ರಕ್ತದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ ಸಂಘ ಸಂಸ್ಥೆಗಳ ಪಾತ್ರ ಹಿರಿದು;ಡಾ. ಗೋಪಾಲ್ ರಾವ್

0
321

ಸಂಡೂರು: ಜೂ:14: ರಕ್ತದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದು ಇಲ್ಲ, ಇದರಲ್ಲಿ ಸಂಘಸಂಸ್ಥೆಗಳ ಪಾತ್ರ ಹಿರಿದು; ಡಾ.ಗೋಪಾಲ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು

ತಾಲೂಕಿನ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ “ವಿಶ್ವ ರಕ್ತದಾನಿಗಳ ದಿನ-2022 ರ ಆಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಗರ್ಭಿಣಿಯರಿಗೆ, ಹೆರಿಗೆ ಸಂದರ್ಭದಲ್ಲಿ, ಹಿಮೋಫಿಲಿಯಾ, ಥ್ಯಾಲಾಸೀಮಿಯದಂತಹ ಹಲವಾರು ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ಪ್ರತಿದಿನ ರಾಜ್ಯದಲ್ಲಿ ಹನ್ನೊಂದು ನೂರು ಯುನಿಟ್ ರಕ್ತದ ಅವಶ್ಯಕತೆ ಇದ್ದು ಶೇಕಡ 80% ನಷ್ಟು ರಕ್ತ ಪೂರೈಕೆಯಾಗುತ್ತಿದೆ, 18-60 ವರ್ಷ ದೊಳಗಿನ ವಯಸ್ಸಿನ 45 kg ತೂಕವಿರುವ, 12.5 ಗ್ರಾಂ ಹೆಚ್.ಬಿ ಇರುವ ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡ ಬಹುದು, ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಿಂದ ಕ್ಯಾನ್ಸರ್, ಯಕೃತ್, ಹೃದಯ ಸಂಬಂಧಿ ಕಾಯಿಲೆಗಳು ತಡೆಯಬಹುದು, ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ, ಆರೋಗ್ಯವನ್ನು ವೃದ್ಧಿಸುತ್ತದೆ, ಶೀಘ್ರದಲ್ಲೆ ನಮ್ಮ ಕೇಂದ್ರದಲ್ಲಿ ಬ್ಲಡ್ ಬ್ಯಾಂಕ್ ತೆರೆಯಲಾಗುತ್ತದೆ, ಇಲ್ಲಿ ರಕ್ತ ಸಂಗ್ರಹಣೆ ಮಾಡುವುದರಿಂದ ಅಪಘಾತ ಸಂದರ್ಭದಲ್ಲಿ, ಗರ್ಭಿಣಿಯರ ಹೆರಿಗೆ ಸಂದರ್ಭದಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿರಕ್ತದ ವರ್ಗಿಕರಣ ಶಾಸ್ತ್ರದಲ್ಲಿ ವೈದ್ಯ ವಿಜ್ಞಾನಿಗಳಾದ ಡಾ.ಕಾರ್ಲ್ ಲ್ಯಾಂಡ್ ಸ್ಟೈನರ್ ಅವರ ಅಪಾರ ಕೊಡುಗೆ ನೆನೆಯಲು ಅವರ ಜನ್ಮದಿನವನ್ನು 2005 ರಿಂದ ವಿಶ್ವ ರಕ್ತದಾನಿಗಳ ದಿನವನ್ನಾಗಿ ಅಚರಿಸಿ, ರಕ್ತದಾನ ಮಾಡಿದ ಮಹನೀಯರಿಗೆ ಕೃತಜ್ಞತೆಗಳನ್ನು ಅರ್ಪಿಸುವುದು ಮತ್ತು ಯುವ ಜನತೆಯನ್ನು ರಕ್ತದಾನ ಮಾಡವಂತೆ ಪ್ರೇರೇಪಿಸುವ ಕಾರ್ಯವನ್ನು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು, ಹಲವಾರು ಯುವಕ ಸಂಘಗಳು ಮತ್ತು ಸಂಸ್ಥೆಗಳು ಉಚಿತ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿವೆ, ಕಾಲಕಾಲಕ್ಕೆ ರಕ್ತ ಒದಗಿಸುವ ಸಂಘ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ, ಸೋಶಿಯಲ್ ಮೀಡಿಯಾ ಗ್ರೂಪ್‌ಗಳಲ್ಲಿ ರಕ್ತ ಒದಗಿಸುವ ಕಾರ್ಯವನ್ನು ಅದ್ಭುತವಾಗಿ ಮಾಡುತ್ತಿವೆ ಇದು ಪ್ರಶಂಸೆನೀಯ ಕಾರ್ಯ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ತೋರಣಗಲ್ಲು ಗ್ರಾಮ ಪಂಚಾಯತಿ ಸದಸ್ಯ ಹೆಚ್.ಹನುಮಂತ, ಮುಖಂಡರಾದ ದ್ಯಾವಣ್ಣ, ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸಿಬ್ಬಂದಿಯವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here