ಬಿಸಿಯೂಟ ನೌಕರರ ಬಾಕಿಯಿರುವ ವೇತನ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

0
330

ಸಂಡೂರು:ಡಿ:16:-ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಹಾಗೂ ಸಿಐಟಿಯು ನಿಂದ ಬಿಸಿಯೂಟ ನೌಕರರಿಗೆ ಬಾಕಿಯಿರುವ ವೇತನವನ್ನು ಬಿಡುಗಡೆಗೆ ವಿಳಂಭ ಮಾಡುತ್ತಿರುವುದನ್ನು ಖಂಡಿಸಿ ಪಟ್ಟಣದ ಮುಖ್ಯರಸ್ತೆಯಿಂದ ಘೋಷಣೆಗಳನ್ನು ಕೂಗುತ್ತಾ ಬಂದು ಪ್ರತಿಭಟನೆಯನ್ನು ನಡೆಸಿದರು ನಂತರ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದುರುಗಪ್ಪ, ಹಾಗೂ ಅಕ್ಷರ ದಾಸೋಹ ಕಛೇರಿಯ ಶಂಕರ್ ಅವರುಗಳಿಗೆ ಮನವಿಪತ್ರವನ್ನು ನೀಡಿದರು

ರಾಜ್ಯದಲ್ಲಿ 47,250 ಅಡುಗೆ ಮುಖ್ಯ ಅಡುಗೆಯವರು ಮತ್ತು 71,336 ಅಡುಗೆ ಸಹಾಯಕಿಯರು ಸೇರಿ ಒಟ್ಟು 1,18,586 ಬಿಸಿಯೂಟ ಕಾರ್ಯಕರ್ತರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ, ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರು, ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿ ಕಳೆದ ಹದಿನೇಳು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಗೌರವ ಸಂಭಾವನೆ ಅಧಾರದಲ್ಲಿ ದುಡಿಯುತ್ತಿದ್ದಾರೆ 2022-23ರ ಬಜೆಟ್ ನಲ್ಲಿ ರೂ.1000 ಹೆಚ್ಚಿಸಿದರಿಂದ ಸದ್ಯ ಮುಖ್ಯ ಅಡುಗೆಯವರಿಗೆ ಗೌರವ ಧನ 2,700 ರೂ. ಗಳಿಂದ 3,700 ರೂ. ಸಹಾಯಕಿಯರ
ಗೌರವಧನ 2,600 ರೂ ಗಳಿಂದ 3,600 ರೂ ಗೆ ಏರಿಕೆಯಾಗಲಿದೆ ಆದರೆ ಪ್ರತಿ ತಿಂಗಳು ನೀಡುವುದಿಲ್ಲ.

ಬಿಸಿಯೂಟ ತಯಾರಕರು ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ಮಾಡುವುದು ಕಷ್ಟವಾಗಿದೆ. ಕನಿಷ್ಠ ವೇತನ ಸೇವಾ ನಿಯಮಗಳಿಗಾಗಿ ನಿರಂತರವಾಗಿ ಚಳುವಳಿ ಮಾಡುತ್ತಾ ಬಂದರೂ ಕನಿಷ್ಠ ವೇತನ ಮತ್ತು ಸೌಲಭ್ಯಗಳನ್ನು ಕೊಡದೇ ಸರ್ಕಾರ ನಿರ್ಲಕ್ಷ್ಯವಹಿಸಿದೆ.

ಕರ್ನಾಟಕ ಸರ್ಕಾರವು ಯಾವುದೇ ಪರಿಹಾರ ನೀಡದೇ 6,500 ಕಾರ್ಯಕರ್ತೆಯರನ್ನು ವಜಾ ಮಾಡಿದೆ. 60 ವರ್ಷ ವಯಸ್ಸಾಗಿದೆ ಎನ್ನುವುದನ್ನೇ ದೊಡ್ಡದು ಮಾಡಿ ಯಾವುದೇ ಪರಿಹಾರ, ನಿವೃತ್ತ ವೇತನಕ್ಕೆ ವ್ಯವಸ್ಥೆ ಮಾಡದೇ ಬೀದಿಗೆ ತಳ್ಳಲಾಗಿದೆ. ಕಾರ್ಯಕರ್ತೆಯರಿಗೆ ಕಡ್ಡಾಯ ನಿವೃತ್ತಿ ನಿರ್ಧಾರ ಜಾರಿಗೆ ತರುವ ಸರ್ಕಾರದ ತೀರ್ಮಾನದಿಂದ ಬಿಸಿಯೂಟ ಕಾರ್ಯಕರ್ತೆಯರ ಬದುಕು ಬಡವಾಗಿದೆ, ಕೆಲಸಕ್ಕೆ ಸೇರಿ ಹತ್ತಾರು ವರ್ಷಗಳಾಗಿದ್ದರೂ ಕೇವಲ ಗೌರವ ಧನವನ್ನಷ್ಟೇ ಪಡೆಯುತ್ತಿದ್ದ ಇವರಿಗೆ ನಿವೃತ್ತಿ ವೇತನ ಒದಗಿಸಲು ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಿವೃತ್ತರಾಗುವ ಬಿಸಿಯೂಟ ನೌಕರರಿಗೆ ಇಡಗಂಟು ಹಾಗೂ ಪಿಂಚಣಿಗೆ ವ್ಯವಸ್ಥೆ ಮಾಡಲು ಹಿಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಕ್ರಮ ಕೈಗೊಂಡಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 60 ಮತ್ತು ಶೇ 40ರ ಅನುಪಾತದಲ್ಲಿ ನಿವೃತ್ತರಿಗೆ ಇಡಗಂಟು ಒದಗಿಸುವ ಬಗ್ಗೆ ಚರ್ಚೆ ನಡೆದಿತ್ತು ಆದರೆ ನಂತರದ ದಿನಗಳಲ್ಲಿ ಇದು ಈಡೇರಲಿಲ್ಲ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು

