ಸಾರ್ವಜನಿಕರಿಗೆ ಸ್ವಚ್ಛತಾ ಅರಿವು ಅಗತ್ಯ: ಪುರಸಭೆ ಮುಖ್ಯಾಧಿಕಾರಿ ಜಯಣ್ಣ

0
51

ಸಾರ್ವಜನಿಕರು ಕಸವನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ಹಾಕಬೇಕು. ಹಸಿಕಸ, ಒಣಕಸ ವಿಂಗಡಣೆ ಮಾಡಿ ಪುರಸಭೆಯ ತ್ಯಾಜ್ಯ ವಸ್ತು ವಿಲೇವಾರಿ ವಾಹನಗಳಿಗೆ ನೀಡಬೇಕು. ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆಗೆ ಸಾರ್ವಜನಿಕರು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಕೆ ಅರಿವು ಅಗತ್ಯವಾಗಿದೆ ಎಂದು ಸಂಡೂರು ಪುರಸಭೆಯ ಮುಖ್ಯಾಧಿಕಾರಿ ಜಯಣ್ಣ ಅವರು ಹೇಳಿದರು.

ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿಯ ಸ್ಮರಣಾರ್ಥವಾಗಿ
ಪೌರಾಡಳಿತ ನಿರ್ದೇಶನಾಲಯ ನಿರ್ದೇಶನದಂತೆ ತಾಲೂಕಾಡಳಿತ,ಪುರಸಭೆ ಹಾಗೂ ತಾಲೂಕು ಪಂಚಾಯಿತಿ, ತಾಲೂಕ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಚತೆಯೇ ಸೇವೆಯಡಿ ರವಿವಾರ ಬೆಳಿಗ್ಗೆ ಸಂಡೂರು ಪಟ್ಟಣದ ಮುಖ್ಯರಸ್ತೆಯಲ್ಲಿನ ವಿಜಯ ಸರ್ಕಲ್ ಬಳಿ ಸ್ವಚ್ಚತಾ ಆಂದೋಲನದ “ಒಂದು ದಿನ ಒಂದು ಗಂಟೆ ಸ್ವಚ್ಛತಾ ಅಭಿಯಾನ’ ದ
ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಹಾಗೂ ನೈರ್ಮಲ್ಯ ಕುರಿತಾಗಿ ಪಟ್ಟಣದಲ್ಲಿ ಸ್ವಚ್ಛತಾ ಆಂದೋಲನದ ಅಭಿಯಾನಕ್ಕೆ ಚಾಲನೆಯನ್ನು ಆಂದೋಲನದಲ್ಲಿ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಭಾಗಿಯಾಗುವಂತೆ ಮನವಿ ಮಾಡಿದರು.

SBI ಬ್ಯಾಂಕ್, ಪುರಸಭೆ ಕಾರ್ಯಾಲಯ, ವಾಣಿಜ್ಯಮಳಿಗೆಗಳು ಹಾಗೂ ವಿಜಯ ಸರ್ಕಲ್ ಮುಂದೆ ದಿನನಿತ್ಯವೂ
ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ಸುಮಾರು ನೂರಕ್ಕೂ ಅಧಿಕ ಸಾರ್ವಜನಿಕರು, ಹಿರಿಯ ನಾಗರಿಕರು ದಿನನಿತ್ಯದ ಕೆಲಸಗಳಿಗೂ ಮತ್ತು ವಾಕಿಂಗ್‍ಗೆ ಬರುತ್ತಾರೆ ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಇದೇ ಮುಖ್ಯರಸ್ತೆಯಲ್ಕಿ ಬರುತ್ತಾರೆ. ಹಾಗಾಗಿ ನಮ್ಮ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಇಂತಹ ಸ್ವಚ್ಛತಾ ಕಾರ್ಯಕಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಹೇಳಿದರು

ನಂತರ ತಹಸೀಲ್ದಾರ್ ಅನಿಲ್ ಕುಮಾರ್, ತಾಲೂಕು ಪಂಚಾಯಿತಿ ಇಓ ಷಡಕ್ಷರಯ್ಯ ಅವರು ಮಾತನಾಡಿದರು

“ಒಂದು ದಿನ ಒಂದು ಗಂಟೆ ಸ್ವಚ್ಛತಾ ಅಭಿಯಾನ”ದ ಶ್ರಮದಾನ ಕಾರ್ಯಕ್ರಮದಲ್ಲಿ
ಶಾಸಕ ತುಕಾರಾಮ್ ಅವರ ಆಪ್ತ ಸಹಾಯಕ ಎಸ್ ವಿ ಹಿರೇಮಠ್, ತಹಶೀಲ್ದಾರ್ ಅನಿಲ್ ಕುಮಾರ್, ತಾಲೂಕು ಪಂಚಾಯಿತಿ ಇಓ ಷಡಕ್ಷರಯ್ಯ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್,ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಶಾರದಾ ಹಾಗೂ SBI ಬ್ಯಾಂಕ್ ಸಿಬ್ಬಂದಿವರ್ಗದವರು, ಪೌರ ಕಾರ್ಮಿಕರು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here