ್ ಮತ್ತು ಆನಂದ ಅವರು ಕೆ.ಟಿ.ಟಿ.ಎಫ್ ಕಾಯ್ದೆಯಡಿ ನೊಂದಣಿ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ಹೋಟೆಲ್ ಮಾಲಿಕರಿಗೆ ವಿವರಿಸಿದರು.
ಕಾರ್ಯಾಗಾರದಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಹೋಟೆಲ್ ಮಾಲೀಕರು ಮತ್ತು ವಿಜಯನಗರ,ಬಳ್ಳಾರಿ, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳಿಂದ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್, ಟ್ರಾವೆಲ್ ಏಜೆನ್ಸಿ ಮತ್ತು ಟೂರ್ ಆಪರೇಟರ್‍ಗಳು, ಮನರಂಜನಾ ಪಾರ್ಕ್‍ಗಳ ಮಾಲೀಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here