ಬಳ್ಳಾರಿ ಉತ್ಸವದಲ್ಲಿ ಜನಮನ ಗೆದ್ದ ಆರೋಗ್ಯ ಇಲಾಖೆಯ ವಸ್ತು ಪ್ರದರ್ಶನ

0
765

ಬಳ್ಳಾರಿ: ಜ:23: ಬಳ್ಳಾರಿ ಉತ್ಸವದಲ್ಲಿ ಸದ್ದಿಲ್ಲದೆ ಜನರ ಮನಸ್ಸು ಗೆದ್ದ ಆರೋಗ್ಯ ಇಲಾಖೆಯ ವಸ್ತು ಪ್ರದರ್ಶನವನ್ನು
ಪ್ರಪ್ರಥಮ ಬಳ್ಳಾರಿ ಉತ್ಸವದಲ್ಲಿ ಹಲವಾರು ಇಲಾಖೆಯ ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು, ಇವುಗಳಲ್ಲಿ ಸರಳವಾಗಿ ಮತ್ತು ವಿಶೇಷ ವಸ್ತುಗಳನ್ನು ಬಳಸಿಕೊಂಡು ಆರೋಗ್ಯ ಇಲಾಖೆ ಪ್ರದರ್ಶನ ಮಳಿಗೆ ಸಿದ್ದ ಪಡಿಸಲಾತ್ತು,

ಇಲಾಖೆಯ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸುವ ಸ್ಟ್ರಕ್ಚರ್ ಮತ್ತು ರೋಗಗಳ ನಿಯಂತ್ರಣ ಕ್ರಮಗಳ ಮಾದರಿಗಳು, ಮೆಡಿಕಲ್ ಕಾಲೇಜಿನ ಸಹಕಾರದೊಂದಿಗೆ ಶರೀರ ಶಾಸ್ತ್ರದ ಅಂಗಾಂಗಗಳು, ವಿಶೇಷವಾಗಿ ಹ್ಯುಮನ್ ಸ್ಕೆಲಿಟನ್, ಹಾರ್ಟ್, ಲಂಗ್ಸ್ ನ ಭಾಗಗಳ ಪ್ರದರ್ಶನ, ಕಾರ್ಯಕ್ರಮಗಳ ಪೋಸ್ಟರ್ ನ ಲ್ಯಾಮಿನೇಷನ್ ಪೋಟೋಗಳು ಹಾಗೂ ಕರಪತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು,

ಮಳಿಗೆಗೆ ಬೇಟಿ ಕೊಟ್ಟ ಜನರು ನೋಡಿ ಒಬ್ಬರಿಂದೊಬ್ಬರಿಗೆ ವಿಷಯ ತಿಳಿಯುತ್ತಾ, ನಿಧಾನವಾಗಿ ಜನರ ಮನ ಸೂರೆ ಗೊಂಡವು, ವಿಶೇಷವಾಗಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಮಾಹಿತಿ ತಿಳಿದು ಕೊಳ್ಳುವ ಪ್ರಯತ್ನ ಮಾಡಿದರು, ಇದು ಇಲಾಖೆಗೆ ಆತ್ಮ ಸ್ಥೈರ್ಯವನ್ನು ಹೆಚ್ಚಿಸಿದೆ, ಇಂತಹ ವಸ್ತು ಪ್ರದರ್ಶನಗಳಿಂದ ಜನರು ತಮ್ಮ ಆರೋಗ್ಯವನ್ನು ಉನ್ನತಿಕರಿಸಿಕೊಳ್ಳುವ ಕಡೆ ಗಮನ ಹರಿಸಲು ಸಹಕಾರಿಯಾಗಲಿದೆ ಅದಕ್ಕಾಗಿ ಜನರಿಗೆ ವಸ್ತು ಪ್ರದರ್ಶನ ಆಕರ್ಷಣೆಯಾಗಿದೆ ಎಂದು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಹೆಚ್.ಎಲ್ ಜನಾರ್ದನ ಅವರು ತಿಳಿಸಿದರು,

ಹಾಗೆ ಮಳಿಗೆಯ ಉಸ್ತುವಾರಿಯನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ವಹಿಸಿಕೊಂಡು, ಮಾಹಿತಿ ನೀಡಲು ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳಾದ ಸಂಡೂರು ತಾಲುಕಿನ ಶಿವಪ್ಪ, ಬಳ್ಳಾರಿ ತಾಲೂಕಿನ ಶಾಂತಮ್ಮ, ಮೊಹಮ್ಮದ್ ರಫಿ,ರಾಘವ ಶೆಟ್ಟಿ, ಕೋಳೂರು ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಯರಾದ ಪರಿಮಳ, ಹುಲಿಗೆಮ್ಮ, ಪ್ರತ್ಯುಷ, ಜೆ.ಕೆ ಲಕ್ಷ್ಮಿ, ಮಹಾಲಕ್ಷ್ಮಿ, ಶೋಭಾ ಮತ್ತು ಮಲೇರಿಯಾ ಕಛೇರಿಯ ಸಿಬ್ಬಂದಿಯವರನ್ನು ನಿಯೋಜಿಸಲಾಗಿತ್ತು, ಎಲ್ಲರೂ ಅಚ್ಚುಕಟ್ಟಾಗಿ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು,

ಇದರೊಂದಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಅಭಾ) ಕಾರ್ಡ್ ವಿತರಣೆ ಮಾಡಲಾಗಿದೆ, ಎನ್.ಸಿ.ಡಿ ಕ್ಲಿನಿಕ್ ನಲ್ಲಿ ಜನರಿಗೆ ತಪಾಸಣೆ ಮತ್ತು ಚಿಕಿತ್ಸೆ, ಕೋವಿಡ್ ವ್ಯಾಕ್ಸಿನೇಷನ್‌, ಉತ್ಸವದ ಎಲ್ಲಾ ಸ್ಥಳಗಳಲ್ಲಿ ಆಂಬ್ಯಲೆನ್ಸ್ ಸೇವೆ ಒದಗಿಸಲಾಗಿದೆ ಎಂದು ತಿಳಿಸಿದರು,

ಹಾಗೇ ಉತ್ಸವದ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲು ಬಂದ ಜನರ ಸ್ಪಂದನೆ ಮತ್ತು ಸಹಕಾರಕ್ಕೆ ಜನರಿಗೆ ಅಭಿನಂದನೆಗಳನ್ನು ಅವರು ಸಲ್ಲಿಸಿದರು

LEAVE A REPLY

Please enter your comment!
Please enter your name here