ಉತ್ಸವದಲ್ಲಿ ಸಾಹಸಿ ಕ್ರೀಡೆಗಳು ; ಸಾರ್ವಜನಿಕರಿಗೆ ಮುಕ್ತ ಪ್ರವೇಶ, ಎಲ್ಲರೂ ಭಾಗವಹಿಸಿ ಆನಂದಿಸಿ

0
87

ಬಳ್ಳಾರಿ,ಜ.21: ಜನರಿಗೆ ಕ್ರೀಡೆಗಳಲ್ಲಿ ಆಸಕ್ತಿ ಇರುವುದು ಸಾಮಾನ್ಯ. ಆದರೆ ಸಾಹಸಿ ಕ್ರೀಡೆಗಳೆಂದರೆ ಎಲ್ಲರಿಗೂ ಮೈಜುಮ್ ಎನ್ನಿಸುತ್ತದೆ. ಅಂತಹ ಕ್ರೀಡೆಗಳನ್ನು ಜಿಲ್ಲಾಡಳಿತ ವತಿಯಿಂದ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವ ಅಂಗವಾಗಿ ನಗರದ ಕೋಟೆ ಪ್ರದೇಶದ ಆವರಣದಲ್ಲಿ ನೋಪಾಸನಾ ವತಿಯಿಂದ ಆಯೋಜಿಸಲಾದ ಸಾಹಸ ಕ್ರೀಡೆಗಳು ಶನಿವಾರದಿಂದ ಆರಂಭವಾದವು.
ಮಕ್ಕಳಿಗೆ ಹಾಗೂ ಯುವಕರಿಗೆ ಸಾಹಸಿ ಕ್ರೀಡೆಗಳು ಅತಿ ಉತ್ಸಾಹವನ್ನು ತಂದುಕೊಡುತ್ತದೆ.
ಮಕ್ಕಳು ಮತ್ತು ಯುವಕರು ಉತ್ಸಾಹಿಯಂತೆ ಅವುಗಳಲ್ಲಿ ಭಾಗವಹಿಸಲು ನಾ ಮುಂದು, ತಾ ಮುಂದು ಎನ್ನುವಂತೆ ನಿಂತಿದ್ದರು.
ಭಾಗವಹಿಸಲು ಬರುವ ಸಾರ್ವಜನಿಕರಿಗೆ ಅಗತ್ಯ ಸುರಕ್ಷಾ ಕವಚ, ಹೆಲ್ಮೆಟ್ ಮತ್ತು ಸುರಕ್ಷಾ ಬೆಲ್ಟ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಳ್ಳಲಾಗಿದೆ ಮತ್ತು ಸಿಬ್ಬಂದಿಯವರು ಸುರಕ್ಷತೆ ಕೈಗೊಂಡಿರುತ್ತಾರೆ ಎಂದು ನೋಪಾಸನಾ ಸಿಬ್ಬಂದಿ ವೀರೇಶ್ ಅವರು ತಿಳಿಸಿದರು.
ರಾಕ್‍ಕ್ಲೈಂಬಿಂಗ್, ರ್ಯಾಪ್ಲಿಂಗ್, ಜಿಪ್‍ಲೈನ್ ಕ್ರೀಡೆಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಈ ಕ್ರೀಡೆಗಳು ಜ.22ರ ಸಂಜೆಯವರೆಗೆ ಇರಲಿದೆ. ಪ್ರತಿಯೊಬ್ಬರೂ ಭಾಗವಹಿಸಿ ಕ್ರೀಡೆಗಳನ್ನು ಆನಂದಿಸಬಹುದಾಗಿದೆ ಎಂದರು.
ಈ ವೇಳೆ ನೋಪಾಸನಾ ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here