ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸಂಭ್ರಮದ 74 ನೇ ಗಣರಾಜ್ಯೋತ್ಸವದ ಧ್ವಜಾರೋಹಣ

0
254

ಸಂಡೂರು:ಜ:26: ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ 74 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಸಮಾರಂಭ ನಡೆಯಿತು, ಕೇಂದ್ರದ ಹಿರಿಯ ವೈದ್ಯಾಧಿಕಾರಿಗಳಾದ ಡಾ.ಗೋಪಾಲ್ ರಾವ್ ಅವರು ಧ್ವಜಾರೋಹಣ ನೆರವೇರಿಸಿ ಕೊಟ್ಟರು, ನಂತರ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಾದಿಯಾ ಅವರು ಮಾತನಾಡಿ ನಮ್ಮ ದೇಶದ ಸಂವಿಧಾನ ಬೃಹತ್ ಮತ್ತು ಲಿಖಿತ ರೂಪದಲ್ಲಿದ್ದು, ರಾಜ್ಯಾಂಗ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಿಂದ ಕೂಡಿದ್ದು ಇಂದು ನಾವೆಲ್ಲಾ ಹೆಮ್ಮೆಯಿಂದ ಮತ್ತು ಸಂಭ್ರಮದಿಂದ ಎದೆ ತಟ್ಟಿಕೊಳ್ಳುವಂತೆ ಮಾಡಿದ್ದು ನಮ್ಮ ಹೆಮ್ಮೆಯ ಸಂವಿಧಾನ, ಮೂಲಭೂತ ಹಕ್ಕುಗಳಂತೆ ನಾವು ನಿರ್ವಹಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಜವಾಬ್ದಾರಿ ನಮ್ಮ ಮೇಲಿದೆ, ಅದರಂತೆ ನಡೆಯೋಣ, ಎಲ್ಲರೂ ಉತ್ತಮವಾಗಿ ಜನರಿಗೆ ಸೇವೆಗಳನ್ನು ಒದಗಿಸಿ,ಜನರೊಂದಿಗೆ ಉತ್ತಮ ಸಂಪರ್ಕವನ್ನು ಇಟ್ಟುಕೊಳ್ಳಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ವಿಶ್ವವೇ ನಮ್ಮತ್ತ ನೋಡುತ್ತಿದೆ, ಭಾರತ ಬಲಿಷ್ಠ ರಾಷ್ಟ್ರವಾಗಿದೆ ಇದಕ್ಕೆಲ್ಲ ಶ್ರಮಿಸಿದ ಸಂವಿಧಾನ ರಚಿಸಿದ ಅಧ್ಯಕ್ಷರು ಮತ್ತು ಅದನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಹಾಗೂ ಸ್ವತಂತ್ರ ತಂದು ಕೊಡಲು ತ್ಯಾಗ ಬಲಿದಾನಗಳನ್ನು ಕೊಟ್ಟ ಮಹನೀಯರಗೆ ಗೌರವ ನಮನಗಳ ಅರ್ಪಿಸುವ ಸುದಿನವಾಗಿದೆ ಎಂದು ತಿಳಿಸಿ ಮಹನೀಯರಿಗೆ ವಂದನೆಗಳನ್ನು ಅರ್ಪಿಸಿದರು,
ಕಾರ್ಯಕ್ರಮ ವನ್ನು ಯಂಕಪ್ಪ ನಡೆಸಿಕೊಟ್ಟರು,

ಈ ಸಂದರ್ಭದಲ್ಲಿ ಡಾ.ರಜಿಯಾ ಬೇಗಂ, ಡಾ.ಪ್ರಿಯಾಂಕಾ, ಸೂಪರಿಂಟೆಂಡೆಂಟ್ ಹರ್ಷ, ಪ್ರಶಾಂತ್, ಶಕೀಲ್ ಅಹಮದ್, ಅನ್ಸಾರಿ, ಮಂಜುನಾಥ್,ವೆಂಕಟೇಶ್, ಪ್ರಶಾಂತ್ ಕುಮಾರ್, ಇಸ್ಮಾಯಿಲ್, ನಿಜಾಮುದ್ದೀನ್,ಶ್ರೀರಾಮುಲು, ಗೀತಾ,ಮಾಲಾ,ರೂಪಾ,ಹುಲಿಗೆಮ್ಮ, ನಾಗರತ್ನ,ಉಮಾ,ರೋಜಾ, ಶಿವಕುಮಾರ್, ಸುನಿಲ್,ರಾಜೇಶ್, ಬಾಲಾಜಿ,ರತ್ನಮ್ಮ, ತಿಪ್ಪೇಸ್ವಾಮಿ,ಇತರ ಅಧಿಕಾರಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here