ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳು ಈಡೇರಿಸುವಂತೆ, ತಹಶೀಲ್ದಾರ್ ಹೆಚ್.ಜೆ.ರಶ್ಮಿ ಗೆ ಮನವಿ

0
260

ಬಳ್ಳಾರಿ:ಸಂಡೂರು:ಆಗಸ್ಟ್:09: ಎಐಟಿಯುಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ದಿನಾಂಕ: 09/08/2021 ರ ಸೋಮವಾರ ದೇಶವ್ಯಾಪ್ತಿ ಪ್ರತಿಭಟನೆ ಹಮ್ಮಿಕೊಂಡಿದ್ದು ಫೆಡರೇಷನ್‍ನಲ್ಲಿ ಚರ್ಚಿಸಿದ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು

ಮನವಿಪತ್ರದಲ್ಲಿನ ಬೇಡಿಕೆಗಳು ಈಗಿವೆ:-
ಅಡುಗೆ ಅನಿಲ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಗೌರವಧನದಲ್ಲಿ ಜೀವನ ನಡೆಸಲು ತುಂಬಾ ಕಷ್ಟವಾಗಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕನಿಷ್ಟ ವೇತನ, ಉಪಧನ, ಪರಿಹಾರ ಸೇರಿದಂತೆ ಕಾನೂನುಬದ್ಧ ಸವಲತ್ತುಗಳನ್ನು ಒದಗಿಸಬೇಕು.

ಅಂಗನವಾಡಿ ಕೇಂದ್ರ ಫಲಾನುಭವಿಗಳಿಗೆ ಕೋಳಿ ಮೊಟ್ಟೆಗಳನ್ನು ವಿತರಿಸುತ್ತಿದ್ದು, ಕೋಳಿ ಮೊಟ್ಟೆಯ ಧರವು ಸೆಪ್ಟಂಬರ್ 2020 ರಿಂದ ಇಲ್ಲಿಯವರೆಗೆ ಮೊಟ್ಟೆ ಧರವು ಹೆಚ್ಚಳವಾಗಿರುವುದರಿಂದ ಮೊಟ್ಟೆ ಖರೀಧಿಸಲು ಹೆಚ್ಚಾಗಿರುವ ವ್ಯತ್ಯಾಸದ ಮೊತ್ತವನ್ನು ಗ್ರಾಮ ಪಂಚಾಯಿತಿಯಿಂದ ಪಾವತಿಸಲು ಸೂಚಿಸಿರುತ್ತಾರೆ.
ಆದರೆ ಇದೂವರೆಗೂ ಯಾವ ಗ್ರಾಮ ಪಂಚಾಯಿತಿ ಕಡೆಯಿಂದ ಪಾವತಿಯಾಗಿರುವುದಿಲ್ಲ.

ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಫಲಾನುಭವಿಗಳಿಗೆ ರೂ.5/-ರಂತೆ ನಮ್ಮ ಇಲಾಖೆಯಿಂದ ಪಾವತಿಸುತ್ತಿದ್ದಾರೆ. ಹೆಚ್ಚಾಗುವ ವ್ಯತ್ಯಾಸದ ಮೊತ್ತವನ್ನು ಶಿಶು ಅಭಿವೃದ್ದಿ ಯೋಜನೆಯ ಕಛೇರಿಯ ಮುಖಾಂತರವೇ ಪಾವತಿಸಬೇಕು ಮತ್ತು 3 ತಿಂಗಳಿಗೊಮ್ಮೆ ಮೊಟ್ಟೆಯ ಮೊತ್ತವನ್ನು ಪರಿಶೀಲಿಸುವಂತೆ ಕೇಳಿಕೊಳ್ಳುತ್ತೇವೆ.
ಅಂಗನವಾಡಿ ಕೇಂದ್ರ ಫಲಾನುಭವಿಗಳಿಗೆ ಕೋಳಿ ಮೊಟ್ಟೆ ಹಣವನ್ನು ಮುಂಗಡವಾಗಿ ಹಾಕಿದರೆ ಮಾತ್ರ ವಿತರಿಸುತ್ತೇವೆ.

