ತೋರಣಗಲ್ಲು ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಜಾಗೃತಿ

0
339

ಸಂಡೂರು:ಡಿ:01:-ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು, ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಎಮ್.ಎಸ್.ಹೊನ್ನೂರ್ ಸಾಬ್ ಯುವ ಸಮುದಾಯಕ್ಕೆ ಹೆಚ್.ಐ.ವಿ ಸೋಂಕು ಮತ್ತು ಏಡ್ಸ್ ಕಾಯಿಲೆ ಕುರಿತು ಅರಿವು ಇರಬೇಕು, ರೋಗ ನಿರ್ಣಾಯಕ ವಿಷಯಗಳನ್ನು ಅರಿತಿರಬೇಕು, ಆದರ್ಶ ಜೀವನಶೈಲಿ ನಿಮ್ಮದಾಗಿರಬೇಕು, ಏಡ್ಸ್ ಮುಕ್ತ ವಿಶ್ವ ರೂಪಿಸಲು ಯುವಕರಿಗೆ ಕೆರೆ ನೀಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಹೆಚ್.ಐ.ವಿ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಹೊಸ ರೋಗಿಗಳ ಸಂಖ್ಯೆ ಶೂನ್ಯಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ ಅದಕ್ಕಾಗಿ 2030 ಕ್ಕೆ ಏಡ್ಸ್ ಮುಕ್ತ ವಿಶ್ವ ರೂಪಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ, ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಎಚ್ಚರಿಕೆಯಿಂದ ಇರದ್ದಿದ್ದರೆ ಯಾರಿಗಾದರೂ ಹೆಚ್.ಐ.ವಿ ಬರಬಹುದು, ಹೆಚ್.ಐ.ವಿ ಯು ಸೋಂಕಿತ ವ್ಯಕ್ತಿಯಿಂದ ನಡೆಸುವ ಅಸುರಕ್ಷಿತ ಲೈಂಗಿಕತೆಯಿಂದ ಹರಡುತ್ತದೆ, ಮತ್ತು ಸೋಂಕಿತ ವ್ಯಕ್ತಿಯ ರಕ್ತವನ್ನು ಪರೀಕ್ಷಿಸಿಸದೇ ಪಡೆಯುವುದರಿಂದ,ಸಂಸ್ಕರಿಸದ ಸೂಜಿ,ಸಿರಂಜು,ಬ್ಲೇಡು ಇತರೆ ಹರಿತವಾದ ವಸ್ತುಗಳನ್ನು ಬಳಸುವುದರಿಂದ ಹಾಗೂ ಸೋಂಕಿತ ಗರ್ಭಿಣಿಯಿಂದ ಹುಟ್ಟುವ ಮಗುವಿಗೆ ಬರುತ್ತದೆ, ಯುವಕರು ಮದುವೆಗೆ ಮುಂಚೆ ಲೈಂಗಿಕತೆ ಬೇಡ, ಮತ್ತು ಸೋಂಕಿತರ ಜೊತೆಗೆ ವಾಸ ಮಾಡುವುದರಿಂದಾಗಲಿ, ಕೆಲಸ ಮಾಡುವುದರಿಂದಾಗಲಿ,ಊಟ ಬಟ್ಟೆ ಹಂಚಿಕೊಳ್ಳುವುದರಿಂದಾಗಲಿ, ಸೊಳ್ಳೆ, ಕೀಟ ಕಚ್ಚುವುದರಿಂದಾಗಲಿ, ಒಂದೇ ಸ್ನಾನದ ಮನೆ, ಅಡುಗೆ ಮನೆ ಬಳಸುವುದರಿಂದ ಹೆಚ್.ಐ.ವಿ/ಏಡ್ಸ್ ಬರುವುದಿಲ್ಲ ಎಂದು ತಿಳಿಸಿದರು,

1988 ರಿಂದ ವಿಶ್ವ ಏಡ್ಸ್ ದಿನ ಆಚರಿಸಿ ಜನರಿಗೆ ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಮಾಹಿತಿ ತಿಳಿಸಲಾಗುವುದು, ಹಾಗೆ ಸುರಕ್ಷಿತ ಲೈಂಗಿಕತೆ, ಕಾಂಡೋಮ್ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತದೆ ಸರ್ವರೂ ಇಲಾಖೆಯೊಂದಿಗೆ ಕೈಜೋಡಿಸಿದಲ್ಲಿ 2030 ಕ್ಕೆ ಏಡ್ಸ್ ಮುಕ್ತ ವಿಶ್ವ ಮಾಡಬಹುದು, 2022 ರ ಘೋಷಣೆಯಂತೆ “ಸಮಾನಗೊಳಿಸಿ” ಎಲ್ಲರೂ ಸೇರಿ ಅಸಮಾನತೆಗಳನ್ನು ಹೋಗಲಾಡಿಸೋಣ, ಏಡ್ಸ್ ನ್ನು ಕೊನೆಗೊಳಿಸೋಣ, ಇದರಂತೆ ಜಾಗೃತಿ ಮೂಡಿಸೋಣ, ಇಡೀ ವಿಶ್ವವೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ಅನಿಸ್ ಫಾತಿಮಾ, ಶಶಿಕಲಾ, ಸ್ನೇಹಲತಾ, ಶಾಂತಲಾ, ಸಾವಿತ್ರಿ, ಸರೋಜಾ,ಜ್ಯೋತಿ, ಈರಣ್ಣ, ಜಬಿವುಲ್ಲಾ, ಬಸವರಾಜ ಮತ್ತು ಶಾಲೆಯ ಮಕ್ಕಳು ಹಾಜರಿದ್ದರು

LEAVE A REPLY

Please enter your comment!
Please enter your name here