ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ-ಶಿಕ್ಷಕ ಎಂ.ಎಸ್.ಗೋಪಾಲ್ ನಾಯ್ಕ್

0
288

ವಿಜಯನಗರ/ಕಾನಹೊಸಹಳ್ಳಿ:19:- ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಾಗೂ ಭವಿಷ್ಯದ ಪ್ರತಿಯೊಂದು ಕ್ಷಣಗಳನ್ನು ಸುಂದರಗೊಳಿಸುವಲ್ಲಿ ಶಿಕ್ಷಕರ ಪಾತ್ರ ತುಂಬಾ ಅಪಾರವಾದದ್ದು ಎಂದು ಕಾನಹೊಸಹಳ್ಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂಎಸ್ ಗೋಪಾಲ್ ನಾಯ್ಕ್ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಎ.ಚಂದ್ರಪ್ಪ ಮುಖ್ಯಶಿಕ್ಷಕರ ವಯೋನಿವೃತ್ತಿ ಪಡೆದ ಪ್ರಯುಕ್ತ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು

ಚಂದ್ರಪ್ಪನವರು ರಾಯಚೂರು ಜಿಲ್ಲೆ ಸಿಂಧನೂರು ಹಲಗೂರು ಪ್ರೌಢಶಾಲೆಯಲ್ಲಿ, ಚಿಕ್ಕಜೋಗಿಹಳ್ಳಿ ಪ್ರೌಢಶಾಲೆಯಲ್ಲಿ, ಸಿಂಧನೂರು ಗೋರಬಾಳ ಪ್ರೌಢಶಾಲೆಯಲ್ಲಿ, ನಂತರ ಕಾನಹೊಸಹಳ್ಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ದಿನಾಂಕ31.5.2022 ರಂದು ನಿವೃತ್ತರಾದರು.
ಚಂದ್ರಪ್ಪನವರು ಬಾಲಕಿಯರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಶಾಲಾ ಮಕ್ಕಳಿಗೆ ಹಾಗೂ ಪೋಷಕರ ವರ್ಗದವರಿಗೂ ಮೆಚ್ಚುಗೆಯ ಶಿಕ್ಷಕರಾಗಿದ್ದು ಅವರ ಕಾರ್ಯವೈಖರಿ ಶಿಕ್ಷಕ ವರ್ಗಕ್ಕೆ ಆದರ್ಶವಾಗಿದೆ. ಅವರು ಇನ್ನು ಸ್ವಲ್ಪ ದಿವಸ ನಮ್ಮ ಶಿಕ್ಷಕರ ಎಲ್ಲರ ಜೊತೆಗೆ ಇರಬೇಕಾಗಿತ್ತು ಎಂದು ಶಿಕ್ಷಕ ಚಂದ್ರಪ್ಪನವರ ಕಿರು ಪರಿಚಯ ಮಾಡಿಕೊಟ್ಟು ತಮ್ಮ ಕಣ್ಣುಗಳಲ್ಲಿ ನೀರು ತುಂಬಿ ನೋವಿನಿಂದ ಎಂ.ಎಸ್. ಗೋಪಾಲನಾಯ್ಕ್ ಮಾತನಾಡಿದರು.

ನಂತರ ಈ ಕಾರ್ಯಕ್ರಮದಲ್ಲಿ ಚಿಕ್ಕಜೋಗಿಹಳ್ಳಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಚಿತ್ರದುರ್ಗದಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಚಾರ್ಯ ಹನುಮಂತರಾಯರವರು ಈ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು

ಇನ್ನು ಹಲವಾರು ಶಿಕ್ಷಕರು ಶಾಲೆಯ ಸಿಬ್ಬಂದಿ ವರ್ಗದವರು. ಶಾಲೆಯ ಮಕ್ಕಳು ಈ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಚಂದ್ರಪ್ಪನವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯಗುರುಗಳಾದ ಎಸ್ ಮಂಜುನಾಥ್. ನಿರೂಪಣೆ ಶ್ರೀ ವೀರಣ್ಣ ಗಳ ಮಾರಪ್ಪ. ಸ್ವಾಗತ ಕೆಎಂ ಚಿದಾನಂದಪ್ಪ ಶಿಕ್ಷಕರು. ಚಂದ್ರಪ್ಪ ಶಿಕ್ಷಕರ ಕಿರುಪರಿಚಯ ಎಂಎಂಎಸ್ ಗೋಪಾಲನಾಯಕ. ಪ್ರಾರ್ಥನೆ ಕುಮಾರಿ ಅಂಕಿತ. ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕೆ ಬಸವರಾಜ್. ಎಸ್ ಕೆ ಡಿಡಿವಿ ಪ್ರೌಢಶಾಲೆಯ ಶಿಕ್ಷಕರಾದ ಸಣ್ಣಮನಿ.ಶೇಖರಪ್ಪ ಮು.ಗು. ಕೂಡ್ಲಿಗಿ. ಶಿಕ್ಷಕರಾದ ಗಿರಿಧರ್ ನಾಯಕ್. ಎಸ್ಡಿಎಂಸಿ ವಿಜಯಕುಮಾರ್. ಭೋವಿ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್ ಬುಡ್ಡ ರೆಡ್ಡಿ. ರೈತ ಮುಖಂಡರಾದ ಜಿ. ಪಿ. ಗುರುಲಿಂಗಪ್ಪ, ಶಿಕ್ಷಕರಾದ ವೀರಭದ್ರಪ್ಪ ಶೇಖರಪ್ಪ. ಯಲ್ಲೇಶ.ಮಹಮ್ಮದ್.ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ ಸಿದ್ದಾಪುರ. . ಎಸ್ಡಿಎಂಸಿ ವಿಜಯಕುಮಾರ್. ವೈಭವ ಶಾಲೆಯ ಪ್ರಕಾಶ್. ಸೇರಿದಂತೆ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ-ಶಿಕ್ಷಕಿಯರು. ಶಾಲಾ ಮಕ್ಕಳು ಮತ್ತು ಸಿಬ್ಬಂದಿ ವರ್ಗ. ಚಂದ್ರಪ್ಪ ಶಿಕ್ಷಕರ ಕುಟುಂಬ ವರ್ಗದವರು. ಸ್ನೇಹಿತರು ಬಂಧು ಬಳಗ. ಹಲವಾರು ಶಾಲೆಗಳಿಂದ ಬಂದ ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಡಿ.ಎಂ. ಈಶ್ವರಪ್ಪ. ಸಿದ್ದಾಪುರ

LEAVE A REPLY

Please enter your comment!
Please enter your name here