ಆರೋಗ್ಯ ಜಾಗೃತಿ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ

0
191

ಸಂಡೂರು: ಮಾ:27: ತೋರಣಗಲ್ಲು ಗ್ರಾಮದ ಮಹಿಳಾ ಸ್ತ್ರೀಶಕ್ತಿ ಸಂಘದ ಪ್ರತಿನಿಧಿಗಳಿಗೆ ಆರೋಗ್ಯ ಕುರಿತು ಜಾಗೃತಿ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ತಾಲೂಕಿನ ತೋರಣಗಲ್ಲು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ ಸ್ತ್ರೀಶಕ್ತಿ ಸಂಘದ ಪ್ರತಿನಿಧಿ ಮಹಿಳೆಯರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮವನ್ನು ಡಾ. ಪ್ರಿಯಾಂಕಾ ಅವರು ಉದ್ಘಾಟನೆ ಮಾಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಇದೆ ಕುಟುಂಬ ಎಲ್ಲ ಸದಸ್ಯರ ಆರೋಗ್ಯ ಕಾಪಾಡುವ ಮಹಿಳೆಯರು ತಮ್ಮ ಅರೋಗ್ಯ ಮತ್ತು ಊಟದ ಬಗ್ಗೆ ಕಾಳಜಿವಹಿಸುತ್ತಿಲ್ಲ, ತಯಾರಿಸಿದ ಪೌಷ್ಟಿಕಾಹಾರವನ್ನು ಎಲ್ಲರೂ ಒಟ್ಟಿಗೆ ಕುಳಿತು ಕುಟುಂಬ ಭೋಜನ ಮಾಡುವ ಅಭ್ಯಾಸ ಮಾಡಿ, ಉಳಿತಾಯದ ಬಡ್ಡಿ ಲೆಕ್ಕ ಮಾಡುವ ಮಹಿಳೆ ಯಾವ ಪದಾರ್ಥಗಳಲ್ಲಿ ಯಾವಯಾವ ಪ್ರೋಟೀನ್ ಮತ್ತು ವಿಟಮಿನ್ ಸಿಗುತ್ತದೆ ಎಂದು ಲೆಕ್ಕಹಾಕಿ ಊಟ ಮಾಡಿರಿ, ಅಪೌಷ್ಟಿಕತೆ ಮತ್ತು ರಕ್ತ ಹೀನತೆಯನ್ನು ಹೋಗಲಾಡಿಸಿ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಲು ಪ್ರಯತ್ನ ಮಾಡುವಂತೆ ಸಲಹೆ ನೀಡಿದರು,

ಈ ಸಂದರ್ಭದಲ್ಲಿ ಡಾ.ಪ್ರಿಯಾಂಕಾ ಅವರು ಮಾತನಾಡಿ ಮಹಿಳೆಯರಿಗೆ ಕಾಡುವ ಗರ್ಭ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು, ಮಹಿಳೆಯರು ಮುಟ್ಟಿನ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕಿದೆ, ನ್ಯಾಪಕಿನ್ ಬೆಲೆ ಬಗ್ಗೆ ಚಿಂತಿಸಬೇಡಿ, ಜನನಾಂಗದ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು, ಮೂವತ್ತು ವರ್ಷ ದಾಟಿದವರು ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಗಾಗಿ, ಬಿ.ಪಿ ಮತ್ತು ಶುಗರ್ ಇರುವವರು ನಿಯಮಿತವಾಗಿ ಮಾತ್ರೆ ಸೇವಿಸಿ ವೈದ್ಯರ ಸಲಹೆ ತುಂಬಾ ಮುಖ್ಯ, ಗರ್ಭಾಶಯದ ಕ್ಯಾನ್ಸರ್ ತಡೆಯಲು ಲಸಿಕೆ ಬಂದಿದೆ ಸಧ್ಯ ಉಚಿತವಾಗಿ ನೀಡುತ್ತಿಲ್ಲ, ಎಮ್.ಟಿ.ಪಿ (ಗರ್ಭಪಾತ) ದಂತಹ ಸಂದರ್ಭದಲ್ಲಿ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ಮಾಡುವಂತೆ ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಯು.ಲಕ್ಮೀ, ಸ್ತ್ರೀಶಕ್ತಿ ಸಂಘದ ಮೇಲ್ವಿಚಾರಕಿ ಚೈತ್ರ, ಸೇವಾ ಪ್ರತಿನಿಧಿ ಶಿಲ್ಪಾ, ಪದ್ಮಾವತಿ, ಪಾರ್ವತಿ, ಶುಶ್ರೂಷಕ ಮಾರೇಶ್, ಇಮ್ರಾನ್, ಯಂಕಪ್ಪ, ರೋಜಾ, ಆಶಾ ಕಾರ್ಯಕರ್ತೆ ನೀಲಮ್ಮ, ಹಂಪಮ್ಮ, ಹುಲಿಗೆಮ್ಮ, ಮಂಜುಳಾ, ಹಂಪಮ್ಮ, ಮೀನಾಕ್ಷಿ ಇತರೆ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here