ಶಿಷ್ಟಾಚಾರ ಪಾಲನೆ ಮಾಡದೆ ತಾಳೂರು ಗ್ರಾಮ ಪಂಚಾಯಿತಿಯಲ್ಲಿ ಪತ್ನಿ ಅಧ್ಯಕ್ಷರಾದರೆ ಅಧಿಕಾರ ಮಾತ್ರ ಪತಿಯದ್ದು,ಇಂತಹ ಭ್ರಷ್ಟರಿಗೆ ಕೊನೆ ಯಾವಾಗ…???

0
302

ಅಂಗನವಾಡಿ ಕಟ್ಟಡ ಉದ್ಘಾಟನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿಯಿಂದ ಉದ್ಘಾಟನೆ. ಸಂಡೂರು ತಾಲೂಕಿನ ತಾಳೂರು ಗ್ರಾಮ ಪಂಚಾಯತಿ ಅದ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆ ಸ್ಥಾನಕ್ಕೆ ಮೀಸಲಾತಿ ಬಂದಿದ್ದು ಜೋಗ ಗ್ರಾಮದಿಂದ ಆಯ್ಕೆಯಾಗಿರುವ ಸದಸ್ಯೆ ಶ್ರೀಮತಿ ಅನಿತಾ ರವರನ್ನು ಅಧ್ಯಕ್ಷರಾಗಿದ್ದಾರೆ.
ಗ್ರಾಮ ಪಂಚಾಯತಿ ಅದ್ಯಕ್ಷೆಯಾಗಿನಿಂದ ಅದ್ಯಕ್ಷೆಯ ಗಂಡ ಹನುಮಂತ ಅಧಿಕಾರ ಚಲಾವಣೆ ನಡೆಸುತ್ತಿದ್ದಾರೆ.

ಗ್ರಾಮ ಪಂಚಾಯತಿ ಅದ್ಯಕ್ಷಸ್ಥಾನದಿಂದ ಪಂಚಾಯಿತಿಯ ದಿನ ನಿತ್ಯದ ಕಾರ್ಯಗಳಲ್ಲಿ ಮೂಗು ತೋರಿಸುತ್ತಾರೆ. ಸರ್ಕಾರದ ಕಾರ್ಯಕ್ರಮಗಳನ್ನು ಇವರೇ ಅದ್ಯಕ್ಷರ ಪರವಾಗಿ ಪಾಲ್ಗೊಳ್ಳುತ್ತಾರೆ.
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ, ಯಾವುದೇ ಕೋವಿಡ್ ಮಾರ್ಗಸೂಚಿ ಪಾಲಿಸದೇ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಉದ್ಘಾಟನೆ ಮಾಡಿದ್ದಾರೆ. ತಾಳೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಟ್ಟಡವನ್ನು ಅದ್ಯಕ್ಷೆಯ ಪತಿ ಹನುಮಂತ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನಾ ಸಮಾರಂಭ ಮಾಡಿದ್ದಾರೆ.

ಸರ್ಕಾರದ ಅಧಿಕಾರಿಗಳು, ಗ್ರಾಮ ಪಂಚಾಯತಿ ಏರ್ಪಾಡಿಸಿರುವ ಈ ಕಾರ್ಯಕ್ರಮದಲ್ಲಿ ಸದಸ್ಯರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಕೆಲಸ ಕೇಳಿದರೆ ಕೋವಿಡ್ ನೆಪ ಹೇಳಿ ಕೆಲಸ ನೀಡಲು ನಿರಾಕರಿಸಿದ ಗ್ರಾಮ ಪಂಚಾಯಿತಿ ನಿಯಮ ಬಾಹಿರವಾಗಿ ಉದ್ಘಾಟನೆ ಮಾಡಿಸಿದೆ. ಪಂಚಾಯತ್ ಸದಸ್ಯರು, ಅಧಿಕಾರಿಗಳು ಸಮ್ಮುಖದಲ್ಲಿ, ತಾಲೂಕು ಆಡಳಿತ, ಮಹಿಳಾ ಮತ್ತು. ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದಾರೆ. ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ನಿರ್ಲಕ್ಷ್ಯತೆ ಮಾಡಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ, ತಾಳೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಟ್ಟಡವನ್ನು ಸಾಮಾನ್ಯ ವ್ಯಕ್ತಿ ಆಗಮಿಸಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನಾ ಸಮಾರಂಭ ಏರ್ಪಾಡಗಿರುವುದು ಎಷ್ಟು ಸರಿ, ಅದು ಗ್ರಾಮ. ಪಂಚಾಯಿತಿ
ಪಿ.ಡಿ.ಓ.ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿ..? ತಾಲೂಕು ಆಡಳಿತ, ಮಹಿಳಾ ಮತ್ತು. ಮಕ್ಕಳ ಅಭಿವೃದ್ಧಿ ಇಲಾಖೆ ನಿದ್ದೆಗೆ ಜಾರಿದೆಯೇ?

