ಸಿಎಂ ಬಿಟ್ಟು,ಎಲ್ಲಾ ತ್ಯಾಗಕ್ಕೂ ಸಿದ್ದ ಎಂದು ಹೇಳಿ ಬಂದಿದ್ದಾರಂತೆ ಯಡಿಯೂರಪ್ಪ..!

0
140

ಕಳೆದವಾರ ದೆಹಲಿಗೆ ಭೇಟಿ ನೀಡಿ, ಬೆಂಗಳೂರಿಗೆ ಬಂದೀಳಿದ ಕ್ಷಣ ದಿಂದ ಈ ಹೊತ್ತಿನ ತನಕವೂ ಮುಖ್ಯಮಂತ್ರಿ ಸ್ಥಾನ ದಿಂದ ಬಿಎಸ್.ಯಡಿಯೂರಪ್ಪರನ್ನು ಪದಚ್ಯುತಿಗೊಳಿಸುವ ಸುದ್ದಿಗಳು, ನಾನಾ ವಿಶ್ಲೇಷಣೆಗಳು, ಪ್ಯಾನಲ್ ಚರ್ಚೆಗಳು ಟಿವಿ ಚಾನೆಲ್ ಗಳಲ್ಲಿ ಭಾರೀ ಸೌಂಡ್ ಮಾಡ್ತಾಯಿವೆ. ಯಡಿಯೂರಪ್ಪರನ್ನು ಕೆಳಗಿಳಿಸಿದ ಸುದ್ದಿಯನ್ನು ಬಿತ್ತರಿಸುವ ತನಕವೂ ನೆಮ್ಮದಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಚಾನೆಲ್ ಗಳು ಪದತ್ಯಾಗವನ್ನು ಜಿದ್ದಿಗೆ ಬಿದ್ದು ದಿನಪೂರ್ತಿ ಬ್ರೇಕಿಂಗ್ ನ್ಯೂಸ್ ಮಾಡ್ತಾಯಿವೆ.

ನಿಜಕ್ಕೂ, ದೆಹಲಿ ಭೇಟಿಯ ಕಾಲಕ್ಕೆ ನಡೆದಿರ ಬಹುದಾದ ಮಾತುಕತೆಗಳು ಈ ಕ್ಷಣಕ್ಕೂ ಯಾರಿಗೆ ಗೊತ್ತಾಗದಷ್ಟು ಗೌಪ್ಯವಾಗಿವೆ. ಪ್ರಧಾನಂತ್ರಿ ನರೇಂದ್ರಮೋದಿ, ಗೃಹಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ರವರು ಪದತ್ಯಾಗ ಮಾಡುವ ಧಾಟೀಯಲ್ಲಿ ಯಡಿಯೂರಪ್ಪರ ಜೊತೆಗೆ ಚರ್ಚಿಸಿರ ಬಹುದು. ಇದಕ್ಕೆ ಉತ್ತರವಾಗಿ ಯಡಿಯೂರಪ್ಪ ಹೇಳಿ ಬಂದಿರುವ ವಿಚಾರವಾದರೂ ಏನು? ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ. ತಾಳ್ಮೆಯಿಂದ ತಿಳಿದುಕೊಳ್ಳುವ ಪತ್ರಿಕೋದ್ಯಮವನ್ನು ಯಾರು ಕೂಡ ಮಾಡ್ತಾಯಿಲ್ಲ. ಬದಲಿಗೆ ಆತುರಕ್ಕೆ ಬಿದ್ದವರಂತೆ ಎಲ್ಲರೂ ತಮ್ಮ ಮೂಗಿನ ನೇರಕ್ಕೇನೆ ತಮಗಿಷ್ಟ ಬಂದ ಕೋನದಲ್ಲಿ ವಿಶ್ಲೇಷಿಸುತ್ತಿದ್ದಾರೆ.

