26 ನೇ ರಾಷ್ಟ್ರೀಯ ಯುವಜನೋತ್ಸವ- 2023 : 3ನೇ ದಿನದ ಯುವ ಶೃಂಗಸಭೆ ಭವಿಷ್ಯತ್ತಿಗಾಗಿ ಉದ್ಯಮ ಮತ್ತು ಅನ್ವೇಷಣೆ-ಅನಿಮೇಷನ್ ಕ್ಷೇತ್ರದಲ್ಲಿ ಅಧಿಕ ಉದ್ಯೋಗ ಅವಕಾಶಗಳು

0
40

ಧಾರವಾಡ : ಜ.14: ಆಸಕ್ತಿ, ಕುತೂಹಲ, ಸೃಜನಶೀಲತೆಯ ಅನಿಮೇಷನ್ ಕ್ಷೇತ್ರಕ್ಕೆ ಬಹಳ ಮುಖ್ಯ, ಅನಿಮೇಷನ್ ಒಂದು ಅಧಿಕ ಉದ್ಯೋಗ ಅವಕಾಶಗಳನ್ನು ಒದಗಿಸುವ ಒಂದು ಉದ್ಯಮವಾಗಿದೆ ಎಂದು ಹುಬ್ಬಳ್ಳಿಯ ಮೌಂಟೇನ್ ಫ್ಲವರ್ ಅನಿಮೇಷನ್ ಕಂಪನಿ ನಿರ್ದೇಶಕ ರಜತ ದಿವಟೆ ಅಭಿಪ್ರಾಯಪಟ್ಟರು.

ಅವರು ನಗರದ ಕೃಷಿ ವಿಶ್ವವಿದ್ಯಾಲಯ ಸಭಾಗಂಣದಲ್ಲಿ 26 ಅಖಿಲ ಭಾರತ ಯುವಜನೋತ್ಸವದ ಅಂಗವಾಗಿ ಭವಿಷ್ಯತ್ತಿಗಾಗಿ ಉದ್ಯಮ ಮತ್ತು ಅನ್ವೇಷಣೆ ಎಂಬ ವಿಷಯದ ಕುರಿತು ಆಯೋಜಿಸಿದ ಯುವ ಶೃಂಗ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದು ಹತ್ತನೆ ತರಗತಿ ವಿದ್ಯಾರ್ಥಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಹೊಂದಿದ ವಿದ್ಯಾರ್ಥಿಗಳು ಅನಿಮೇಷನ್ ಕಲಿಯಬಹುದು. ಕಥೆ ಹೇಳುವ ರೀತಿಯಲ್ಲಿ ಭಿನ್ನತೆ ಇರಬೇಕು. ಇಂದು ಡಿಜಿಟಲ್ ಯುಗ ಆಗಿದ್ದರಿಂದ ವೀಕ್ಷಕನಲ್ಲಿ ಕುತೂಹಲ ಕೆರಳಿಸುವ ಅಂಶಗಳನ್ನು ದೃಶ್ಯಗಳನ್ನು ಒಳಗೊಂಡಿರಬೇಕು .ಅನಿಮೇಷನ್ ಕ್ಷೇತ್ರದಲ್ಲಿ ದೃಶ್ಯ ನಿರೂಪಣೆ ಬಹಳ ಮುಖ್ಯವಾಗಿದೆ. ಪ್ರಸ್ತುತ ಮನರಂಜನಾ ಉದ್ಯಮದಲ್ಲಿ ಸೇರಿದಂತೆ ಟೆಲಿವಿಷನ್ ಗೆಮಿಂಗ್ ಉದ್ಯಮದಲ್ಲಿ ಅಗಾಧವಾಗಿ ಉದ್ಯೋಗ ಅವಕಾಶಗಳಿವೆ ಎಂದ ಅವರು ಸೃಜನಶೀಲತೆ,ಕಲೆ ಹೊಂದಿದವರು ಮನೆಯಲ್ಲಿ ಕುಳಿತು ಕೆಲಸ ಮಾಡವ ಅವಕಾಶ ಅನಿಮೇಷನ್ ಕ್ಷೇತ್ರ ಹೊಂದಿದೆ.

ಹೆಸರಾಂತ ಅನಿಮೇಷನ್ ಚಲನಚಿತ್ರ ಛೋಟಾ ಭೀಮ್ ಹುಬ್ಬಳ್ಳಿ ಮೌಂಟೇನ್ ಪ್ಲವರ್ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಲಾಗಿದೆ. ಅತಿದೊಡ್ಡ ಬಜೆಟ್ ಚಲನ ಚಿತ್ರಗಳಲ್ಲಿ ಅನಿಮೇಷನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಯಶಸ್ವಿಯಾಗಿವೆ ಎಂದರು. ಪ್ರಸ್ತುತ ಎರಡನೇ ಹಂತದ ನಗರಗಳಲ್ಲಿ ಅನಿಮೇಷನ್ ಮತ್ತು ಕೃತಕ ಬುದ್ಧಿಮತ್ತೆ ಅಂತಹ ಉದ್ಯಮಗಳು ಹುಟ್ಟಿಕೊಳ್ಳುತ್ತಿವೆ ಎಂದರು. ವೈದ್ಯಕೀಯ, ಕಟ್ಟಡ, ಮನರಂಜನೆ ಮತ್ತು ಟೇಲಿವಿಷನ್ ಕ್ಷೇತ್ರದಲ್ಲಿ ಅನಿಮೇಷನ್ ತಂತ್ರಾಂಶವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ. ಅನಿಮೇಷನ್ ಕುರಿತು ವಿಶೇಷ ತರಬೇತಿ ಪಡಯುವದು ಅವಶ್ಯಕ ಎಂದರು.

