ಶಿಕ್ಷಣ ದಾಸೋಹಕ್ಕೆ ಹೊಸ ಬಾಷ್ಯೆ ವೀರಶೈವ ಮಠಗಳಿಂದ : ಉಜ್ಜಯಿನಿ ಜಗದ್ಗುರು

0
308

ಕೊಟ್ಟೂರು : ಜ : 18:- ಶಿಕ್ಷಣ ದಾಸೋಹವನ್ನು ವೀರಶೈವ ಮಠ ಮಾನ್ಯಗಳು ರಾಜ್ಯದಲ್ಲಿ ಕೈಗೊಳ್ಳದಿದ್ದರೇ ರಾಜ್ಯ ಶಿಕ್ಷಣ ಮತ್ತು ಕಲಿಕೆಯ ಕ್ಷೆಮಭೆಯನ್ನು ಎದುರಿಸಬೇಕಾಗಿತ್ತು.

ಮುಂದಾಲೋಚನೆಯ ಫಲವಾಗಿ ಮಠಗಳು ಈ ಕಾರ್ಯವನ್ನು ಸುಮಾರು ದಶಕಗಳಿಂದಲೂ ಕೈಗೊಂಡಿದ್ದರ ಪ್ರತಿಫಲವಾಗಿ ಸಾಕ್ಷರತೆ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ದೊಡ್ಡ ಮಟ್ಟದಲ್ಲಿ ಶಿಕ್ಷಣ ಕ್ರಾಂತಿ ಆಗಲು ಸಾಧ್ಯವಾಗಿದೆ ಎಂದು ಉಜ್ಜಯಿನಿ ಸದ್ದರ್ಮ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದ ಅವರು ವಿದ್ಯಾದಾನ ಅನ್ನದಾನಕ್ಕಿಂತ ಪ್ರಮುಖದ್ದಾಗಿದೆ.

ಅನ್ನ ಅಕ್ಷರ ಅಸರೆಗೆ ಒತ್ತು ಕೊಟ್ಟು ವೀರಶೈವ ಮಠಗಳು ಹಿಂದಿನಿಂದಲೂ ಇಂತಹ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರಣಕ್ಕಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳ ಜನರಿಗೆ ಶಿಕ್ಷಣದ ಲಾಭ ಪಡೆಯುವಂತಾಯಿತು ಎಂದು ಅವರು ಹೇಳಿದರು. ಸಂಸ್ಕೃತಿ ಶಿಕ್ಷಣ ಒಟ್ಟುಗೂಡಿಸಿಕೊಳ್ಳುವುದರಿಂದ ಸರ್ವೋತೋಮುಖ ಬೆಳವಣಿಗೆ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಕೊಟ್ಟೂರೇಶ್ವರ ಮಹಾವಿದ್ಯಾಲಯ ಉನ್ನತ ಧ್ಯೇಯವಿರಿಸಿಕೊಂಡು ಸಾರ್ಥಕ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಪ್ರತಿಭಾ ಫಲಾಯನವನ್ನು ತಡೆಯಬೇಕು ಇದರಿಂದಾಗಿ ಬಹಳಷ್ಟು ಪ್ರತಿಭೆಗಳು ರಾಷ್ಟçದಲ್ಲೆ ಉಳಿಯುವಂತಾಗಲು ಕಾರ್ಯಕ್ರಮ ರೂಪಿಸಬೇಕು. ವಿಶ್ವದ ಅನೇಕ ಟಾಪರ್‌ಗಳಲ್ಲಿ ಭಾರತದ ಪ್ರತಿಭಾನ್ವಿತರ ಸಂಖ್ಯೆ ಹೆಚ್ಚು ಎಂದರು.
ಶಾಸಕ ಎಸ್.ಭೀಮಾನಾಯ್ಕ ಮಾತನಾಡಿ ವೀರಶೈವ ವಿದ್ಯಾವರ್ಧಕ ಸಂಘ ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಹಲವು ಬಗೆಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸುವ ಮೂಲಕ ಜಿಲ್ಲೆಯ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗಿದೆ ಎಂದ ಅವರು ಕೊಟ್ಟೂರಿನ ಕೊಟ್ಟೂರೇಶ್ವರ ಮಹಾವಿದ್ಯಾಲಯ ಸುವರ್ಣ ಮಹೋತ್ಸವದ ನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಸುವರ್ಣ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 25 ಲಕ್ಷ ರೂಗಳನ್ನು ಮಂಜೂರು ಮಾಡುವೆ ಎಂದು ಭರವಸೆ ವ್ಯಕ್ತಪಡಿಸಿದರು.
ಚಲನ ಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ ಮಾತನಾಡಿ ಬದುಕನ್ನು ಶಿಕ್ಷಣ ಕಲಿಕೆಯ ರೂಪದಲ್ಲಿ ಕಟ್ಟಿಕೊಂಡಾಗ ಮಾತ್ರ ಬಹು ಬಗೆಯ ವ್ಯಕ್ತಿತ್ವ ತಾನ್‌ತಾನೇ ರೂಪುಗೊಳ್ಳುತ್ತದೆ ಎಂದರು.