ಒತ್ತಡ ಹೇರಿ, ಬಲವಂತದ ಪದತ್ಯಾಗಕ್ಕೆ ಕೈ ಹಚ್ಚಿದರೇ ಆಗುವ ಅನಾಹುತಗಳ ಬಗ್ಗೆ ಏರಿದ ಧ್ವನಿಯಲ್ಲಿಯೇ ವರಿಷ್ಠರಿಗೆ ಯಡಿಯೂರಪ್ಪ ಖಡಕ್ ಎಚ್ಚರಿಕೆ ಕೊಟ್ಟು ಬಂದಿದ್ದಾರೆನ್ನುವ ಮಾತುಗಳು ಬಿಎಸ್ವೈ ಬೆಂಬಲಿತರ ಮಧ್ಯ ದಿಂದ ಜೋರಾಗಿ ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿಯೇ ಹಲವು ವಿದ್ಯಮಾನಗಳು ಜರುಗುತ್ತಲಿವೆ. ಈ ಪೈಕಿ ಪ್ರಮುಖ ವಿದ್ಯಮಾನ ಬಹಿರಂಗವಾಗಿಯೇ ಯಡಿಯೂರಪ್ಪರನ್ನು ಬೆಂಬಲಿಸಿ ಮಠಾಧೀಶರು ಅಖಾಡಕ್ಕೀಳಿದಿರುವುದು.

ಟಿವಿ ಚಾನೆಲ್ ಗಳಲ್ಲಿ ಪದತ್ಯಾಗ ಬಿರುಸು ಪಡೆದುಕೊಳ್ಳುತ್ತಿದ್ದಂತೆಯೇ ಮಠಾಧೀಶರ ಸಮೂಹವೇ ಯಡಿಯೂರಪ್ಪ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಿಕೊಂಡು ಅವರ ರಕ್ಷಣೆಗೆ ನಿಂತೇ ಬಿಟ್ರು. ಮಠಗಳನ್ನು ಬಿಟ್ಟು ಈ ತರಹ ರಾಜಕೀಯ ವ್ಯಕ್ತಿಯೊಬ್ಬರ ಪರವಾಗಿ ಮಠಾಧೀಶರುಗಳು ಬಹಿರಂಗವಾಗಿ ಬೆಂಬಲಕ್ಕೆ ನಿಂತಿದ್ದಂತಹ ಸನ್ನಿವೇಶಗಳನ್ನು ಕರ್ನಾಟಕ ರಾಜಕಾರಣದಲ್ಲಿ ದಾಖಲಾಗಿಲ್ಲ. ಆದರೆ ಇವತ್ತು ಮಠಾಧೀಶರು ಯಡಿಯೂರಪ್ಪ ಪರವಾಗಿ ಅಖಾಡಕ್ಕೆ ಧುಮ್ಮಿಕ್ಕಿ, ಅವರನ್ನು ತೆಗೆದರೆ ಬಿಜೆಪಿ ಅಸ್ಥಿತ್ವವನ್ನೆ ಕಳೆದುಕೊಳ್ಳುತ್ತದೆನ್ನುವ ಖಡಕ್ ಎಚ್ಚರಿಕೆ ಬೇರೆ ನೀಡುತ್ತಿದ್ದಾರೆ.

ಈ ವಿದ್ಯಮಾನವನ್ನು ಅವಲೋಕಿಸುತ್ತಾ ಹೊದ್ದಂತೇ ಅರ್ಥವಾಗುವ ಸಂಗತಿ ಏನೇಂದರೇ, ಅಷ್ಟು ಸುಲಭಕ್ಕೆ ಸಿಎಂ ಕುರ್ಚಿಯ ಪದತ್ಯಾಗಕ್ಕೆ ಯಡಿಯೂರಪ್ಪ ಸಿದ್ದರಿಲ್ಲ ಎನ್ನುವುದು ಸ್ಪಷ್ಟವಾಗುತ್ತೆ. ಈ ಕಾರಣಕ್ಕೇನೆ ದೆಹಲಿ ಭೇಟಿ ವೇಳೆ ಕುರ್ಚಿ ಬಿಡಿ ಎನ್ನುವ ಯೋಜನೆಗೆ ಬಿಎಸ್ವೈ ಕೇರ್ ಮಾಡಿಲ್ಲ ಎನ್ನುವ ವಿಶ್ಲೇಷಣೆಗಳು ಹೊರಗೆ ಕೇಳಿಸುವಷ್ಟರ ಮಟ್ಟಿಗೆ ಅವರ ಬೆಂಬಲಿತ ಶಾಸಕ,ಸಂಸದರ ಮಧ್ಯೆ ಸಾಕಷ್ಟು ಬಿರುಸುಗೊಂಡಿರುವುದು. ಮಠಾಧೀಶರು ಬಹಿರಂಗಕ್ಕೆ ನಿಂತಿರ ಬಹುದೆನ್ನುವುದು ವರ್ತಮಾನದ ವಿಶ್ಲೇಷಣೆಯು ಹೌದಾಗಿದೆ.