ಹುಬ್ಬಳ್ಳಿಯ ಆಸ್ಟರ್ ಡಿಫೆನ್ ಕಂಪನಿಯ ಸಿಇಒ ಅಂಕುಶ ಕೊರವಿ ಮಾತನಾಡಿ ಪ್ರಸ್ತುತ ಉದ್ಯಮಕ್ಕೆ ಅನುಗುಣವಾಗಿ ಉದ್ಯಮ ರೂಪರೇಶೆಯನ್ನು ಮಾಡಬೇಕು. ನನ್ನ ಅನುಭವದಲ್ಲಿ ಒಬ್ಬ ಇಂಜಿನಿಯರ್ ಆಗಿ ರಕ್ಷಣಾ ವಲಯಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿ ಗೊಳಿಸುವದು ನನ್ನ ಉದ್ದೇಶವಾಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡ ಅವರು ಪೆÇೀಲೀಸ್ ಮತ್ತ ಭಾರತೀಯ ರಕ್ಷಣಾ ಆಯುಧಗಳನ್ನು ವಿನ್ಯಾಸ ಮಾಡಿ ಒದಗಿಸುವದಾಗಿದೆ. ಹಲವಾರು ಪ್ರದರ್ಶನಗಳನ್ನು ನಮ್ಮ ಕಂಪನಿ ರೈಫಲ್ಸ್, ವಿವಿಧ ಆಯುಧಗಳನ್ನು ಪ್ರದರ್ಶಸಿಲಾಗಿದ್ದು ಹೆಚ್ಚು ಅವಕಾಶ ದೊರೆಯಲು ಸಾಧ್ಯವಾಯಿತು ಎಂದ ಅವರು ವಿದ್ಯಾರ್ಥಿ ದೆಸೆಯೆಲ್ಲಿ ಇದ್ದಾಗ ನಾನು ನನ್ನ ಒಂದು ಸಣ್ಣ ನಿರ್ಧಾರದಿಂದ ನನ್ನ ಕಂಪನಿ ದೊಡ್ಡದಾಗಿ ಬೆಳದಿದೆ ಎಂದರು. ಇಂದಿನ ಯುವ ಸಮುದಾಯವು ಏನನ್ನು ಮಾಡಬೇಕು ? ಹೇಗೆ ಉದ್ಯಮ ರೂಪಿಸುವಲ್ಲಿ ಪೂರ್ವ ಯೋಜನೆ ಅಗತ್ಯ ಎಂದರು. ನಿರ್ದಿಷ್ಟ ಗುರಿಯೊಂದಿಗೆ ಉದ್ಯಮ ಮವನ್ನು ರೂಪಿಸಬಹುದು ಎಂದರು.

ತುಮಕೂರ ವಿವಿಯ ಪ್ರಾಧ್ಯಾಪಕಿ ಮಂಗಳ ಗೌರಿ ಮಾತನಾಡಿ ಇಂದು ತಂತ್ರಜ್ಞಾನ ಮತ್ತು ತಂತ್ರಾಂಶಗಳ ಯುಗವಾಗಿದ್ದು, ಇಂದಿನ ಯುವ ಸಮುದಾಯವು ತಂತ್ರಜ್ಞಾನ ಕಲಿಕೆ ಮತ್ತು ಅರಿವು ಹೊಂದುವುದು ಅವಶ್ಯಕತೆ ಇದೆ, ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಇಂದು ತಂತ್ರಜ್ಞಾನದ ಅರಿವು ಹೊಂದುವದು ಅತಿ ಅವಶ್ಯಕ. ಇಂದು ಏಕಮುಖವಾಗಿಲ್ಲ ಅದು ವಿಭಿನ್ನವಾದ ಕ್ಷೇತ್ರದಲ್ಲಿ ಭಿನ್ನವಾಗಿದ್ದು ಹೊಸತನ ಕೂಡಿದೆ ಆದ್ದರಿಂದ ಇಂದು ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತವಾಗಿದ್ದು ಉದ್ಯಮ ಮತ್ತು ಕೌಶಲ್ಯ ಆಧಾರಿತ ಶಿಕ್ಷಣವಾಗಿದೆ ಎಂದ ಅವರು ಅನೇಕ ಕೈಗಾರಿಕಾ ಕ್ರಾಂತಿಯ ಮೂಲಕ ವಿವಿಧ ವರ್ಷದಲ್ಲಿ ತಂತ್ರಜ್ಞಾನ ಅನ್ವೇಷಣೆ ಬೇಳೆಯುತ್ತ ಹೋಗಿದೆ ಎಂದ ಅವರು ಕೈಗಾರಿಕಾ ಮತ್ತು ತಯಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಹೊಂದಿದೆ ಎಂದ ಅವರು ಇಂದು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಗಾಧವಾದ ಕೌಶಲಗಳನ್ನು ಹೊಂದಿದ್ದು ಇಂದಿನ ಯುವ ಜನರಿಗೆ ಕೌಶಲಗಳನ್ನು ಕಲಿಯಲು ಸಿದ್ದರಾಗಬೇಕು ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಣಿತ ನವೋದ್ಯಮಗಳ ಜೊತೆಗೆ ಸಂವಾದ ನಡೆಸಿದರು

ಸಮನ್ವಯಕಾರ ಯುನಡಿಪಿ ಪೆÇ್ರಜೆಕ್ಟ್ ಮ್ಯಾನೇಜರ್ ಮುಕುಂದ ರಾಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಪ್ರಾಂತೀಯ ಅಧಿಕಾರಿ ಡಾ.ವಾಯ್. ಎಸ್ ಉಪ್ಪಿನ ಸೇರಿದಂತೆ ಎನ್.ಎಸ್.ಎಸ್ ಮತ್ತು ನೆಹರು ಯುವ ಕೇಂದ್ರದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here