ವಿಶ್ವ ಕ್ಷಯರೋಗ ದಿನಾಚರಣೆ ಕುರಿತು ಹೊಸದರೋಜಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ,

0
181

ಸಂಡೂರು:ಮಾ:24:- ತಾಲೂಕಿನ ಹೊಸದರೋಜಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೆ.ಹೆಚ್.ಪಿ.ಟಿ ಸಂಸ್ಥೆ, ಬಳ್ಳಾರಿ, ಹಾಗೂ ಗ್ರಾಮ ಪಂಚಾಯತಿ, ಸರ್ಕಾರಿ ಪ್ರೌಢಶಾಲೆ ಹೊಸದರೋಜಿ, ಇವರ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಕ್ಷಯರೋಗ ದಿನಾಚರಣೆ” ಪ್ರಯುಕ್ತ ಕ್ಷಯರೋಗ ನಿರ್ಮೂಲನಾ ಗ್ರಾಮ ರೂಪಿಸುವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಮಾಯಣ್ಣ ಅವರು ಮಾನ್ಯ ಪ್ರಧಾನ ಮಂತ್ರಿಗಳ ಆಶಯದಂತೆ 2025 ಕ್ಕೆ “ಕ್ಷಯರೋಗ ಮುಕ್ತ ಭಾರತ” ನಿರ್ಮಾಣ ರೂಪಿಸಲು ಸರ್ವ ವಿಧಾನದಲ್ಲೂ ಎಲ್ಲರೂ ಕೈ ಜೋಡಿಸಲು ಸಿದ್ದ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಕ್ಷಯರೋಗದ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ತ್ವರಿತವಾಗಿದೆ, ಹೊಸರೋಗಿಗಳು ಸಂಖ್ಯೆ ಸಹ ಹೆಚ್ಚು ಕಂಡು ಬರುತ್ತಿವೆ, ಅವರಿಗೆ ಸೂಕ್ತ ಡಾಟ್ಸ್ ಚಿಕಿತ್ಸೆ ನೀಡಲಾಗುತ್ತಿದೆ, ಪತ್ತೆ ಹಚ್ಚುವ ಕೆಲಸವನ್ನು ಹೀಗೆ ಮುಂದುವರೆಸಲಾಗುವುದು ಕ್ರಮೇಣ ಹೊಸ ರೋಗಗಳು ಕಡಿಮೆಯಾಗಬಹುದು,ನಿರಂತರ ಕೆಮ್ಮು, ಜ್ವರ,ತೂಕ ಕಡಿಮೆಯಾಗುವುದು,ಹಸಿವೆ ಇಲ್ಲದಿರುವವರು ಸ್ವಯಂ ಪ್ರೇರಣೆಯಿಂದ ತಪಾಸಣೆ ಒಳಗಾಗಬೇಕು, ನಿ-ಕ್ಷಯ್ ಮಿತ್ರ ಯೋಜನೆಯಂತೆ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಆಹಾರ ಸಾಮಾಗ್ರಿಗಳನ್ನು ನೀಡಲು ಸಮುದಾಯ ಮುಂದಾಗ ಬೇಕು, ಕ್ಷಯ ರೋಗವನ್ನು ದೂರ ಇಡಬೇಕು ಕ್ಷಯರೋಗಿಯನ್ನಲ್ಲ ಎಂದ ಅವರು ತಿಳಿಸಿದರು, ಜಾಗೃತಿ ಕಾರ್ಯಕ್ರಮದ ನಂತರ ಡಾಟ್ಸ್ ಪ್ರೋವೈಡರ್ಸ್ ಮೀಟಿಂಗ್ ನಡೆಸಿ ರೋಗಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು, ನಂತರ ಕೆ.ಹೆಚ್.ಪಿ.ಟಿ ಸಂಸ್ಥೆಯಿಂದ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಪುಷ್ಟಿ ಪೌಡರ್ ಮತ್ತು ಹಣ್ಣುಗಳನ್ನು ವಿತರಣೆ ಮಾಡಲಾಯಿತು,

ಈ ಸಂದರ್ಭದಲ್ಲಿ ಗ್ರಾಮ‌ ಪಂಚಾಯತಿ ಸದಸ್ಯರಾದ ಗಣೇಶ್, ಆಪ್ತ ಸಮಾಲೋಚಕ ಪ್ರಶಾಂತ್, ಆರೋಗ್ಯ ನಿರೀಕ್ಷಣಾಧಿಕಾರಿ ಇಸ್ಮಾಯಿಲ್, ಕೆ.ಹೆಚ್.ಪಿ.ಟಿ ಸಂಯೋಜಕ ರಾಜು,ಪ್ರೌಢ ಶಾಲೆಯ ಶಿಕ್ಷಕ ಹಾಗು ಸ್ಕೌಟ್ ಮಾಸ್ಟರ್ ರಾಜಶೇಖರ್, ಸಿ.ಹೆಚ್.ಒ ಎರ್ರಿ ಸ್ವಾಮಿ, ರೇಣುಕಾ, ಆಶಾ ಕಾರ್ಯಕರ್ತೆ ಮಾಂತಮ್ಮ, ಜ್ಯೋತಿ, ಶ್ರೀದೇವಿ, ಲತಾ, ಮತ್ತು ಗ್ರಾಮದ ಮುಖಂಡರು ಹಾಗೂ ಶಾಲೆಯ ಮಕ್ಕಳು ಹಾಜರಿದ್ದರು.

LEAVE A REPLY

Please enter your comment!
Please enter your name here