ತಾಯಿಯ ಹಾಲು ಅಮೃತದಷ್ಟೇ ಶ್ರೇಷ್ಠ; ಗ್ರಾಪಂ ಸದಸ್ಯೆ ಶ್ರೀಮತಿ ಖಾಜಾಭಿ

0
543

ಸಂಡೂರು:ಆ:01: ತಾಯಿಯ ಹಾಲು ಅಮೃತದಷ್ಟೇ ಶ್ರೇಷ್ಠ, ಗ್ರಾಮ ಪಂಚಾಯತಿ ಸದಸ್ಯ ಶ್ರೀಮತಿ ಖಾಜಾಭಿ ಹೇಳಿದರು,
ಹೊಸದರೋಜಿ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ 2022 ರ “ವಿಶ್ವ ಸ್ತನ್ಯ ಪಾನ ಸಪ್ತಾಹ” ಕಾರ್ಯಕ್ರಮದಲ್ಲಿ ಮಾತಾನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಶಿಶು ಜನಿಸಿದ ಅರ್ಧ ಗಂಟೆಯೊಳಗೆ ಕೊಡುವ ಎದೆಹಾಲು ಕೊಲೆಸ್ಟ್ರೆಮ್ ಯುಕ್ತವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ , ಶಿಶುವಿಗೆ ಆರು ತಿಂಗಳ ವರೆಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡುವ ಅವಶ್ಯಕತೆ ಇಲ್ಲ, ಎಷ್ಟೇ ಬಿಸಿಲಿರಲಿ ನೀರು ಸಹ ಕೊಡಬೇಡಿ ಯಾವುದೇ ಸಮಯದಲ್ಲಾಗಲಿ ಹತ್ತರಿಂದ ಹದಿಮೂರು ಬಾರಿ ತಾಯಿ ಎದೆ ಹಾಲು ಕೊಡ ಬೇಕು, ಗಡಿಯಾರ ನೋಡಿ ಹಾಲು ಕೊಡುವುದು ಬೇಡ, ಮಗುವಿಗೆ ಬೇಕೆನಿಸಿದಾಗಲೆಲ್ಲ ಹಾಲುಣಿಸಬೇಕು, ಅಭ್ಯಾಸಕ್ಕಾಗಿ ಶಿಶು ಹುಟ್ಟಿದ ನಂತರ ಕೆಲವರು ಜೇನು, ಔಡಲ ಎಣ್ಣೆ ಹಾಕುವುದು ಮಾಡುವರು ಇದನ್ನು ಬಿಡಬೇಕು, ಇದರಿಂದ ಅಪಾಯ ಹೆಚ್ಚು, ಎದೆ ಹಾಲು ಕೊಡುವುದರಿಂದ ಶಿಶುಗಳಿಗೆ ಜೀರ್ಣಿಸಲು ಸುಲಭವಿದ್ದು, ಮಲಬದ್ಧತೆ ದಂತಹ ಸಮಸ್ಯೆಗಳನ್ನು ತಡೆಗಟ್ಟತ್ತದೆ,ಆರು ತಿಂಗಳ ನಂತರ ಎರಡು ವರ್ಷಗಳ ವರೆಗೆ ಪೂರಕ ಆಹಾರದೊಂದಿಗೆ ಎದೆಹಾಲು ಕಡ್ಡಾಯವಾಗಿ ಕೊಡಲೇಬೇಕು ಎಂದು ತಿಳಿಸಿದರು,

ಪ್ರತಿ ವರ್ಷವೂ ವಿಶ್ವ ಸ್ತನ್ಯ ಪಾನ ಸಪ್ತಾಹವನ್ನು 120 ದೇಶಗಳು ಆಚರಿಸಿ ಎದೆ ಹಾಲಿನ ಮಹತ್ವ ತಿಳಿಸುವ ಸಲುವಾಗಿ ಆಗಸ್ಟ್ ಒಂದ ರಿಂದ ಏಳರವರೆಗೆ ತಾಯಂದಿರಿಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು, ಉದ್ಯೋಗಸ್ಥ ಮಹಿಳೆಯರು ಮಕ್ಕಳಿಗೆ ಎದೆ ಹಾಲು ಕೊಡಲು ಸಮಯ ನಿಗದಿ ಪಡಿಸಿಕೊಂಡು ಹಾಲುಕೊಡಬೇಕು, ಕೃತಕ ಹಾಲು ಕೊಡುವುದರಿಂದ ಮಕ್ಕಳಿಗೆ ಅತಿಸಾರ ಬೇದಿ, ನ್ಯುಮೋನಿಯಾ ದಂತಹ ಸಮಸ್ಯೆಗಳಿಗೆ ತುತ್ತಾಗುತ್ತವೆ, ಶಿಶು ಮರಣಕ್ಕೂ ಕಾರಣ ವಾಗುತ್ತದೆ, ತಾಯಿ ಎದೆ ಹಾಲು ಕೊಡುವುದರಿಂದ ತಾಯಿ ಮಗುವಿನ ಬಾಂಧವ್ಯ ವೃದ್ಧಿಯಾಗುತ್ತದೆ,‌ ಶಿಶು ಲವಲವಿಕೆಯಿಂದ ಇರುತ್ತದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಾಯಣ್ಣ, ಖಾಜಾಭಿ,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸಿಬ್ಬಂದಿ ಸತ್ಯವ್ವ,ರೇಣುಕಾ, ಅಂಗನವಾಡಿ ಕಾರ್ಯಕರ್ತೆ ಕಲಾವತಿ,ಶಾಂತಮ್ಮ,ಅನಸೂಯಾ, ಮಂಗಳಗೌರಿ ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here