ಆಗಾದರೇ, ಮೋದಿ, ಷಾ, ನಡ್ಡಾಗೆ ಯಡಿಯೂರಪ್ಪ ಹೇಳಿ ಬಂದಿರುವ ಉತ್ತರವಾದರೂ ಏನು? ನೀಡಿರುವ ಎಚ್ಚರಿಕೆ ಏನು? ಈ ತರಹದ ಸನ್ಸೆಷನ್ ನ್ಯೂಸ್ ಗಳು, ವ್ಯೂಹ್ಸ್ ಗಳು ಈ ಕ್ಷಣಕ್ಕೂ ಯಾವ ಚಾನೆಲ್ ಗಳು ಬಿತ್ತರಿಸುತ್ತಿಲ್ಲ ಹಾಗೂ ಪತ್ರಿಕೆಗಳು ಕೂಡ ಒಂದು ಲೈನ್ ಸುದ್ದಿ ಕಾಲಂನಲ್ಲೂ ಪ್ರಕಟಿಸಿಲ್ಲ……! ಆಗಾದರೇ, ಪದತ್ಯಾಗಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪರ ನಡೆ ಏನೀರಬಹುದು…..!
ಎನ್ನುವುದು ಸಾರ್ವಜನಿಕವಾಗಿ ಸಹಜ ಕುತೂಹಲವೇ ಹೌದು.

ಕಳೆದವಾರ, ಪ್ರಧಾನಮಂತ್ರಿ ನರೇಂದ್ರಮೋದಿ, ಗೃಹಸಚಿವ ಅಮಿತ್ ಷಾ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ರವರು, ಸಿಎಂ ಹುದ್ದೆಯೊಂದನ್ನು ಹೊರತು ಪಡಿಸಿ ನೀವು ಹೇಳುವ ಯಾವುದೇ ತ್ಯಾಗಕ್ಕೂ ನಾನು ಸಿದ್ದನಿದ್ದೇನೆ.

ಆದರೆ, ಅತ್ಯಂತ ಕಷ್ಟಪಟ್ಟು, ಇಬ್ಬರು ಸಚಿವರ ಸಹಿತ ಆಡಳಿತರೂಢ ಸರ್ಕಾರದ ಹದಿನೇಳು ಶಾಸಕರನ್ನು ಅವರ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಅವರನ್ನು ಪುನಃ ಗೆಲ್ಲಿಸಿಕೊಂಡು ಬರುವ ಅತ್ಯಂತ ಕಠಿಣ, ಪ್ರಜಾತಂತ್ರ ವ್ಯವಸ್ಥೆಗೆ ಸವಾಲು ಎನಿಸಬಹುದಾದ ಕ್ಲಿಷ್ಟವಾದ ರಿಸ್ಕ್ ಮೈ ಮೇಲೆ ಎಳೆದುಕೊಂಡು ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಪಡೆದುಕೊಂಡಿರುವ ಸಿಎಂ ಹುದ್ದೆಯನ್ನು ಬಿಟ್ಟು ಕೊಡಿ ಎಂದು ಒತ್ತಡ ಹೇರಬಾರದು ಎಂದು ನೇರಾ,ನೇರವಾಗಿಯೇ ವರಿಷ್ಠರಿಗೆ ಹೇಳಿ ಬಂದಿದ್ದಾರೆನ್ನುವ ಮಾತುಗಳು ಯಡಿಯೂರಪ್ಪ ಪರ ಇರುವ ಬೆಂಬಲಿತ ಶಾಸಕರು, ಸಂಸದರು, ಮುಖಂಡರು ಸೇರಿದ್ದಂತೆ ಅವರ ಪರವಾಗಿ ಸಾರ್ವಜನಿಕವಾಗಿ ಸಹನೂಭೂತಿ ವ್ಯಕ್ತಪಡಿಸುತ್ತೀರುವ ಮಠಾಧೀಶರ ಮಧ್ಯ ದಿಂದ ಜೋರಾಗಿ ಕೇಳಿಬರುತ್ತೀವೆ.

