ಬಿಜೆಪಿ ಟಿಕೆಟ್ ಸ್ಥಳೀಯರಿಗೆ !!! ?

0
178

ಸಂಡೂರು:ನ:23: ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ಗೆ ಹಲವರು ಆಕಾಂಕ್ಷಿಗಳು ಇದ್ದು ಇತ್ತೀಚಿನ ಬೆಳವಣಿಗೆಯ ಪ್ರಕಾರ ಸ್ಥಳೀಯರಿದ್ದಲ್ಲಿ ಮಾತ್ರ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ಅಭಿಪ್ರಾಯಗಳು ಮೂಡಿ ಬರುತ್ತಿವೆ.

ಇದಕ್ಕೆ ಪೂರಕ ಎನ್ನುವಂತೆ ಸ್ಥಳೀಯರ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು ಟಿಕೆಟ್ ತಮಗೆ ಸಿಗುತ್ತದೆ ಎಂದು ಓಡಾಡಿಕೊಂಡಿದ್ದ ಕೆಲವರ ನಿದ್ದೆಗೆಡಿಸಿದೆ.
ಸ್ಮಯೋರ್ ಕಂಪನಿಯ ಮಾಜಿ ನೌಕರ ಎಲ್ಲಪ್ಪ ಅವರು ಮಾಧ್ಯಮದೊಂದಿಗೆ ಇಂದು ಬುಧವಾರ ಮಾತನಾಡಿದರು.

1974ರಲ್ಲಿ ಕಾರ್ಮಿಕನಾಗಿ ಸೇರಿಕೊಂಡು ಹೆಚ್ಚಿನ ಶಿಕ್ಷಣವನ್ನು ಕಂಪನಿಯ ಮೂಲಕ ಮಾಡಿ 1983 ರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸತತವಾಗಿ 50 ವರ್ಷಗಳ ಸೇವೆಯನ್ನು ಸಲ್ಲಿಸಿದ್ದೇನೆ ನನಗೀಗ 65 ವರ್ಷಗಳು 63 ವರ್ಷಗಳನ್ನು ಕಂಪನಿಯ ಜೊತೆ ಒಡನಾಟದೊಂದಿಗೆ ಬದುಕಿದ್ದೇನೆ ನನ್ನ ಬೆನ್ನ ಹಿಂದೆ ಕಾರ್ತಿಕೇಯ ಘೋರ್ಪಡೆ ಮಹಾರಾಜರು ಇದ್ದಾರೆ ಅವರ ಕೃಪಾಕಟಾಕ್ಷದಿಂದ ನನಗೆ ಬಿಜೆಪಿ ಟಿಕೆಟ್ ಸಿಕ್ಕು ಶಾಸಕನಾದರೆ ಒಳ್ಳೆಯ ಕೆಲಸಗಳನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

ಮಾಜಿ ಸಚಿವರಾದ ದಿವಂಗತ ಎಂ.ವೈ. ಘೋರ್ಪಡೆಯವರು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ ನಾರಿಹಳ್ಳ ಕುಡಿಯುವ ನೀರಿನ ಜಲಾಶಯ ಸೇರಿದಂತೆ ಇಲ್ಲಿನ ಮೂಲಭೂತ ಸೌಕರ್ಯಗಳು ಸೇರಿದಂತೆ ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದಾರೆ ಅದಲ್ಲದೆ ಕಡಿಮೆ ವೆಚ್ಚದಲ್ಲಿ ಬಡವರ ಮದುವೆ ಸಮಾರಂಭಗಳಿಗೆ ಅನುಕೂಲವಾಗಲೆಂದು ಆದರ್ಶ ಕಲ್ಯಾಣ ಮಂಟಪವನ್ನು ತೆರೆದಿದ್ದಾರೆ ಮತ್ತೆ ಆದರ್ಶ ಸಮುದಾಯ ಆರೋಗ್ಯ ಕೇಂದ್ರ ಕಾರ್ಮಿಕರಲ್ಲದೆ ಸಾರ್ವಜನಿಕರ ಎಲ್ಲರ ಬಳಕೆಗೆ ಇದೆ ಎನ್ನುವುದನ್ನು ನಾವು ಮರೆಯುವಂತಿಲ್ಲ ಎಂದರು.

ಶಾಸಕ ಇ.ತುಕಾರಾಮ್ ಅವರ ಆಡಳಿತದ ಬಗ್ಗೆ ಕೇಳಿದಾಗ ಮೊದಲೆಲ್ಲ ಸರ್ಕಾರದ ಅನುದಾನ ಬಹಳ ಕಡಿಮೆ ಮಟ್ಟದಲ್ಲಿತ್ತು ಇಂದು ಗ್ರಾಮ ಪಂಚಾಯತಿಗಳಿಗೆ ಕೋಟಿಗಟ್ಟಲೆ ಅನುದಾನ ಬರುತ್ತದೆ ಅವರು ಕೆಲಸ ಏನು ಮಾಡಿದ್ದರೂ ಕೂಡ ಅದು ಸರ್ಕಾರದ ದುಡ್ಡು ಎಂದು ಸೂಚ್ಯವಾಗಿ ನುಡಿದರು.

ಬಿಜೆಪಿ ಪಕ್ಷದ ಟಿಕೆಟ್ ನಿಮಗೆ ಗ್ಯಾರಂಟಿ ಏನು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಲ್ಲಪ್ಪ ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧಿಸಲು ಸಿದ್ಧ 65 ವರ್ಷವಾದರೂ ಕೂಡ ನಾನು ಆರೋಗ್ಯದಲ್ಲಿದ್ದೇನೆ 600 ರಿಂದ 700ಕಿ.ಮೀ ಡ್ರೈವಿಂಗ್ ಅನ್ನು ಒಬ್ಬನೇ ಮಾಡುತ್ತೇನೆ ಎಂದು ತಮ್ಮ ದೈಹಿಕ ಧೃಡತೆಯನ್ನು ಸ್ಪಷ್ಟಪಡಿಸಿದರಲ್ಲದೆ ವಯಸ್ಸಾಗಿರುವುದು ನನ್ನ ದೇಹಕ್ಕೆ ಇರಬಹುದು ಆದರೆ ನನ್ನ ಮನಸ್ಸಿಗೆ ಅಲ್ಲ ಎಂದು ಮುಗುಳ್ನಕ್ಕರು.

ನೀವು ಶಾಸಕರಾಗಿ ಗೆದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ. ಸ್ಥಳೀಯರಿಗೆ ಉದ್ಯೋಗ ಆರೋಗ್ಯದ ಮುತುವರ್ಜಿಗಾಗಿ ಮಲ್ಟಿ ಸ್ಪೆಷಾಲಿಟಿ ಇರುವ ಆಸ್ಪತ್ರೆ, ಸ್ಥಳೀಯವಾಗಿ ಒಂದು ಮೆಡಿಕಲ್ ಕಾಲೇಜು, ಹಿರಿಯ ನಾಗರಿಕರು, ಮಕ್ಕಳು ವಿಶ್ರಾಂತಿ ತೆಗೆದುಕೊಳ್ಳಲು ಒಂದು ಹೈಟೆಕ್ ಪಾರ್ಕ್ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಬಯಸುತ್ತೇನೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here