ಅಂಗನವಾಡಿ ಕೇಂದ್ರ ಫಲಾನುಭವಿಗಳ ಆಧಾರದ ಮೇಲೆ ಕೋಳಿ ಮೊಟ್ಟೆ ಮೊತ್ತವನ್ನು ಪಾವತಿಸಬೇಕು.
ಮೊಬೈಲ್ ಯ್ಯಾಪ್‍ನಲ್ಲಿ ಪೋಷಣ ಟ್ರ್ಯಾಕ್ ಒಂದನ್ನು ಮಾತ್ರ ಮಾಡುತ್ತೇವೆ. ಸ್ನೇಹ ಯ್ಯಾಪ್ ಮಾಡಲು ಆಗುವುದಿಲ್ಲವೆಂದು ತಿಳಿಯಪಡಿಸುತ್ತಿದ್ದೇವೆ.
ಶಿಶು ಅಭಿವೃದ್ದಿ ಯೋಜನೆಯ ಅಂಗನವಾಡಿ ಕೇಂದ್ರಗಳಿಗೆ ಅಯ್ಕೆಯಾದ ಅಭ್ಯರ್ಥಿಗಳಾದ ಕೆಲವು ಅಂಗನವಾಡಿ ಕಾರ್ಯಕರ್ತೆಯವರು ಮತ್ತು ಸಹಾಯಕಿಯರಿಗೆ ಕಛೇರಿಯ ಆದೇಶ ಇರುವುದಿಲ್ಲ.ಆದ್ದರಿಂದ ಪ್ರತಿಯೊಬ್ಬರಿಗೂ ಕೂಡಲೇ ಆದೇಶ ಪ್ರತಿ (ಆರ್ಡರ್ ಕಾಪಿ) ನೀಡಬೇಕು.
ಸೇವಾ ಹಿರಿತನದ ಆಧಾರದಲ್ಲಿ ಅಂದರೆ ಪ್ರತಿ ವರ್ಷ ಸೇವೆಗೆ ಇಂತಿಷ್ಟು ಮೊತ್ತವೆಂದು ನಿಗಧಿಪಡಿಸಿದರೆ ಅವರವರ ಸೇವಾ ಅವಧಿಗನುಗುಣವಾಗಿ ಸೌಲಭ್ಯ ಸಿಗಲಿದೆ. ಆದ್ದರಿಂದ ದೀರ್ಘ ಸೇವೆ ಸಲ್ಲಿಸಿದವರಿಗೆ ನ್ಯಾಯ ಸಿಗಲಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಖಾತೆಗೆ ಹಾಕುವ ಗೌರವ ಧನ ಒಂದು ಪ್ರತಿ ಮತ್ತು ಬಾಲವಿಕಾಸ ಸಲಹಾ ಸಮಿತಿ ಖಾತೆಗೆ ಹಾಕುವ ಯಾವುದೇ ಹಣ ಹಾಕಿದರೆ ಅದರ 1 ಪ್ರತಿ ಜೆರಾಕ್ಸ್ ಪ್ರತಿಯನ್ನು ಸಂಘಟನೆಗೆ ಕೊಡಬೇಕು. ಖಾಲಿ ಇರುವ ಮೇಲ್ವಿಚಾರಕಿಯವರ ಹುದ್ದೆಗಳಿಗೆ ಅನುಗುಣವಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಭರ್ತಿಗೊಳಿಸಬೇಕು.

ಈ ಎಲ್ಲಾ ವಿಷಯಗಳನ್ನು ಸರ್ಕಾರ ಮತ್ತು ಅಧಿಕಾರಿಗಳು ಚರ್ಚಿಸಿ ನಮ್ಮ ಸಮಸ್ಯೆಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ನಮ್ಮ ಫೆಡರೇಷನ್ ವತಿಯಿಂದ ಮನವಿ ಮಾಡಿಕೊಳ್ಳುತ್ತೇವೆ.

ಮನವಿಪತ್ರಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು,ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದರು

ಈ ಸಂಧರ್ಭದಲ್ಲಿ ಎಐಟಿಯುಸಿ ಸಂಘಟನೆ ಅಧ್ಯಕ್ಷರಾದ ಜಿ.ನಾಗರತ್ನಮ್ಮ, ಪ್ರಧಾನ ಕಾರ್ಯದರ್ಶಿಯಾದ ಟಿ.ಕವಿತಾ, ಖಜಾಂಚಿ ಮೀನಾಕ್ಷಿ ಸಂಘಟನೆಯ ಮುಖಂಡರುಗಳಾದ ವೆಂಕಟಲಕ್ಷ್ಮಿ,ಶಾರದಾ, ತಾಯಕ್ಕ, ಸುನೀತ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here