ಈ ಸಂಧರ್ಭದಲ್ಲಿ ಬಿಸಿಯೂಟ ನೌಕರರ ತಾಲೂಕು ಅಧ್ಯಕ್ಷೆ ಹೆಚ್ ಆರ್ ರೇಖಾ, ಕಾರ್ಯದರ್ಶಿ ಎಂ ಬಿ ದ್ರಾಕ್ಷಾಯಿಣಿ ಹಾಗೂ
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಸ್ವಾಮಿ, ದೇವದಾಸಿ ಮಹಿಳೆಯರ ಅಧ್ಯಕ್ಷೆ ಹೆಚ್ ದುರುಗಮ್ಮ ಸೇರಿದಂತೆ ತಾಲೂಕಿನ ಬಿಸಿಯೂಟ ತಯಾರಕರು, ಇತರರು ಇದ್ದರು

ಬೇಡಿಕೆಗಳು:-
■ಬಿಸಿಯೂಟ ತಯಾರಕರಿಗೆ ಆಗಸ್ಟ್ ತಿಂಗಳಿಂದ ಬಾಕಿಯಿರುವ 5 ತಿಂಗಳ ವೇತನ ಕೂಡಲೇ ಬಿಡುಗಡೆಗೊಳಿಸಬೇಕು.
■ಬಿಸಿಯೂಟ ನೌಕರರಿಗೆ ನೀಡುವ ಕಿರುಕುಳ ನಿಲ್ಲಿಸಬೇಕು, ಕಾನೂನು ಬಾಹಿರವಾಗಿ ವರ್ಷಕ್ಕೊಮ್ಮೆ ನೌಕರರನ್ನು ವಜಾಗೊಳಿಸುವುದು ನಿಲ್ಲಿಸಬೇಕು. ಅಡುಗೆಯ ಸಿಬ್ಬಂದಿಯ ಮೂಲಕ ಕಸ ಗುಡಿಸುವುದು, ಸಪಾಯಿ ಹಾಗೂ ಇತರೆ ಹೆಚ್ಚುವರಿಯ ಕೆಲಸ ಮಾಡಿಸುವುದನ್ನು ತಡೆಯಬೇಕು. ಹೆಚ್ಚುವರಿಯ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು
■ತೋರಣಗಲ್ಲು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಅಡುಗೆಯವರಾದ ರೇಖಾರವರನ್ನು ಕೆಲಸಕ್ಕೆ ಹಾಜರಿ ಮಾಡಿಸಬೇಕು. ಬೊಮ್ಮಗಟ್ಟ,ತುಂಬರಗುದ್ದಿ ಮುಂತಾದ ಶಾಲೆಗಳಲ್ಲಿ ಅಡುಗೆಯವರನ್ನು ಕೆಲಸ ಮುಂದುವರಿಸಬೇಕು
■60 ವರ್ಷ ತುಂಬಿದ 6 ಸಾವಿರ ಬಿಸಿಯೂಟ ಕಾರ್ಯಕರ್ತೆಯರನ್ನು ಯಾವುದೇ ಪರಿಹಾರ ಕೊಡದೇ ಸರ್ಕಾರ ವಜಾ ಮಾಡಿದೆ ಸೇವೆಯಿಂದ ವಿಮುಕ್ತಿಗೊಳಿಸಿದ ಇವರಿಗೆ ಕನಿಷ್ಠ 30,000 ಸಾವಿರ ಇಡಗಂಟು ಹಾಗೂ 3.000 ಸಾವಿರ ಮಾಸಿಕ ಪಿಂಚಣಿ ನೀಡಬೇಕು

LEAVE A REPLY

Please enter your comment!
Please enter your name here