ಬಗೆಹರಿಯದ ಜಮೀನುಗಳಿಗೆ ಓಡಾಡಲು ದಾರಿ,ಅಧಿಕಾರಿಗಳ ನಿರ್ಲಕ್ಷ: ಗ್ರಾಮಸ್ಥರ ಆಕ್ರೋಶ.!!

0
701

ವಿಜಯನಗರ/ ಕೊಟ್ಟೂರು:ಜೂನ್:
ತಾಲೂಕಿನ ನಾಗರಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಮಂಗನಹಳ್ಳಿ ಗ್ರಾಮ ಹಾಗೂ ಚಿನ್ನೇನಹಳ್ಳಿ ಗ್ರಾಮದ ರೈತರು ಗ್ರಾಮಸ್ಥರು ಜಮೀನುಗಳಿಗೆ ಓಡಾಡಲು ದಾರಿ ಇದೆ. ಇದು ಇಂದು ನಿನ್ನೆಯ ಸಮಸ್ಯೆಯಂತೂ ಅಲ್ಲ. ಶತಮಾನಗಳಿಂದಲೂ ಕಾಲುದಾರಿಯ ಕಥೆ ಅಡ್ಡ ದಾರಿ ಹಿಡಿದೇ ನಡೆದಿದೆ.

ರೈತರು ಹೊಲಗಳಿಗೆ ಹೋಗಲು ಗ್ರಾಮದ ನಕಾಶೆಯಲ್ಲಿ ಬಂಡಿ ದಾರಿ, ಜಾಡುಗಳಿದ್ದರೂ ಯಾರಾದರೊಬ್ಬ ಮಧ್ಯೆ ಹೊಲ ಇರುವ ರೈತ ದಾರಿ ಬಿಡದೆ ಹೋದರೆ ಇನ್ನೊಬ್ಬ ರೈತನ ಕಥೆ ಮುಗಿದಂತೆಯೇ ಸರಿ. ವ್ಯವಸಾಯಕ್ಕೆ ಬೇಕಾದ ಸಲಕರಣೆಗಳು, ವ್ಯವಸಾಯೋತ್ಪನ್ನಗಳು ಮತ್ತಿತರ ಭಾರದ ಸರಕು ಸರಂಜಾಮುಗಳನ್ನು ಸಾಗಿಸಲು ಈ ಕಿರುದಾರಿಗಳು ಅತ್ಯಂತ ಅವಶ್ಯಕ. ಇದರ ಪ್ರಾಮುಖ್ಯತೆಯನ್ನು ಕಂಡೇ ಸರ್ಕಾರ ಇಂತಹ ಕಾಲುದಾರಿಗಳನ್ನು ಯಾವುದೇ ಕಾರಣಕ್ಕೂ ಅತಿಕ್ರಮಣ ಮಾಡದಂತೆ ಆದೇಶವನ್ನು ಹೊರಡಿಸಿದೆ. ಆದರೆ ಈ ಆದೇಶವನ್ನು ಪಾಲಿಸಬೇಕಾದ ಅಧಿಕಾರಿಗಳು ತಾಲ್ಲೂಕು ಮಟ್ಟದ ತಹಶೀಲ್ದಾರ್ ರ ಅಂಗಳಕ್ಕೆ ಪ್ರಕರಣವನ್ನು ನೂಕಿ ತೆಪ್ಪಗಾಗಿ ಬಿಡುತ್ತಾರೆ. ಇವು ಎಷ್ಟು ಸರಳವಾದ ಪ್ರಕ್ರಿಯೆಗಳಾದರೂ ಅದನ್ನು ಗೊಂದಲದ ಗೂಡನ್ನಾಗಿಸಿ, ಯಾವುದೇ ಇತ್ಯರ್ಥಕ್ಕೆ ರೈತರು ಬಾರದಂತೆ ಪ್ರಕರಣವನ್ನು ಹಸಿಯಾಗಿರುವಂತೆ ನೋಡಿಕೊಳ್ಳುವ ಈ ಅಧಿಕಾರಿ ವರ್ಗಕ್ಕಿದೆ ಎಂಬುದು ಸಾರ್ವಕಾಲಿಕ ಸತ್ಯ. ಹೀಗಾಗಿ ಅಸಹಾಯಕ ರೈತರು ಕಂದಾಯ ಇಲಾಖೆಯವರನ್ನು ಎದುರು ಹಾಕಿಕೊಳ್ಳಲಾರದೆ ತಮ್ಮ ಕಷ್ಟವನ್ನು ತಾವೇ ಅನುಭವಿಸುವಂತಾಗಿದೆ.

ಕಾಲುದಾರಿ ಒತ್ತುವರಿ ಮಾಡಿರುವ ರೈತನೇನಾದರೂ ಬಲಾಢ್ಯನಾದರಂತೂ ಮೂಗಿದೇ ಹೋಯಿತು. ಬಡಪಾಯಿ ರೈತರು ಯಾವುದೇ ಪ್ರತಿರೋಧವಿಲ್ಲದೆ ಸುಮ್ಮನಾಗಬೇಕಾಗುತ್ತದೆ ಮಂಗನಹಳ್ಳಿ ಗ್ರಾಮದ ಗ್ರಾಮಸ್ಥರು ಎಂದು ಆಕ್ರೋಶ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ನಾಗರಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಸೋಮಶೇಖರಗೌಡ ಮಂಗನಹಳ್ಳಿ, ಮತ್ತು ಗ್ರಾಮದ ಮೇಘರಾಜ, ರವರು ಮಾತನಾಡಿದರು ಹಾಗೇ ಮಂಗನಹಳ್ಳಿ ಗ್ರಾಮದ ಗ್ರಾಮಸ್ಥರಾದ ದುರ್ಗಾದಾಸ್, ಪ್ರಸನ್ನ, ಹಾಲೇಶ್, ರಮೇಶ್, ಕೊಟ್ರೇಶ್, ರೇವಣಸಿದ್ದಪ್ಪ, ಸೋಮಾ, ರೇಖಮ್ಮ, ರತ್ನಮ್ಮ, ನಾಗಮ್ಮ, ಹಾಗೂ ಗ್ರಾಮಸ್ಥರು ಇದ್ದರು

-ವರದಿ:ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here