ವಿದ್ಯಾರ್ಥಿಗಳು ಯಶಸ್ಸಿನ ಹಾದಿಗೆ ತಲುಪಬೇಕಾದರೆ ಸಾಧನೆಯ ಮಾರ್ಗವನ್ನು ಅನುಸರಿಸಬೇಕು: ಎಂ.ದೊಡ್ಡಬಸವರಾಜ

0
141

ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ವಿದ್ಯಾರ್ಥಿಗಳು ಯಶಸ್ಸಿನ ಹಾದಿಗೆ ತಲುಪಬೇಕಾದರೆ ಸಾಧನೆಯ ಮಾರ್ಗವನ್ನು ಅನುಸರಿಸಬೇಕೆಂದು ಕನಕದಾಸ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ ಹೇಳಿದರು.

ಅವರು ನಗರದ ಕನಕದಾಸ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸೋಮವಾರ ಮಾತನಾಡಿ, ದ್ವಿತೀಯ ಪಿಯುಸಿ ಹಂತವೆಂಬುದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಾಹದ್ದಾಗಿದೆ. ಈ ಹಂತದಲ್ಲಿ ಕಲಿಯುವ ವಿದ್ಯೆಯು ಮುಂದಿನ ಉತ್ತಮ ಉದ್ಯೋಗವನ್ನು ಹೊಂದಲು ಸಹಕಾರಿಯಾಗಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾಗಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡರೆ ಪಾಲಕರಿಗೆ ಹಾಗೂ ಕಲಿಸಿದ ಗುರುಗಳ ಶ್ರಮ ಸಾರ್ಥಕವಾದಂತಾಗುವುದು ಎಂದರು.

ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ನಾಗರಾಜ ವಲ್ಕಂದಿನ್ನಿ ಮಾತನಾಡಿ ಇಂದಿನ ಯುವಕರು ದುಶ್ಚಟದ ದಾಸರಾಗಿದ್ದಾರೆ. ಈ ಮೊಬೈಲ್‌ಗಳ ಹಾವಳಿಯಿಂದ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಅದಕ್ಕಾಗಿ ವಿದ್ಯಾರ್ಥಿಳು ತಮ್ಮ ಅಮೂಲ್ಯವಾದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಲಕ್ಷ್ಮಣ ಹಂಚಿನಾಳ ಮಾತನಾಡಿ ಭೂಮಿಗೆ ಬಿದ್ದಂತಹ ಬೀಜ ಎದೆಗೆ ಬಿದ್ದಂತಹ ಅಕ್ಷರ ಎಂದಾದರೊಂದು ದಿನ ಫಲ ನೀಡುವಂತೆ ಇಂದಿನ ವಿದ್ಯಾರ್ಥಿಗಳು ಬದಲಾಗಬೇಕೆಂದು ತಿಳಿಸಿದರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಿದ್ದಪ್ಪ ಖೈರವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಚಾರ್ಯ ಜಡಿಸ್ವಾಮಿ ಗುಡದೂರು ಉಪನ್ಯಾಸಕರಾದ ಶಶಿಕಲಾ ಹಿರೇಲಿಂಗಪ್ಪ ಹಂಚಿನಾಳ ಸೂರ್ಯನಾರಾಯಣ ರಾಠೋಡ್ ತಿಮ್ಮಪ್ಪ ಕಲ್ಮಂಗಿ ಚಂದಪ್ಪ ಹಾಲಾಪೂರು ಹಂಪಮ್ಮ ಸಿಬ್ಬಂದಿಗಳಾದ ವಿನೂತ ಬಾಬು ಸೇರಿಂದತೆ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ:ಅವಿನಾಶ್ ದೇಶಪಾಂಡೆ

LEAVE A REPLY

Please enter your comment!
Please enter your name here