ಗೊಲ್ಲರಹಟ್ಟಿ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿಯ 8 ನೇ ವರ್ಷದ ಇರುಮುಡಿ ಕಾರ್ಯಕ್ರಮ.

0
316

ಸಂಡೂರು:ಡಿ:18:- ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಬಂಡ್ರಿ ಗ್ರಾಮ ಪಂಚಾಯಿತಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಇಂದು 8 ನೇ ವರ್ಷದ ಅಯ್ಯಪ್ಪ ಸ್ವಾಮಿಯ ಇರುಮುಡಿ ಕಾರ್ಯಕ್ರಮವನ್ನು ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಆಯೋಜಿಸಲಾಗಿತ್ತು.

ಗುರುಸ್ವಾಮಿಗಳದ ವೀರೇಶ ಸ್ವಾಮಿ ,ಸಿದ್ದೇಶಸ್ವಾಮಿಗಳು ಇಂದು 15 ಜನ ಸ್ವಾಮಿಗಳಿಗೆ ,ಇರುಮುಡಿ ಕಾರ್ಯಕ್ರಮವನ್ನು ನಿಯಮಾನುಸಾರ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಗೊಲ್ಲರಹಟ್ಟಿ ಗ್ರಾಮದ ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಗಳದ ನವೀನ್ ಸ್ವಾಮಿ, ದೇವಪ್ಪ ಸ್ವಾಮಿ, ಮಾಲಿಂಗ ಸ್ವಾಮಿ, ಲುಂಕಿ ಸ್ವಾಮಿ, ಕೋಮರಸ್ವಾಮಿ,ಯರಿಸ್ವಾಮಿ,ವೀರೇಶ್ ಸ್ವಾಮಿ, ಬೊಮ್ಮಪ್ಪ ಸ್ವಾಮಿ,ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here