ವೀ.ವಿ. ಸಂಘದ ಅಧ್ಯಕ್ಷ ಹೆಚ್.ಎಂ.ಗುರುಸಿದ್ದಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ವೀ.ವಿ.ಸಂಘದ ಕಾಲೇಜ್ ಕೊಟ್ಟೂರಿನಲ್ಲಿ ತೆರೆಯುವಂತೆ ಮಾಡುವಲ್ಲಿ ಈ ಭಾಗದ ಹಿರಿಯರ ಕೊಡುಗೆ ಅಪಾರವಾದುದ್ದಾಗಿದೆ ಎಂದರು.

ಕೂಡ್ಲಿಗಿ ಹಿರೇಮಠಾಧ್ಯಕ್ಷ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಮ.ನಿ.ಪ್ರ.ಹಿರೇಶಾಂತ ವೀರಸ್ವಾಮಿ, ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವೀ.ವಿ.ಸಂಘದ ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ.ಬಸವರಾಜ, ಸಹಕಾರ್ಯದರ್ಶಿ ಜೆ.ಶಾಂತವೀರನಗೌಡ, ಚೋರನೂರು ಕೊಟ್ರಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಭಾರತಿ ಸುಧಾಕರ ಪಾಟೀಲ್, ಎಂ.ಎಂ.ಜೆ. ಸತ್ಯಪ್ರಕಾಶ, ವೀ.ವಿ.ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಕಾತ್ಯಾಯಿಣಿ ಮರಿದೇವಯ್ಯ, ಹೆಚ್.ಎಂ.ಕಿರಣಕುಮಾರ, ಕೆಪಗಲ್ ಗಿರಿಜಾ, ಟಿ.ವೀರುಪಾಕ್ಷಗೌಡ, ಕೇರನಹಳ್ಳಿ ಚಂದ್ರಶೇಖರ, ಏಳುಬಿಂಚಿ ರಾಜಶೇಖರ, ಅಸುಂಡಿ ನಾಗರಾಜ್‌ಗೌಡ, ಅಕ್ಕಿ ಶಿವಕುಮಾರ, ಮೇಟಿ ಪಂಪನಗೌಡ, ಮಾಜಿ ಅಧ್ಯಕ್ಷ ಪಿ.ಚನ್ನಬಸವಗೌಡ ಪ್ರಾಚಾರ್ಯರಾದ ಶಾಂತಮೂರ್ತಿ ಬಿಕುಲಕರ್ಣಿ, ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಬಿ.ಕೊಟ್ರೇಶ, ಉತ್ತಂಗಿ ಕೊಟ್ರಗೌಡ, ಜೆ.ಸಿ.ಧನಂಜಯ, ಮಂಜುನಾಥ ಮಠಪತಿ, ಕೆ.ಬಿ.ಮಲ್ಲಿಕಾರ್ಜುನ, ಅವಂತಿ ಬಸವರಾಜ್, ಹುಡೇದ್ ಮೃತ್ಯಂಜಯ, ಎಸ್.ಎಂ.ಗುರುಪ್ರಸಾದ, ಅಡಿಕೆ ಮಂಜುನಾಥ, ಕೋರಿ ಬಸವರಾಜ್, ಎಂ.ಹೆಚ್. ಪ್ರಶಾಂತ್ ಕುಮಾರ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ್ ಸ್ವಾಗತಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here