ರಕ್ಷಣೆ ಮೊದಲು ನಂತರ ವೇಗ, ಇದರಿಂದ ಜೀವ ಉಳಿಯುತ್ತದೆ, ಉಳಿಸುತ್ತದೆ- ಈ.ತುಕರಾಂ

0
22

ಸಂಡೂರು: ಫೆ: 20; ಮೊದಲು ರಕ್ಷಣೆ ನಂತರ ವೇಗ ಎನ್ನುವುದನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಇದನ್ನು ಅನುಸರಿಸುವ ಮೂಲಕ ಜೀವ ಉಳಿಸಿಕೊಳ್ಳಬೇಕು ಎಂದು ಶಾಸಕ ಈ.ತುಕರಾಂ ಕರೆ ನೀಡಿದರು.

ಅವರು ಇಂದು ಪಟ್ಟಣದ ಪೋಲಿಸ್ ಠಾಣೆಯ ಅವರಣದಲ್ಲಿ ಬಳ್ಳಾರಿ ಜಿಲ್ಲಾ ಪೋಲಿಸ್ ಹಾಗೂ ಸಂಡೂರು ಠಾಣೆ, ಸ್ಮಯೋರ್ ಕಂಪನಿಯ ಸಹಯೋಗದಲ್ಲಿ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಚಾರಿ ನಿಯಮಗಳ ಅರಿವು ಅಗತ್ಯವಾಗಿದೆ ಕಾರಣ ಬಹಳಷ್ಟು ಬುದ್ದಿವವಂತರೆ ಲೈಸೆನ್ಸ್ ಇಲ್ಲದೆ, ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುತ್ತಿರುವುದರಿಂದ ಅಪಘಾತಗಳು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ ಇದರಿಂದ ಹೊರಬರಬೇಕಾದರೆ ಕಡ್ಡಾಯವಾಗಿ ರಕ್ಷಣಾ ಸೂತ್ರ ಬಳಸಿಕೊಳ್ಳಿ ಎಂದು ಕರೆ ನೀಡಿದರು.

ಅಲ್ಲದೆ ಸ್ಮಯೋರ್ ಕಂಪನಿಯ ಹಾಗೂ ಇತರ ಕಂಪನಿಗಳ ಸಿ.ಎಸ್.ಅರ್ ಹಣ ಅತಿ ಹೆಚ್ಚು ಸಂಡೂರು ತಾಲೂಕಿಗೆ ಬಳಕೆಯಾಗಬೇಕು ಕಾರಣ ಧೂಳು ಕುಡಿಯುವವರು ನಾವು ನಮಗೆ ಬಳಕೆಯಾಗಲಿ, ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯದ ಜೊತಗೆ ರಕ್ಷಣೆ ಬಹು ಮುಖ್ಯವಾಗಿದೆ, ಗಣ ಪ್ರದೇಶವಾದ್ದರಿಂದ ಅಪಘಾತಗಳು ಹೆಚ್ಚುತ್ತಿದ್ದು ಅವುಗಳನ್ನು ತಡೆಯಬೇಕಾದರೆ ಕಟ್ಟು ನಿಟ್ಟಿನ ಕ್ರಮ ಅತಿ ಅಗತ್ಯವಾಗಿದೆ, ಸಂಡೂರಿನ ಅಭಿವೃದ್ದಿಗೆ ವಿಶೇಷವಾಗಿ ಸ್ಕಿಲ್ ತರಬೇತಿ ಕೆಂದ್ರಕ್ಕೆ 300 ಕೋಟಿ ಹಣ ಮಂಜೂರಾಗಿದ್ದು ಅದನ್ನು ಶೀಘ್ರದಲ್ಲಿ ಪ್ರಾರಂಭಿಸಲಾಘುವುದು ಎಂದರು.

ಈ ಸಂದರ್ಭದಲ್ಲಿ ಬಹಿರ್ಜಿ ಘೋರ್ಪಡೆ ಮಾತನಾಡಿ ನಮ್ಮ ಸ್ಮಯೋರ್ ಸಂಸ್ಥೆ ನಿರಂತರವಾಗಿ ರಕ್ಷಣೆಗೆ ತನ್ನದೇ ಅದ ಚಟುವಟಿಕೆ ಮಾಡುತ್ತಿದೆ ಅದಕ್ಕೆ ಸಾರ್ವಜನಿಕರ ಹಿತ ಮುಖ್ಯ ಲಾಭ ನಂತರ ಎಂದರು.

