ಯೋಗಥಾನ್ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ.

0
41

ಜಿಲ್ಲೆಯಲ್ಲಿ ಜನವರಿ 15 ರಂದು ಬೆಳಿಗ್ಗೆ 7 ಗಂಟೆಗೆ ಪಿ.ಇ.ಎಸ್ ಕ್ರಿಕೆಟ್ ಮೈದಾನದಲ್ಲಿ ಯೋಗಥಾನ್ ನಡೆಯಲಿದ್ದು, ಅಂತಿಮ ದಿನದ ಪೂರ್ವಭ್ಯಾಸ ಹಾಗೂ ಸಿದ್ಧತೆಗಳನ್ನು ಇಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು ಪರಿಶೀಲಿಸಿದರು.

ಯೋಗಥಾನ್ ಎರಡನೇ ದಿನದ ಪೂರ್ವಭ್ಯಾಸ ಯಶಸ್ವಿಯಾಗಿ ನಡೆದಿದೆ. ಮಂಡ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ನೋಂದಣಿಯಾಗಿದ್ದು ಎಲ್ಲರೂ ಭಾಗವಹಿಸಿ ಎಂದರು.

ಮಂಡ್ಯ ಜಿಲ್ಲೆಯ ಜನರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ. ಜೀವನದಲ್ಲಿ ಯಾವಗಾಲು ಶಿಸ್ತು ಇರಬೇಕು ಅದಕ್ಕಾಗಿ ನಾವೂ ಯುವಕರನ್ನು ಅಯ್ಕೆಮಾಡಿ ಯೋಗಥಾನ್ ಮಾಡುತ್ತಿದ್ದೇವೆ ಎಂದರು.

ಈ ಯೋಗಾಥಾನ್ ಕಾರ್ಯಕ್ರಮ ಯಶಸ್ವಿಗೆ ಮಂಡ್ಯ ಜನರ ಸಹಕಾರ ಮುಖ್ಯ, ಅದಕ್ಕಾಗಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ತಿಳಿಸಿದರು.

ಆಯುಷ್ ಟಿವಿ ವತಿಯಿಂದ ನಾಳೆ ಯೋಗಥಾನ್ ನ ಸಂಪೂರ್ಣ ರೆಕಾರ್ಡ್ ನಡೆಯಲಿದೆ. ಅದನ್ನು ನೋಡಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಟೀಂ ನವರು ಆಯ್ಕೆಗೆ ನಿರ್ಧಾರ ಮಾಡುತ್ತಾರೆ ಎಂದರು.

4500 ಜನಕ್ಕೂ ಹೆಚ್ಚು ಮಂದಿ ಭಾಗಿ: ಇಂದು ಪಿ.ಇ.ಟಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪೂರ್ವಭ್ಯಾಸದಲ್ಲಿ 4500 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ವಿದ್ಯಾರ್ಥಿಗಳು, ಯೋಗ ಸಂಸ್ಥೆಯ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

ನೊಂದಣಿ ಕಡ್ಡಾಯ: ನಾಳೆ ಬೆಳಿಗ್ಗೆ5:30 ರಿಂದ ಎಂಟ್ರಿ ಗೇಟ್ ತೆರೆಯಲಿದೆ, 15 ಸ್ಕ್ಯಾನಿಂಗ ಗೇಟ್ ಗಳು ಇರಲಿವೆ.‌ ಯಾರೆಲ್ಲಾ ರಿಜಿಸ್ಟರ್ ಆಗಿದ್ದಾರೆ, ಅವರೆಲ್ಲಾ ಸ್ಕ್ಯಾನ್ ಆದ ನಂತರ ಒಳಗಡೆ ಬರಬೇಕಾಗುತ್ತದೆ. ಯೋಗಾಥಾನ್ ಅಭ್ಯರ್ಥಿಗಳು ಬಿಳಿ ಬಣ್ಣದ ಟೀ ಶರ್ಟ್ ಧರಿಸಬೇಕು. 7:30 ಅಷ್ಟರಲ್ಲಿ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ತಮಗೆ ನಿಗದಿ ಪಡಿಸಿರುವ ಸ್ಥಳದಲ್ಲಿ ಇರಬೇಕು. 7:45 ಕ್ಕೆ ಗಣ್ಯರ ಆಗಮಿಸಲಿದ್ದಾರೆ. 8 ಗಂಟೆಗೆ ಕ ನಾಡಗೀತೆ ಮೂಲಕ ಕಾರ್ಯಕ್ರಮ ಚಾಲನೆಯಾಗಲಿದೆ, 8:18 ರಿಂದ 9:03 ನಿಮಿಷದ ವರೆಗೆ ಏಕಕಾಲದಲ್ಲಿ ಯೋಗಥಾನ್ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಶಾಲೆ/ ಕಾಲೇಜಿಗೆ ಬಹುಮಾನ ನೀಡಲಾಗುವುದು.
9:25 ಕ್ಕೆ ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಗಲಿದೆ.

ಪೂರ್ವಭ್ಯಾಸದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಜಿ, ತೋಟಗಾರಿಕೆ ಅಧಿಕಾರಿ ಮಂಜುನಾಥ್ , ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ, ಹಿರಿಯ ಯೋಗ ಶಿಕ್ಷಕರಾದ ಶಂಕರನಾರಾಯಣ ಶಾಸ್ತ್ರಿ, ಪ್ರಜ್ವಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here