ಉಪಸಮಿತಿಗಳ ಪೂರ್ವ ಸಿದ್ಧತಾ ಪರಿಶೀಲನಾ ಸಭೆ;ಅಧಿಕಾರಿಗಳಿಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ: ಡಿಸಿ ಮಾಲಪಾಟಿ

0
79

ಬಳ್ಳಾರಿ,ಜ.07: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬಳ್ಳಾರಿ ಉತ್ಸವ ನಡೆಯುತ್ತಿದ್ದು, ಕೆಲವೇ ದಿನಗಳು ಬಾಕಿಯಿದೆ. ವಿವಿಧ ಉಪ ಸಮಿತಿಗಳಿಗೆ ವಹಿಸಿದ ಕೆಲಸಗಳನ್ನು ಚುರುಕುಗೊಳಿಸುವಂತೆ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಎಲ್ಲಾ ಉಪ ಸಮಿತಿಯ ಪದಾಧಿಕಾರಿಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದರು.

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಉತ್ಸವದ ಉಪಸಮಿತಿಗಳ ಪೂರ್ವ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಮುಖ್ಯಮಂತ್ರಿಗಳು ಜ.04ರಂದು ಬಳ್ಳಾರಿ ಉತ್ಸವದ ಲಾಂಛನವನ್ನು ಬಿಡುಗಡೆ ಮಾಡಿರುತ್ತಾರೆ. ಉತ್ಸವದ ಆಹ್ವಾನ ಪತ್ರಿಕೆಗಳು, ವೇದಿಕೆ ನಿರ್ಮಾಣ, ವಸ್ತು ಪ್ರದರ್ಶನ ಮಳಿಗೆಗಳು, ಸಾರಿಗೆ ವ್ಯವಸ್ಥೆ, ಬರುವ ಗಣ್ಯ ವ್ಯಕ್ತಿಗಳಿಗೆ ವಸತಿ ಸೌಲಭ್ಯ, ಪ್ರಚಾರ ಸೇರಿದಂತೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳ್ಳಾರಿ ಉತ್ಸವ ಕುರಿತು ಎರಡು ನಿಮಿಷಗಳ ಅಡಿಯೋ ಕ್ಲಿಪ್ಪಿಂಗ್ಸ್‍ನ್ನು ಮಹಾನಗರ ಪಾಲಿಕೆ ಸ್ವಚ್ಛತಾ ವಾಹನಗಳಿಗೆ ಆಳವಡಿಸಬೇಕು. ಈ ಕುರಿತು ಹೆಚ್ಚಿನ ರೀತಿಯಲ್ಲಿ ಪ್ರಚಾರ ಕೈಗೊಳ್ಳಬೇಕು. ಅದರಂತೆ ಕೆಕೆಆರ್‍ಟಿಸಿ ಬಸ್‍ಗಳಿಗೆ, ಆಟೋಗಳಿಗೆ ಹಿಂಬದಿಯಲ್ಲಿ ಬಳ್ಳಾರಿ ಉತ್ಸವದ ಸ್ಟೀಕರ್ ರೂಪದ ಪೋಸ್ಟರ್‍ಗಳು. ನಗರದಲ್ಲಿರುವ ಗ್ಯಾಂಟ್ರೀಸ್ ಫಲಕಗಳಿಗೆ ಬಳ್ಳಾರಿ ಉತ್ಸವದ ಬ್ಯಾನರ್‍ಗಳನ್ನು ಆಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಉತ್ಸವಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕಲಾವಿದರಿಗೆ ವಸತಿ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ವೇದಿಕೆ ನಿರ್ಮಾಣ ಹತ್ತಿರ ಅಂಬುಲೆನ್ಸ್, ಕ್ಲಿನಿಕ್, ಹೆಲ್ಪ್‍ಲೈನ್, ಅಗ್ನಿಶಾಮಕ ದಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಜಿ.ಲಿಂಗಮೂರ್ತಿ, ಎಡಿಸಿ ಪಿ.ಎಸ್.ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.

LEAVE A REPLY

Please enter your comment!
Please enter your name here