ಈಗಿನ ಮೂವರು ಉಪಮುಖ್ಯಮಂತ್ರಿಗಳ ಜೊತೆಗೆ ಇನ್ನೂ ಮೂವರನ್ನು ಡಿಸಿಎಂ ಮಾಡಿದರೂ ಅವರನ್ನು ಅತ್ಯಂತ ಸಂತೋಷ ದಿಂದ ಬಗಲಲ್ಲಿ ಕೂಡಿಸಿಕೊಳ್ಳುತ್ತೇನೆ. ಬೇಕಾದರೆ ನನ್ನ ಬಳಿ ಇರುವ ಇಂಧನ, ಜಲಸಂಪನ್ಮೂಲ ಸೇರಿದ್ದಂತೆ ಹೇವಿವೇಟ್ ಖಾತೆಗಳನ್ನು ಧಾರೇ ಎರೆಯುವೆ. ಸಿಎಂ ಕುರ್ಚಿಗೆ ಕೈ ಹಾಕಬೇಡಿ ಎನ್ನುವ ಧಾಟೀಯಲ್ಲಿ ಉತ್ತರಿಸಿದ್ದಾರೆನ್ನುವ ಅಭಿಪ್ರಾಯಗಳನ್ನು ಬಿಎಸ್ವೈ ಬೆಂಬಲಿಗರು ವ್ಯಕ್ತಪಡಿಸುತ್ತಿದ್ದಾರೆ.

ಆಗೇನೆ, ನಿಮ್ಮ ಒತ್ತಡ, ಒತ್ತಾಸೆ ಅನ್ವಯ ಅಸೆಂಬ್ಲಿ ಎಲೇಕ್ಷನ್ ನಲ್ಲಿ ಸೋತ ಲಕ್ಷ್ಮಣ ಸವದಿಯನ್ನು ಡಿಸಿಎಂ ಎಂದು ನೀವು ಹೇಳಿದಾಗ ತುಟಿ ಎರಡು ಮಾಡಲಿಲ್ಲ. ಮೊನ್ನೆ,ಮೊನ್ನೆ ಸಿಪಿ ಯೋಗೇಶ್ವರರನ್ನು ಸಚಿವ ಸಂಪುಟಕ್ಕೆ ಭರ್ತಿ ಮಾಡಿ ಎಂದಾಗ ಅದನ್ನು ಪಾಲಿಸಿರುವೆ. ಮಂತ್ರಿ ಆಗಿದ್ದುಕೊಂಡು ಯೋಗೇಶ್ವರ ನನ್ನ ಮತ್ತು ಕುಟುಂಬದ ಮೇಲೆ ಬಹಿರಂಗವಾಗಿಯೇ ಮಾನಹಾರಿಕಾರ ಆರೋಪಗಳನ್ನು ಮಾಡುತ್ತಿದ್ದಾರೆ. ಕ್ರಮವಹಿಸುವುದು ಕ್ಷಣದ ಮಾತು. ಆದರೆ ಯೋಗೇಶ್ವರ ಕಿತ್ತರೇ ಅದು ವರಿಷ್ಠರಿಗೆ ಮುಜುಗರ ಮಾಡಿದ್ದಂತೆ ಎಂದು ಆತನ ಎಲ್ಲಾ ಕಿರಿಕಿರಿಯನ್ನು ಸಹಿಸಿಕೊಂಡಿರುವೆ.

ಯತ್ನಾಳ,ಬೆಲ್ಲದ್, ವಿಶ್ವನಾಥರಂತಹವರು ಬಹಿರಂಗವಾಗಿಯೇ ವೈಯುಕ್ತಿಕವಾಗಿ ನನ್ನ ಮೇಲೆ, ಕುಟುಂಬದ ವಿರುದ್ದವಾಗಿ, ಪಕ್ಷದ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ತಾಖತ್ತು ನನಗೆ ಇದ್ರು ಕೈಲಾಗದವನಂತೆ ಆಗಿದ್ದೇನೆ ಕಾರಣ ವರಿಷ್ಠರ ನಿರ್ಧಾರಕ್ಕೆ ಚ್ಯುತಿ ಬಂದೀತು ಎಂದು.

ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರದ ಗದ್ದುಗೆ ಮೇಲೆ ಕೂಡಿಸಲು ನನ್ನ ನಾಲ್ಕೈದು ದಶಕಗಳಿಂದ ಕಾಪಾಡಿಕೊಂಡು ಬಂದಿದ್ದ ಮಾನ, ಮಾರ್ಯಾದೆಗಳನ್ನು ಆಪರೇಷನ್ ಕಮಲದ ಮೂಲಕ ಕಳೆದುಕೊಂಡಿರುವೆ. ನಮ್ಮ ವಿರೋಧಿಗಳು ಛೀ,ಥೂ ಎಂದ್ರು ದಕ್ಷಿಣಭಾರತದಲ್ಲಿ ಕಮಲವನ್ನು ಅರಳಿಸಲು ನನ್ನ ಸ್ವಾಭಿಮಾನವನ್ನೆ ಧಾರೇ ಎರೆದಿರುವೆ. ಸ್ವಸಾಮರ್ಥ್ಯ, ಶ್ರಮವಹಿಸಿ, ಇಷ್ಟ ಪಟ್ಟು ಸಂಪಾದಿಸಿ ಕೊಂಡಿರುವ ಮುಖ್ಯಮಂತ್ರಿ ಹುದ್ದೆಯನ್ನು ಯಾವ ಕಾರಣಕ್ಕೂ ತ್ಯಾಗ ಮಾಡಲು ಸಿದ್ದನಿಲ್ಲ ಎಂದು, ಪ್ರಧಾನಿ,ಗೃಹಸಚಿವರಿಗೆ ಖಡಕ್ ಆಗಿಯೇ ಯಡಿಯೂರಪ್ಪ ಹೇಳಿ ಬಂದಿದ್ದಾರೆನ್ನುವ ಮಾತುಗಳು ಬಿಎಸ್ವೈ ಅಭಿಮಾನಿಗಳು, ಬೆಂಬಲಿಗರ ಮಧ್ಯ ದಿಂದ ಜೋರಾಗಿ ಕೇಳಿ ಬರುತ್ತಿವೆ.

ಪದತ್ಯಾಗಕ್ಕೆ ಒತ್ತಡ ಹೇರಿದರೆ ಕುಳಿತಿರುವ ಸಿಎಂ ಕುರ್ಚಿಯನ್ನು ಹೇಗೆ ಕಾಪಾಡಿಕೊಳ್ಳಬೇಕೆನ್ನುವುದು ಇಡೀ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿಯೇ ಯಾರು ಮಾಡದ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿರುವ ನನಗೆ ಗೊತ್ತಿದೆ. ನನ್ನನ್ನು ಕೇಣಕ ಬೇಡಿ ಎಂದು ವರಿಷ್ಠರಿಗೆ ಸವಾಲಿನ ಎಚ್ಚರಿಕೆಯನ್ನು ನೀಡಿ ಬಂದಿದ್ದಾರೆನ್ನುವ ಅಯಾಮದಲ್ಲಿ ಚರ್ಚೆಗಳು, ವ್ಯಾಖ್ಯಾನಗಳು ರಾಜ್ಯದ ತುಂಬನೂ ವ್ಯಾಪಕವಾಗಿರುವುದು ಕೇಳಿಸುತ್ತಿದೆ.

ಆದರೆ, ನಮ್ಮ ಟಿವಿ ಚಾನೆಲ್ ಗಳು ಬಿತ್ತರಿಸುವ ಸುದ್ದಿಗಳೇ ವಿಚಿತ್ರವಾಗಿವೆ.
ಬಿಎಸ್ ಯಡಿಯೂರಪ್ಪ ರವರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಯಿಂದ ಸ್ವಯಂ ಪ್ರೇರಿತರಾಗಿಯೇ ಪದತ್ಯಾಗ ಮಾಡುತ್ತಾರೆ. ಒಂದು ಪಕ್ಷ ಮಾಡದಿದ್ದರೇ, ಹೈಕಮಾಂಡ್ ಅವರನ್ನು ಮುಖ್ಯಮಂತ್ರಿ ಹುದ್ದೆ ಯಿಂದ ಕೆಳಗೆಇಳಿಸುತ್ತೇ ಎನ್ನುವ ಧಾಟೀಯಲ್ಲಿಯೇ ಸುದ್ದಿಗಳ ಮಹಾಪೂರವೇ ಕರ್ನಾಟಕದ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಕ್ಷಣ,ಕ್ಷಣದ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರಗೊಳ್ಳುತ್ತಿದೆ. ಟಿವಿಗಳ ಅರ್ಭಟ, ಪತ್ರಿಕೆಗಳಲ್ಲಿನ ಪೇಜ್ ವನ್ ಸುದ್ದಿಗಳ ಮೈಲೇಜ್ ಗಳು ರಾಜ್ಯದ ಜನತೆಯ ತಲೆಯಲ್ಲಿ ಬಿಎಸ್ವೈ ಪದತ್ಯಾಗ ಖಚಿತ ಎನ್ನುವ ಮನವರಿಕೆಯನ್ನು ಸೆಟ್ ಮಾಡಿಬಿಟ್ಟಿವೆ.