ಜಿಲ್ಲಾ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 255 ಮಾರಾಣಾಂತಿಕ ಅಪಘಾತಗಳು ಸಂಭವಿಸಿವೆ ಅದಲರಲಿ ಹೆಲ್ಮೆಟ್ ಇಲ್ಲದೆ 230 ಜನರು ಸಾವನ್ನಪ್ಪಿದ್ದಾರೆ, ಮುಖ್ಯವಾಗಿ ಕುಡಿದು ಚಾಲನೆ, ಹೆಲ್ಮೆಟ್ ಇಲ್ಲದೆ ಚಾಲನೆ, ಪೋನ್ ಬಳಕೆಯ ಚಾಲನೆ, ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗುತ್ತದೆ ಅದ್ದರಿಂದ ಶಾಸಕರು ವಿಶೇಷವಾಗಿ ಕರ್ನಾಟಕದಲ್ಲಿಯೇ ಮಾದರಿ ತಾಲುಕನ್ನಾಗಿಸಲು ಈ ಕ್ರಮ ವಹಿಸಿದ್ದು ಅಪಘಾತ ಕಡಿಮೆಯಾಗಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಇನ್ನು ಸೈಬರ್ ಅಪರಾಧಗಳೂ ಸಹ ಹೆಚ್ಚಾಗುತ್ತಿದೆ ಇದನ್ನು ಟ್ರೇಸ್ ಮಾಡುವುದು ಕಷ್ಟವಾಗುತ್ತಿದೆ ಪ್ರಮುಖವಾಗಿ 3000 ಕೇಸುಗಳು ದಾಖಲಾಗಿವೆ ಅದಲರಲಿ 2000 ಸಾವಿರ ಸೈಬರ್ ಅಗಿರುತ್ತದೆ ಅದ್ದರಿಂದ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿದಾಗ ಇದನ್ನು ಪತ್ತೆ ಮಾಡಲು ಸಾಧ್ಯ ಎಷ್ಟೋ ಬಾರಿ ಟ್ರೇಸ್ ಮಾಡಿದಾಗ ಕಡು ಬಡವರ, ಬಿಕ್ಷುಕರ ಸಿಮ್ ಬಳಕೆಯಾಗಿದ್ದು ಕಂಡುಬಂದಿರುತ್ತದೆ ಅದ್ದರಿಂದ ದುಷ್ಟರು ಇಂತಹ ಕೃತ್ಯ ಎಸಗುತ್ತಾರೆ, ದಉಡಿಯದೇ ಹಣ ಬರಲು ಸಾಧ್ಯವಿಲ್ಲ, ಪುಕ್ಕಟೆ ಯಾರೂ ಹಣ ಹಾಕುವುದಿಲ್ಲ ಎನ್ನುವ ಜ್ಞಾನ ಸಾರ್ವಜನಿಕರದಾಗಬೇಕು, ಇನ್ನೂ ಪೋಕ್ಸೋ ಕಾಯಿದೆ ಹೆಚ್ಚಾಗುತ್ತಿವೆ ಕಾರಣ ನಮ್ಮ ಯುವಕರಿಗೆ ಗೊತ್ತಿಲ್ಲ ಇದರ ಬಗ್ಗೆ ಜಾಗೃತಿ ಅತಿ ಅಗತ್ಯ, ಕಾರಣ 17 ವರ್ಷದೊಳಗೆ ಮದುವೆಯಾದರೆ ಅದೂ ಸಹ ಪೋಕ್ಸೋ ಅಡಿಯಲ್ಲಿ ಬರುತ್ತದೆ ಅದ್ದರಿಂದ ತಿಳುವಳಿಕೆ ಬಹು ಮುಖ್ಯ, ಅಲ್ಲದೆ ಅಟ್ರಾಸಿಟಿ ಕಾಯಿದೆ ಸಹ ಹೆಚ್ಚಾಗುತ್ತಿದ್ದು ಇದರ ಬಗ್ಗೆಯೂ ಸಹ ಜಾಗೃತಿ ಮುಖ್ಯ ಎಂದರು.

ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಪುರಸಭೆ ಸದಸ್ಯರು, ವಿವಿಧ ಠಾಣೆಯ ಪೋಲಿಸ್ ಅಧಿಕಾರಿಗಳು ಡಿ.ವೈ.ಎಸ್.ಪಿ, ಇತರರು ಉಪಸ್ಥಿತರಿದ್ದು ಉಚಿತವಾಗಿ ಹೆಲ್ಮೆಟ್ ವಿತರಿಸಿದರು.

LEAVE A REPLY

Please enter your comment!
Please enter your name here