ಸಂಡೂರು ಶಿಶು ಅಭಿವೃದ್ಧಿ ಇಲಾಖೆಯಲ್ಲಿ ‘ರಾಷ್ಟ್ರೀಯ ಪೋಷಣ್ ಅಭಿಯಾನ’ ತಾಲೂಕು ಮಟ್ಟದ ಉದ್ಘಾಟನಾ ಕಾರ್ಯಕ್ರಮ

0
399

ಸಂಡೂರು:ಸೆ:08:-ಸಂಡೂರು ಪಟ್ಟಣದ ಶಿಶು ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆ ಅಡಿಯಲ್ಲಿ ಪೋಷಣೆ ಮಾಸಾಚರಣೆ ಸೆಪ್ಟಂಬರ್ 2021 ರ ಪ್ರಯುಕ್ತ ತಾಲೂಕು ಮಟ್ಟದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದಲ್ಲಿ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಕೆ.ಪ್ರೇಮ್ ಮೂರ್ತಿರವರು ಭಾಗವಹಿಸಿ ಮಾತನಾಡಿ
ಪೋಷಣೆ ಮಾಸಾಚರಣೆ ಸೆಪ್ಟೆಂಬರ್‌ 2021ರ ಒಂದು ತಿಂಗಳ ಅವಧಿಯಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಯಾವ ರೀತಿ ಆಚರಿಸಬೇಕು ಜನರಿಗೆ ಯೋಜನೆಯ ಪ್ರಾಮುಖ್ಯತೆ ಕಾರ್ಯಕ್ರಮಗಳ ಉದ್ದೇಶ ಮಕ್ಕಳು ಮತ್ತು ಅಪೌಷ್ಠಿಕ ಮಕ್ಕಳು ಗರ್ಭಿಣಿಯರಿಗೆ ಬಾಣಂತಿಯರಿಗೆ ಹಾಗೂ ಕಿಶೋರಿಯರಿಗೆ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.

ಹಾಗೂ ಸದರಿ ಕಾರ್ಯಕ್ರಮದಲ್ಲಿ 14ನೇ ವಾರ್ಡಿನ ಸದಸ್ಯರಾದ ಸಿರಾಜ್ ಹಾಗೂ 15ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಲಕ್ಷ್ಮೀದೇವಿ,ಮುಖಂಡರಾದ ಭಾಸ್ಕರ್, ಅಂಜಿನಿ, ಹಾಗೂ SDMC ಸದಸ್ಯರು ಶಾಲೆ ಮುಖ್ಯ ಶಿಕ್ಷಕರಾದ ರತ್ನಮ್ಮ ವಲಯ ಮೇಲ್ವಿಚಾರಕಿಯರಾದ ಶ್ರೀಮತಿ ಶರಣಬಸವೇಶ್ವರ ತಾರಾನಗರ ಮೇಲ್ವಿಚಾರಕಿಯರಾದ ಎಂ.ಎಂ.ಬಾಜಂತ್ರಿ, ಹಾಗೂ ತಾಲೂಕು ಸಂಯೋಜಕರಾದ ಗಂಗಾಧರ, ಸಹಾಯಕ ಸಂಯೋಜಕರು ಲಿಂಗರಾಜ್, ಸಂಡೂರು ಎ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು/ ಸಹಾಯಕಿಯರು ಆಶಾ ಕಾರ್ಯಕರ್ತರು, ಹಾಗೂ ಗರ್ಭಿಣಿ, ಬಾಣಂತಿಯರು ಮುದ್ದು ಮಕ್ಕಳು ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here