ಸಂಡೂರು ಪಟ್ಟಣದಲ್ಲಿ ತಾಲೂಕು ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿ

0
337

ಸಂಡೂರು:ಮಾ:02:-ಸಂಡೂರು ಪಟ್ಟಣದಲ್ಲಿ ದಿನಾಂಕ:-08/03/2023 ರಂದು ನಡೆಯುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 19 ವರ್ಷದ ವಯಸ್ಸಿನೊಳಗಿನ ಹೆಣ್ಣು ಮಕ್ಕಳಿಗೆ (ವಿದ್ಯಾರ್ಥಿನಿಯರು/ಇತರರು) ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಸಂಡೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಪಂದ್ಯಾವಳಿ ವಿಷಯದ ಬಗ್ಗೆ ಪೂರ್ವಭಾವಿ ಸಭೆಯನ್ನು ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ರವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆಸಲಾಯಿತು ಸಭೆಯಲ್ಲಿ ಎನ್ ಕೆ ವೆಂಕಟೇಶ್ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ರವಿಕುಮಾರ್ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ತಾಪಂ ಸಹಾಯಕ ನಿರ್ದೇಶಕರು ಟಿಪಿಇಓ ಷಣ್ಮುಖಪ್ಪ ಅವರುಗಳು ಹಾಜರಿದ್ದರು.

ತಂಡವನ್ನು ನೋಂದಾಯಿಸಿಕೊಳ್ಳಲು ವಿಳಾಸ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ತ್ರೀಶಕ್ತಿ ಭವನ ವೆಟರ್ನರಿ ಆಸ್ಪತ್ರೆ ಹತ್ತಿರ, ಸಂಡೂರು

ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:- 7795565422

ವಿಳಾಸ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ತ್ರೀಶಕ್ತಿ ಭವನ ವೆಟರ್ನರಿ ಆಸ್ಪತ್ರೆ ಹತ್ತಿರ, ಸಂಡೂರು

ಪಂದ್ಯಾವಳಿ ನಡೆಯುವ ಸ್ಥಳ ಮತ್ತು ದಿನಾಂಕ:-ಸಂಡೂರು, 08/02/2023 ರಂದು ನಡೆಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here