ಬಾಲ್ಯ ವಿವಾಹ ನಿಲ್ಲಿಸಲು ಹಿಂಜರಿಕೆ ಬೇಡ; ಗ್ರಾಪಂ ಸದಸ್ಯ ಹೊನ್ನೂರಸ್ವಾಮಿ

0
270

ಸಂಡೂರು: ಫೆ: 20: ಬಾಲ್ಯ ವಿವಾಹ ನಿಲ್ಲಿಸಲು ಹಿಂಜರಿಕೆ ಬೇಡ; ಸದಸ್ಯ ಹೊನ್ನೂರಸ್ವಾಮಿ, ಅವರು ತಿಳಿಸಿದರು

ತಾಲೂಕಿನ ಮೆಟ್ರಿಕಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇತ್ರ ಮಟ್ಟದಲ್ಲಿ ಕೆಲಸ ಮಾಡುವ ಅಂಗವಾಡಿ, ಆಶಾ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದರು, ಕಾವಲು ಸಮಿತಿ ಸದಸ್ಯರು ಮೀಟಿಂಗ್ ಗಳನ್ನು ಆಯೋಜಿಸಿ, ಜಾಗೃತಿ ಮೂಡಿಸಿ, ಮಕ್ಕಳಿಗೆ ಅರಿವು ಮೂಡಿಸಿ, ಜನರಿಗೆ ಹೆದರುವ ಅವಶ್ಯಕತೆ ಇಲ್ಲ, ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ತಿಳಿಸಿದರು,

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಬಾಲ್ಯ ವಿವಾಹ ಕಾಯ್ದೆ ಕುರಿತು ಮಾಹಿತಿ ನೀಡಿದರು, ತಾಯಿ ಮರಣ ಮತ್ತು ಶಿಶು ಮರಣ ತಡೆಯಬಹುದು ಎಂದು ತಿಳಿಸಿದರು ಹಾಗೇ ಕ್ಷಯರೋಗ ಮುಕ್ತ ಭಾರತ ರೂಪಿಸಲು ಕೈಜೋಡಿಸಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಅವರು ಹದಿಹರೆಯದವರ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಹಾಗೂ ಸ್ನೇಹ ಕ್ಲಿನಿಕ್ ಬಗ್ಗೆ ಮಾಹಿತಿ ನೀಡಿದರು,

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಪ್ರಭಾಕರ್, ಅಂಗನವಾಡಿ ಕಾರ್ಯಕರ್ತೆ ನೀಲಾವತಿ, ಶಾರದ,ನಾಗವೇಣಿ,ಯರ್ರಮ್ಮ,ಪದ್ಮಾವತಿ, ಮಾಂಕಾಳಿ,ಲಕ್ಷ್ಮಿ, ಆಶಾ ಕಾರ್ಯಕರ್ತೆ ಕೆ. ಲಕ್ಷ್ಮಿ , ಸಾಹಸ ಸಂಸ್ಥೆಯ ನಾಗರಾಜ್, ಬಸವರಾಜ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here