ಪೃಥ್ವಿಯನ್ನು ಉತ್ತಮ ಆರೋಗ್ಯಕರವಾಗಿಸಲು ಸರ್ವರೂ ಕೈಜೋಡಿಸಬೇಕಿದೆ;ಡಾ. ಗೋಪಾಲ್ ರಾವ್

0
655

ಸಂಡೂರು: ಎ:7: ಪೃಥ್ವಿಯನ್ನು ಉತ್ತಮ ಆರೋಗ್ಯಕರವಾಗಿಸಲು ಸರ್ವರೂ ಕೈಜೋಡಿಸಬೇಕಿದೆ,ಎಂದು ಡಾ.ಗೋಪಾಲ್ ರಾವ್ ಕರೆ ನೀಡಿದರು.

ತಾಲೂಕಿನ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ “ವಿಶ್ವ ಆರೋಗ್ಯ ದಿನಾಚರಣೆ-2022” ಆಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ.ಗೋಪಾಲ್ ರಾವ್ ಅವರು, ಭೂಮಿ ಕಲುಷಿತ ವಾತಾವರಣವಿದ್ದು ಮಾನವನು ಆರೋಗ್ಯ ದಿಂದ ಇರಲು ಉತ್ತಮ ಗಾಳಿ, ಶುದ್ಧ ನೀರು, ಉತ್ತಮ ಪೌಷ್ಟಿಕ ಆಹಾರ ಅವಶ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ವಿಪರೀತ ನಗರಿಕರಣ, ಕೈಗಾರಿಕೀಕರಣ, ವಾಹನ ದಟ್ಟಣೆ, ಕಲುಷಿತ ವಾತಾವರಣ ಕಲುಷಿತ ನೀರು, ಎಲ್ಲಂದರಲ್ಲಿ ತ್ಯಾಜ್ಯ, ರಾಸಾಯನಿಕ ಮಯ ಇರುವಂತಹ ಕಲುಷಿತ ವಾತಾವರಣ ಇರುವುದರಿಂದ ಹಾಗೂ ಬ್ಯಾಕ್ಟೀರಿಯಾ ಮತ್ತು ಕೊರೋನಾದಂತಹ ವೈರಸ್ ಗಳು ಆರೋಗ್ಯವನ್ನು ಹಾಳು ಮಾಡುತ್ತಿವೆ, ಜಗತ್ತಿನ ಎಲ್ಲಾ ಸಂಘ ಸಂಸ್ಥೆಗಳು ಉತ್ತಮ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಬೇಕಿದೆ, ಸಾಂಕ್ರಾಮಿಕ ಕಾಯಿಲೆಗಳನ್ನು ನಿಯಂತ್ರಿಸುವುದು, ಅಸಾಂಕ್ರಮಿಕ ಕಾಯಿಲೆಗಳನ್ನು ಹತೋಟಿಯಲ್ಲಿಡುವುದು, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ಸುಧಾರಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿವಪ್ಪ ಮಾತನಾಡಿ 1950 ರಿಂದ ಎಪ್ರಿಲ್ 7 ರಂದು ” ವಿಶ್ವ ಆರೋಗ್ಯ ದಿನಾಚರಣೆ”ಯನ್ನು ಆಚರಿಸುತ್ತಿದೆ, ಪ್ರತಿವರ್ಷ ಒಂದೊಂದು ಘೋಷವಾಕ್ಯದಡಿ ಕಾರ್ಯ ನಿರ್ವಹಿಸುತ್ತದೆ, ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ದೇಯದೊಂದಿಗೆ ಆಚರಿಸಿ ಜಾಗೃತಿ ಮೂಡಿಸಲಾಗುತ್ತದೆ, ಈ ವರ್ಷದ ಘೋಷಣೆ “ನಮ್ಮ ಗ್ರಹ- ನಮ್ಮ ಆರೋಗ್ಯ” ಘೋಷ ವಾಕ್ಯವಾಗಿದ್ದು ಉತ್ತಮ ವಾತಾವರಣ ನಿರ್ಮಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ, ಅದರಂತೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ನಿರತವಾಗಿದೆ, ನಮ್ಮ ಅರೋಗ್ಯ ನಮ್ಮ ಕೈಯಲ್ಲಿ, ಅರೋಗ್ಯವೇ ಸಂಪತ್ತು, ಅನಾರೋಗ್ಯವೇ ವಿಪತ್ತು,ಜಗತ್ತಿನ ಆರೋಗ್ಯಕ್ಕಾಗಿ ಎಲ್ಲರೂ ಕೈಜೋಡಿಸೋಣ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಡಾ.ವೆಂಕಟೇಶ್ವರ ರೆಡ್ಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ಪಂಪಾಪತಿ, ಗೋಪಾಲ್, ಚೈತ್ರ, ತಿಪ್ಪೇಸ್ವಾಮಿ, ಶಿವಕುಮಾರ್, ಚಲುವರಾಜ, ಶ್ರೀನಿವಾಸ, ಸುನಿಲ್,ರತ್ನಮ್ಮ, ಸವಿತಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here