ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಅಭ್ಯರ್ಥಿ ವಿನೋದ ಕರಣಂರವರು ನಾಮ ಪತ್ರ

0
307

ಬಳ್ಳಾರಿ ; ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮೇ 09 ರಂದು ನಡೆಯುವ ಚುನಾವಣೆಗೆ ಜಿಲ್ಲೆಯ ಪ್ರಥಮ ಮಹಿಳಾ ಅಭ್ಯರ್ಥಿ ವಿನೋದ ಕರಣಂರವರು ಬುಧವಾರ ತಾಲೂಕು ಕಚೇರಿಯಲ್ಲಿ ನಾಮ ಪತ್ರ ಸಲ್ಲಿಸಿದರು.

ನಂತರ ವಿನೋದ ಕರಣಂ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಕೆ ಮಾಡಿದ್ದೇನೆ, ಬಳ್ಳಾರಿ ಜಿಲ್ಲೆಯ ಪ್ರತಿಯೊಬ್ಬ ಕಸಾಪ ಅಜೀವ ಸದಸ್ಯರು ನನಗೆ ಮತ ನೀಡಿ ಬಹುಮತದಿಂದ ಗೆಲ್ಲುಸುತ್ತಾರೆ ಎಂಬ ನಂಬಿಕೆ ಅಚಲವಾಗಿದೆ. ೮೫ ವರ್ಷಗಳ ಇತಿಹಾಸವಿರುವ ಜಿಲ್ಲಾ ಕಸಾಪಗೆ ಇದುವರೆಗೂ ಮಹಿಳೆಯರಿಗೆ ಜಿಲ್ಲಾಧ್ಯಕ್ಷರಾಗುವ ಅವಕಾಶ ದೊರೆತಿಲ್ಲ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡದ ಸೇವೆ ಸಲ್ಲಿಸುವ ಆಸಕ್ತಿ ಹೊಂದಿದ್ದೇನೆ. ಸಾಹಿತ್ಯ ಸಮ್ಮೇಳನ ತರುವಲ್ಲಿ ಖಂಡಿತಾ ಯಶಸ್ವಿಯಾಗುತ್ತೇನೆ.ಈಗ ಮೊದಲ ಬಾರಿಗೆ ಮಹಿಳೆಯರಿಗೆ ಕನ್ನಡ ಮಾತೆಯ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಕಸಾಪ ಸದಸ್ಯರಲ್ಲಿ ಮನವಿ ಮಾಡಿದರು.

ಬೆಳಿಗ್ಗೆ ಶ್ರೀ ಕನಕ ದುರಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ತಾಲೂಕು ಕಚೇರಿಗೆ ಆಗಮಿಸಿ ಸಹಾಯಕ ಚುನಾವಣಾ ಅಧಿಕಾರಿ ಶಿವಲಿಂಗರೆಡ್ಡಿ ರವರಿಗೆ ನಾಮ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಎಂ.ಗಂಗಾಧರಯ್ಯ, ಡಾ. ಅರುಣಾ ಕಾಮನೇನಿ, ಭ್ರಮರಾಂಬ, ಸುಮಾರೆಡ್ಡಿ, ಪದ್ಮಾವತಿ, ಶೈಲಾ ಸುರೇಶ್, ಸಿ.ಎಂ.ಪೂರ್ಣಿಮಾ ಅಲುವೇಲು, ಕಮಲ ಬಸವರಾಜ್, ಗಾಯತ್ರಿ. ಭಾಗ್ಯಲಕ್ಷ್ಮಿ, ವಿದ್ಯಾ ರಾಮಚಂದ್ರ ರಾವ್, ಕುಮಾರ ಸ್ವಾಮಿ, ವಿ.ಬಾಬು, ವೀರಭದ್ರಯ್ಯ, ಜಂಬಯ್ಯ, ಬಸವರಾಜ್ ಬಳೆ, ರಾಮಪ್ರಸಾದ್, ವೈದ್ಯನಾಥ, ವಿರುಪಾಕ್ಷಯ್ಯ ಹಿರೇಮಠ, ಕೆ.ವೀರಭದ್ರಗೌಡ, ಜಿಎಸ್.ಮೃತ್ಯುಂಜಯ್ಯ, ಹಾಗೂ ಇತರರು ಇದ್ದರು‌.

LEAVE A REPLY

Please enter your comment!
Please enter your name here