ಭಾರತ ದೇಶವು 100 ಕೋಟಿ ಡೋಸ್ ಕೋವಿಡ್ ಲಸಿಕೆ ಹಾಕಿದ ರಾಷ್ಟ್ರವಾಗಿ ಹೊರಹೊಮ್ಮಿದ್ದು ಪ್ರತಿಯೊಬ್ಬರೂ ಹೆಮ್ಮೆ ಪಡಲೇಬೇಕು: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
172

ಸಂಡೂರು:ಅ:22:- ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ದುರುಗಮ್ಮ ದೇವಸ್ಥಾನ ಆವರಣದಲ್ಲಿ ಬೃಹತ್ ಲಸಿಕಾಮೇಳವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ನಿನ್ನೆ ನಮ್ಮ ಭಾರತ ದೇಶವು ನೂರು ಕೋಟಿ ಡೋಸ್ ಕೋವಿಡ್ ವ್ಯಾಕ್ಸಿನೇಷನ್‌ ಗುರಿ ತಲುಪಿದ್ದು ಪ್ರತಿಯೊಬ್ಬರು ಹೆಮ್ಮೆಯಿಂದ ಹೇಳಿಕೊಂಡು ವಿಶ್ವಕ್ಕೆ ಉತ್ತಮ ಸಂದೇಶವನ್ನು ನೀಡಿದೆ, ನಮ್ಮ ದೇಶೀಯ ಲಸಿಕೆಯನ್ನು ಪರಿಚಯಿಸಿ ಕೇವಲ 9 ತಿಂಗಳಲ್ಲಿ 100 ಡೋಸ್ ನೀಡಿದ್ದು ಇದರಲ್ಲಿ 71 ಕೋಟಿ ಮೊದಲ ಡೋಸ್, 29 ಕೋಟಿ ಎರಡನೇ ಡೋಸ್ ನೀಡಿದ್ದು ಸಾದಾರಣ ವಿಷಯವಲ್ಲ, ಇದಕ್ಕೆಲ್ಲ ಕಾರಣರಾದ ವೈದ್ಯ ವಿಜ್ಞಾನಿಗಳು, ಕೇಂದ್ರ ಸರ್ಕಾರ,ರಾಜ್ಯ ಸರ್ಕಾರ ಮತ್ತು ಲಸಿಕೆ ನೀಡಿದ ಆರೋಗ್ಯ ಇಲಾಖೆ ಹಾಗೂ ಸಹಕಾರ ನೀಡಿದ ಸಮಸ್ತ ಇಲಾಖೆಯ ನೌಕರರು ಹಾಗೂ ಸಮಸ್ತ ನಾಗರೀಕರು ಎಲ್ಲರೂ ಅಭಿನಂದನಾರ್ಹರು,

ಈ ಸಂದರ್ಭವನ್ನು ನಾವು ಅತ್ಯಂತ ವಿಜೃಂಭಣೆಯಿಂದ ಸಂಭ್ರಮಿಸುತ್ತಿದ್ದು ನಮ್ಮ ಕರ್ತವ್ಯವನ್ನು ಮುಂದುವರೆಸಿ ಇಂದು ನಮ್ಮ ತಾಲೂಕಿಗೆ 10 ಸಾವಿರ ಲಸಿಕೆ ನೀಡಿಕೆ ಗುರಿಯನ್ನು ಇಟ್ಟುಕೊಂಡು ಲಸಿಕಾ ಮೇಳವನ್ನು ನಡೆಸಿದ್ದೇವೆ, ಈಗ ಜನರು ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಕ್ವಾಡೆಸ್ ಮೊಬೈಲ್ ಮೆಡಿಕಲ್ ಮೊಬೈಲ್ ಯುನಿಟ್ ನ ವೈದ್ಯರಾದ ಡಾ.ಶೋಭಾ ಮಾತನಾಡಿ ನಮ್ಮ ತಂಡವು ಸಹ ಲಸಿಕೆ ನೀಡಲು ಇಲಾಖೆ ಅವಕಾಶ ಮಾಡಿ ಕೊಟ್ಟಿದೆ ಇದುವರೆಗೆ 1000 ಜನರಿಗೆ ಲಸಿಕೆ ನೀಡಿದ್ದೆವೆ ಇದಕ್ಕಾಗಿ ಆರೋಗ್ಯ ಇಲಾಖೆಗೂ ಮತ್ತು ಸರ್ಕಾರಕ್ಕೂ ಧನ್ಯವಾದಗಳನ್ನು ತಿಳಿಸಲು ಸಂತಸವಾಗಿದೆ ಎಂದು ತಿಳಿಸಿದರು ಇಂದು ನಡೆಯಲಿರುವ ಲಸಿಕಾ ಮೇಳದ ಲಸಿಕಾ ಕೇಂದ್ರಗಳನ್ನು ಹಬ್ಬದ ರೀತಿಯಲ್ಲಿ ರಂಗೋಲಿ, ಸ್ಥಳೀಯ ಚಿತ್ರಕಲೆ, ಬಲೂನುಗಳನ್ನು ಸಿಂಗರಿಸಿ ಹಬ್ಬದ ರೀತಿಯಲ್ಲಿ ಆಚರಿಸಿ ಲಸಿಕೆ ನೀಡುತ್ತಿರುವುದು ಸಂತೊಷದ ವಿಷಯ ಎಂದು ನುಡಿದರು,

ಈ ಸಂದರ್ಭದಲ್ಲಿ ಡಾ. ಶೋಭಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಶಕೀಲ್ ಅಹಮದ್, ಶುಶ್ರೂಷಕಿ ಮಂಗಳಾ, ಅರ್ಪಿತ ಆಶಾ ಕಾರ್ಯಕರ್ತೆ ರಾಜೇಶ್ವರಿ, ಶಿವಲಿಂಗಮ್ಮ ಇತರರು ಇದ್ದರು

LEAVE A REPLY

Please enter your comment!
Please enter your name here