ನಮ್ಮ ಒಂದು ರಾಜ್ಯದಲ್ಲಿ ಹಲವಾರು ಗ್ರಾಮಪಂಚಾಯಿತಿಗಳಲ್ಲಿ ಇದೆ ಗೋಳು, ಇಂತಹ ಭ್ರಷ್ಟ ರಾಜಕೀಯವನ್ನು ಮಾಡಲು ಯಾವ ಒಂದು ಕಾನೂನಿನಲ್ಲಿದೆ ಎಂಬುದು ಮಾತ್ರ ಹಲವು ಗ್ರಾಮಗಳ ಕೆಲವು ಗ್ರಾಮಸ್ಥರಿಗೆ ಇಂದಿಗೂ ಸಹ ತಿಳಿಯದಾಗಿದೆ.

ನೋಡಿ ಯಾವುದೇ ಗ್ರಾಮಪಂಚಾಯಿತಿಯಾಗಲಿ, ತಾಲೂಕು ಪಂಚಾಯತಿಯಾಗಲಿ, ಅಥವಾ,MLA, MP, ಯಾವವೊಂದು ರಾಜಕೀಯದಲ್ಲಿ ಇಂತಹ ಒಂದು ಅದಿಕಾರದ ದುರುಪಯೋಗ ಕಂಡುಬಂದಲ್ಲಿ ನೇರವಾಗಿ ಸಾರ್ವಜನಿಕರು ನ್ಯಾಯಲಯದ ಮೊರೆ ಹೋಗಬಹುದು, ಯಾಕೆಂದರೆ ನಮ್ಮ ಒಂದು ಕಾನೂನಿನ ಉಲ್ಲೇಖದಲ್ಲಿ, ಚುನಾವಣೆಯಲ್ಲಿ ಯಾವೊಬ್ಬ ಚುನಾಯಿತ ಪ್ರತಿನಿಧಿ ಚುನಾವಣೆಯನ್ನು ಎದುರಿಸಿ ಗೆಲುವನ್ನು ಸಾದಿಸಿದ ವ್ಯಕ್ತಿ ಮಾತ್ರ ಅಧಿಕಾರ ಮಾಡಬೇಕೆ ಹೊರೆತು, ಪತಿ ಗೆದ್ದರೆ, ಪತ್ನಿ ಅಧಿಕಾರ ಮಾಡುವುದು, ಅಮ್ಮ ಗೆದ್ದರೆ ಮಗ, ಅಥವಾ ಮನೆಯವರೆಲ್ಲ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದು, ಕಾನೂನು ಬಾಹಿರ ಕೆಲಸ ಇಂತವರ ವಿರುದ್ಧ ನೇರವಾಗಿ, ದೂರು ದಾಖಲಿಸಿ ನ್ಯಾಯಾಲಯದ ಮೊರೆ ಹೋಗಿ ಅಂತವರಿಗೆ, ಬಂದಿಕಾನೆಯ ದಾರಿಯನ್ನು ಸುಲಭವಾಗಿ ತೋರಿಸಬಹುದು, ಹೇಗಿದೆ ನೋಡಿ ನಮ್ಮ ರಾಜ್ಯದಲ್ಲಿ ರಾಜಕೀಯವೆಂಬ ಭ್ರಷ್ಟಾಚಾರ ಇಂತವರಿಗೆಲ್ಲ ಕೊನೆ ಯಾವಾಗ..???

ನಮಗೂ ಕಟ್ಟಡ ನೀಡಿ ನಾವೂ ಸಹ ಕತ್ತರಿ ಹಿಡಿದು ಬರುತ್ತೇವೆ ರಿಬ್ಬನ್ ಕಟ್ ಮಾಡಲು…

LEAVE A REPLY

Please enter your comment!
Please enter your name here