ಕಾನೂನಿನ ವಿರುದ್ಧ ಮಾಡುವ ಚಟುವಟಿಕೆಗಳಿಗೆ ಕ್ಷಮೆ ಇಲ್ಲ: ಪಿಎಸ್ಐ ವಿಜಯ ಕೃಷ್ಣ

0
571

ಕೊಟ್ಟೂರು: ಕಾನೂನುಗಳು ನಮ್ಮ ರಕ್ಷಣೆಗಾಗಿಯೇ ಇರುವುದರಿಂದ ಕಾನೂನು ವಿರುದ್ಧವಾಗಿ ನಡೆದುಕೊಳ್ಳಬಾರದು ಕಾನೂನಿನ ವಿರುದ್ಧ ಮಾಡುವ ಚಟುವಟಿಕೆಗಳಿಗೆ ಕ್ಷಮೆ ಇರುವುದಿಲ್ಲ ಎಂದು ಸಬ್ ಇನ್ಸ್ಪೆಕ್ಟರ್ ವಿಜಯ ಕೃಷ್ಣ ಹೇಳಿದರು.

ಕೊಟ್ಟೂರೇಶ್ವರ ಕಾಲೇಜಿನಲ್ಲಿ ಡಿಗ್ರಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಬುಧವಾರ ಬೆಳಗ್ಗೆ 11:30ಕ್ಕೆ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಕಾನೂನು ಅರಿವು ಕುರಿತು ಕೊಟ್ಟೂರು ಠಾಣೆ ಪಿಎಸ್ಐ ಆದ ವಿಜಯಕೃಷ್ಣ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸೂಕ್ತ ಕಾನೂನು ಮಾಹಿತಿ ಇದ್ದರೆ ಯೋಗ್ಯ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಪೂರ್ಣವಾದ ಕಾನೂನಿನ ಅರಿವು ಪಡೆಯಲು ಸಾಧ್ಯವಿಲ್ಲ. ಆದರೂ ಕನಿಷ್ಠ ಪ್ರತಿ ದಿನಕ್ಕೆ ಅನಿವಾರ್ಯವಾಗಿರುವ ವಿಷಯ ತಿಳಿಯಬೇಕಾಗಿರುವುದು ಅವಶ್ಯಕ. ಕಾನೂನಿನ ವಿರುದ್ಧ ಮಾಡುವ ಚಟುವಟಿಕೆಗಳಿಗೆ ಕ್ಷಮೆ ಇರುವುದಿಲ್ಲ ವಾಹನ ಓಡಿಸುವ ವಿದ್ಯಾರ್ಥಿಗಳು ಪರವಾನಗಿ ಮತ್ತು ಜೀವ ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಚಾಲನಾ ಪರವಾನಿಗೆ ಹಾಗೂ ಮತದಾನ ಹಕ್ಕು ಪಡೆಯಲು ಅರ್ಹತೆ ಹೊಂದಿರುತ್ತಾರೆ. ಸರ್ಕಾರ ನಿಗದಿ ಪಡಿಸಿದಂತೆ ಸೂಕ್ತ ದಾಖಲಾತಿ ನೀಡಿ ಎರಡು ಹಕ್ಕನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ವಿಜಯ ಕೃಷ್ಣ ಎಎಸ್ಐ ಅಬ್ಬಾಸ್, ಕೊಟ್ಟೂರೇಶ್ವರ ಕಾಲೇಜಿನ ಪ್ರಿನ್ಸಿಪಾಲರಾದ ಶಾಂತಮೂರ್ತಿ ಕುಲಕರಣಿ , ಇತಿಹಾಸ ವಿಭಾಗದ ಮುಖ್ಯಸ್ಥರಾದ ಸಿದ್ದನಗೌಡರು, ಪೋಲಿಸ್ ಕಲ್ಲೇಶ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here