ಒತ್ತುವರಿ ಜಾಗದಲ್ಲಿ ಕಟ್ಟಿಸಿರುವ ವಾಣಿಜ್ಯ ಮಳಿಗೆಗಳನ್ನು ತೆರವು ಗೊಳಿಸಲು: ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ

0
321

ಕೊಟ್ಟೂರು: ಪಟ್ಟಣ ಪಂಚಾಯ್ತಿಕಚೇರಿಯ ಕೊಟ್ಟೂರೇಶ್ವರ ಸಭಾಂಗಣದಲ್ಲಿ ಬುಧವಾರ ನಡೆದ ಬಜೆಟ್ ಮತ್ತು ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ 2023-2024 ನೇ ಸಾಲಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ 20.91 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ವಿವಿಧ ಮೂಲಗಳಿಂದ 28.89 ಕೋಟಿ ಆದಾಯ ಹಾಗೂ 22,41 ಕೋಟಿ ಖರ್ಚು ಅಂದಾಜಿಸಲಾಗಿದೆ. ಆಸ್ತಿ, ನೀರಿನ ತೆರಿಗೆ, ಮಳಿಗೆ ಬಾಡಿಗೆ ಉದ್ದಿಮೆ ಪರವಾನಿಗೆ ಶುಲ್ಕಗಳು, ಜಾಹಿರಾತು ಶುಲ್ಕ, ಖಾತಾ ಪುರವಣೆ,ವರ್ಗಾವಣೆ ಶುಲ್ಕಗಳು, ಕಟ್ಟಡ ಪರವಾನಿಗೆ ಮುಂತಾದವುಗಳಿಂದ ಅಂದಾಜು ಆದಾಯ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.

ಎಸ್ ಎಪ್ ಸಿ ಮುಕ್ತನಿಧಿ, 15 ನೇ ಹಣಕಾಸು ಅನುದಾನ ಮುಂತಾದವುಗಳಿಂದ 9.95 ಕೋಟಿ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದರು. ನೀರು, ರಸ್ತೆ, ಬೀದಿ ದೀಪ,ಉದ್ಯಾನವನ ನಿರ್ಮಾಣ, ಸಾರ್ವಜನಿಕ ಶೌಚಾಲಯ, ಕಚೇರಿ ಉಪಕರಣಗಳು, ನೈರ್ಮಲ್ಯ ವಿಭಾಗದ ದಾಸ್ತಾನು ಮುಂತಾದ ಸೌರ್ಕರ್ಯಗಳನ್ನು ಕಲ್ಪಿಸಲು 7,85 ಕೋಟಿ ಹಣ ಮೀಸಲಿಡಲಾಗಿದೆ ಎಂದರು.

ಸಭೆ ಆರಂಭವಾಗುತ್ತಿದ್ದಂತೆ ಬಹುತೇಕ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ಜನತೆ ಬಳಲುತ್ತಿದ್ದರೂ ಮುಖ್ಯಾಧಿಕಾರಿಗಳು ಕಳೆದ ಎಂಟು ತಿಂಗಳಿಂದ ಸಭೆ ಕರೆಯದೆ ನಿರ್ಲಕ್ಷಿಸಿದ್ದಕ್ಕೆ ಸದಸ್ಯ ಈಶ್ವರಗೌಡ ಆಕ್ರೋಶ ವ್ಯಕ್ತಪಡಿಸಿದರು.

ಹಳೆಯ ವಸತಿ ವಿನ್ಯಾಸಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿ ಎಂದು ಸದಸ್ಯ ಬೋರವೆಲ್ ತಿಪ್ಪೇಸ್ವಾಮಿ ಹೇಳಿದರು. ಮುಖ್ಯಾಧಿಕಾರಿ ಉತ್ತರಿಸಿ ಬಡಾವಣೆಗಳನ್ನು ಪಟ್ಟಿಮಾಡಿ ಸೌಕರ್ಯಗಳನ್ನು ಕಲ್ಪಸಲು ಮುದಾಗುವುದಾಗಿ ತಿಳಿಸಿದರು.

ಜೋಳದ ಕೂಡ್ಲಿಗಿ ರಸ್ತೆಯಲ್ಲಿ ಬರುವ ಹುಲುಮನಿ ಮಲ್ಲೇಶ್ ಯವರ ಅನಧಿಕೃತವಾಗಿ ಒತ್ತುವರಿ ಜಾಗದಲ್ಲಿ ಕಟ್ಟಿಸಿರುವ ವಾಣಿಜ್ಯ ಮಳಿಗೆಗಳನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ ಸೂಚಿಸಿದರು.ಮುಖ್ಯಾಧಿಕಾರಿಗಳು ಈಗಾಗಲೇ 2000 ಚದುರಡಿಗಳಷ್ಟು ಒತ್ತುವರಿ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಉತ್ತರಿಸಿದರು.

ಒಟ್ಟಾರೆ ಸದಸ್ಯರ ವಾದ ವಿವಾದಗಳ ಮಧ್ಯ ಬಜೆಟ್ ಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸದೆ ಅನುಮೋದನೆಗೊಂಡಿದ್ದು ಬಜೆಟ್ ಸಭೆಯ ವಿಶೇಷವಾಗಿತ್ತು.

ನಂತರ ಸುದ್ದಿಗೋಷ್ಠಿಯವರ ಎಸ್ಸಿ ಎಸ್ಟಿ ಅಂಗವಿಕಲಚೇತನಕ್ಕೆ ಅನುದಾನ ಮತ್ತು ನೇರ ಸಾಲ ಸ್ಲಂ ವರ್ಡ್ಗಳಲ್ಲಿ ಅನುದಾನವನ್ನು ಕಾಯ್ದಿರಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಾಗೂ ಮುಖ್ಯ ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಭಾರತಿ ಸುಧಾಕರಗೌಡ ಪಾಟೀಲ್, ಉಪಾಧ್ಯಕ್ಷ ಷಫೀ, ಸದಸ್ಯರಾದ ಬಾವಿಕಟ್ಟೆ ಶಿವಾನಂದ, ಕೆಂಗರಾಜ್, ಗಂಗಮ್ಮನಹಳ್ಳಿ ಸಿದ್ಧಯ್ಯ, ವೀಣಾ ವಿವೇಕಾನಂದಗೌಡ, ಕೊರಚರ ಹನುಮವ್ವ.ಶೈಲಜಾ ರಾಜೀವ, ಕಾಸಲ ಸಾವಿತ್ರಮ್ಮ ಪ್ರಕಾಶ್,ಇಂದಿರಾ ಭರಮಪ್ಪ, ಮರಬದ ಕೊಟ್ರೇಶ್, ಜಗದೀಶ್ ಮುಂತಾದವರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here