ಪದತ್ಯಾಗದ ಸುತ್ತಲೂ ಪ್ಯಾನಲ್ ಡಿಸ್ಕಷನ್, ವಿಶ್ಲೇಷಣೆಗಳು, ಓಪಿನಿಯನ್ ಗಳು ಜೋರಾಗಿವೆ.
ನ್ಯೂಸ್ ಚಾನೆಲ್ ಗಳು ತೊರಿಸುತ್ತೀರುವ ಸುದ್ದಿಚಿತ್ರಣಗಳನ್ನು ನೋಡುತ್ತಿದ್ದರೇ ಜುಲೈ 26ಕ್ಕೇಲ್ಲ ಬಿಎಸ್ವೈ ರವರು ವಿದಾಯ ಭಾಷಣ ಮಾಡಿ, ಕುರ್ಚಿ ಬಿಟ್ಟು ಇಳಿಯಲಿದ್ದಾರೆಂದೇ ಜನತೆ ಭಾವಿಸಿದ್ದಾರೆ…! ” ಇದು ನಮ್ಮ ಚಾನೆಲ್ ನಲ್ಲಿಯೇ ಫಸ್ಟ್” ಎಂದು ತೊರಿಸಲು ನ್ಯೂಸ್ ಚಾನೆಲ್ ಗಳು ಈಗಾಗಲೇ ಸ್ಲೈಡ್ಸ್ ಗಳನ್ನು, ಸ್ಕ್ರೊಕ್ ಲಿಂಗ್ ಗಳನ್ನು ರೆಡಿ ಮಾಡಿಟ್ಟು ಕೊಂಡಿವೆ. ಜುಲೈ 26 ಬರುವುದನ್ನೇ ಕಾಯುತ್ತಿವೆ.
ಅಸಲಿಗೆ ಟಿವಿ ಚಾನೆಲ್ ಗಳು ತೊರಿಸುತ್ತಿರುವ ಸಿಎಂ ಪದತ್ಯಾಗದ ಸುದ್ದಿಯೇ ದೊಡ್ಡ ಫೇಕ್!

ದೆಹಲಿ ಭೇಟಿಯ ತರುವಾಯ, ಅತಿ ಶೀಘ್ರದಲ್ಲೇ ಬಿಎಸ್.ಯಡಿಯೂರಪ್ಪ ಪದತ್ಯಾಗ ಮಾಡಲಿದ್ದಾರೆನ್ನುವ ಸುದ್ದಿಗಳ ಮಹಾ ಪ್ರವಾಹವೇ ಟಿವಿ ಚಾನೆಲ್ ಗಳಲ್ಲಿ ಕ್ಷಣ, ಕ್ಷಣದ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರಗೊಳ್ಳುತ್ತಲೆ ಇದೆ.
ಇತ್ತ ಸಿಎಂ ಹುದ್ದೆಯೊಂದನ್ನು ಹೊರತು ಪಡಿಸಿ, ನೀವು ಹೇಳುವ, ಸೂಚಿಸುವಂತಹ ಯಾವುದೇ ತರಹದ ತ್ಯಾಗಕ್ಕೂ ನಾನು ಸಿದ್ದ. ಆದರೆ ಕಷ್ಟಪಟ್ಟು ದಕ್ಕಿಸಿಕೊಂಡಿರುವ ಸಿಎಂ ಹುದ್ದೆಯನ್ನು ಬಿಟ್ಟು ಹೋಗು ಎನ್ನುವುದು ನನಗೆ ರುಚಿಸದ ಪಲ್ಯ ಎಂದು ಬಿಜೆಪಿ ವರಿಷ್ಠರಿಗೆ ಮುಖಕ್ಕೆ ಮುಖ ಕೊಟ್ಟು ಸಿಎಂ ಯಡಿಯೂರಪ್ಪ ಖಡಕ್ ಆಗಿಯೇ ಹೇಳಿ ಬಂದಿದ್ದಾರಂತೆ ಎನ್ನುವ ಮಾತುಗಳು ಬಿಎಸ್ವೈ ಬೆಂಬಲಿಗರ ಮಧ್ಯ ದಿಂದ ಜೋರಾಗಿ ಕೇಳಿಬರುತ್ತಿವೆ.

ಹುಳ್ಳಿಪ್ರಕಾಶ
ಸಂಪಾದಕರು
ಬಳ್ಳಾರಿ ಸುನಾಮಿಪತ್ರಿಕೆ
9448234961

LEAVE A REPLY

Please enter your comment!
Please enter your name here