ವಿಜೃಂಭಣೆಯಿಂದ ಜರುಗಿದ ಬನಶಂಕರಿ ದೇವಿ ರಥೋತ್ಸವ

0
167

ಕೊಟ್ಟೂರು: ಪಟ್ಟಣದ ಕೌಲುಪೇಟೆಯ ಶ್ರೀ ಬನಶಂಕರಿ ದೇವಿಯ ರಥೋತ್ಸವ ಶುಕ್ರವಾರ ಸಂಜೆ ಗೋದೋಳಿ ಸಮಯದಲ್ಲಿ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ಶ್ರೀ ಬನಶಂಕರಿ ದೇವಿಯ ರಥೋತ್ಸವವು ಜರುಗಿತು.

ಶ್ರೀ ಬನಶಂಕರಿ ದೇವಿಯ ಮೂರನೇ ರಥೋತ್ಸವ ಇದ್ದಾಗಿದ್ದು ರಥದಲ್ಲಿ ದೇವಿಯ ಮೂರ್ತಿಗೆ ಬೆಳಗಿನಿಯಿಂದ ವಿವಿಧ ಬಗೆಯ ಪುಷ್ಪ ಹೂಗಳಿಂದ ಮೂಲಕ ಅಲಂಕರಿಸಿ ವಿಶೇಷ ಪೂಜೆ ನಡೆಸಲಾಯಿತು. ನಂತರ ದೇವಸ್ಥಾನ ವತಿಯಿಂದ ಮಹಾ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು . ಸಂಜೆ ಹೊತ್ತಿಗೆ ಶ್ರೀ ಬನಶಂಕರಿ ದೇವಿಯ ಉತ್ಸವ ಅಲಂಕರಿಸಲಾದ ರಥದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವ ನಡೆಯುವ ಮುಂಚೆ ದೇವಿಯ ಪಟಾಕ್ಷಿಯನ್ನು ಹರಾಜು ಕೂಗಲಾಯಿತು ಪಟಾಕ್ಷಿ ಹರಾಜು ಮೈದುರ್ ಕೊಟ್ರೇಶ್ ₹ 91,000 ಗಳಿಗೆ ಕೂಗಿಸಿಕೊಂಡು ತಮ್ಮದಾಗಿಸಿಕೊಂಡರು. ನಂತರ ರಥೋತ್ಸವವು ಸಮಾಳ, ನಂದಿಕೋಲು ಕುಣಿತದ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವೈಭವದಿಂದ ರಥೋತ್ಸವ ಕೌಲುಪೇಟೆಯಿಂದ ರಾಜ್ಯಗಂಭೀರದೊಂದಿಗೆ ಸಾಗಿ ಜವಳಿ ಸರ್ಕಲ್, ವಿಠಲ ದೇವಸ್ಥಾನದ ಮುಂಭಾಗದ ಮೂಲಕ ರೇಣುಕಾಚಾರ್ಯ ದೇವಸ್ಥಾನ ವರೆಗೂ ಸಾಗಿ ಪುಣ ಬನಶಂಕರಿ ದೇವಿಯ ದೇವಸ್ಥಾನಕ್ಕೆ ಮರಳಿ ಸಂಜೆ ಆರು ಮೂವತ್ತಕ್ಕೆ ವೇಳೆಗೆ ನಿಲುಗಡೆ ಗೊಂಡಿತು. ದೇವಿಯ ರಥೋತ್ಸವಕ್ಕೆ ಭಕ್ತಾದಿಗಳು ಬಾಳೆಹಣ್ಣು ಉತ್ತತ್ತಿ ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here