ನೂತನ ಮತಯಂತ್ರಗಳ ಸಂಗ್ರಹಣಾ ಕೇಂದ್ರಕ್ಕೆ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ ಭೇಟಿ

0
241

ಧಾರವಾಡ ಫೆ.13: ಇಲ್ಲಿನ ಮಿನಿವಿಧಾನಸೌಧ ಆವರಣದಲ್ಲಿ ನೂತವಾಗಿ ನಿರ್ಮಿಸಲಾಗುತ್ತಿರುವ ವಿದ್ಯುನ್ಮಾನ ಮತಯಂತ್ರಗಳ ಸಂಗ್ರಹಣಾ ಕೇಂದ್ರಕ್ಕೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ ನಿನ್ನೆ (ಶುಕ್ರವಾರ) ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದರು.
1518 ಚ.ಮಿ. ವಿಸ್ತೀರ್ಣದ ಕಟ್ಟಡದಲ್ಲಿ ಸುಮಾರು 4 ಸಾವಿರ ಬ್ಯಾಲೆಟ್ ಯುನಿಟ್, 4 ಸಾವಿರ ಕಂಟ್ರೋಲ್ ಯುನಿಟ್ ಹಾಗೂ 4 ಸಾವಿರ ವಿವಿ ಪ್ಯಾಟ್ ಯಂತ್ರಗಳನ್ನು ಸಂಗ್ರಹಿಸಿಡಲು ಅವಕಾಶ ಕಲ್ಪಿಸಿರುವುದು ತೃಪ್ತಿದಾಯಕವಾಗಿದೆ. ಬರುವ ಮೇ ಅಂತ್ಯದೊಳಗೆ ಈ ಕಟ್ಟಡ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ತಹಶೀಲ್ದಾರ ಡಾ.ಸಂತೋಷಕುಮಾರ ಬಿರಾದಾರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಚೌಡಣ್ಣವರ, ಎಇಇ ವಿ.ಎನ್.ಪಾಟೀಲ, ಎಇ ಉತ್ತಮ ಗದಗಕರ, ಗುತ್ತಿಗೆದಾರ ಆರ್.ಜಿ.ಬೇಲೂರಮಠ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here