ಜಿ ಎಲ್ ಹಳ್ಳಿ ಗ್ರಾಮ ಪಂಚಾಯತಿಯ ದೇವರ್ಲಳ್ಳಿ ಗ್ರಾಮದಲ್ಲಿ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ.

0
893

ಸಂಡೂರು:ಸೆ :09: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಷ್ಟೀಯ ಪೋಷಣೆ ಅಭಿಯಾನ ಕಾರ್ಯಕ್ರಮ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಾಡಲಾಯಿತು ಹಾಗೂ ಪೋಷಣ ಮಾಸಾಚರಣೆಯೊಂದಿಗೆ ಸೀಮಂತ ಕಾರ್ಯಕ್ರಮ ಹಾಗೂ ಗ್ರಾಮದಲ್ಲಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು.

ತಾಲೂಕು ಪೋಷಣ ಅಭಿಯಾನ ಯೋಜನೆಯ ತಾಲ್ಲೂಕು ಸಹಾಯಕ ಸಂಯೋಜಕರಾದ ಲಿಂಗರಾಜ ಎಂ, ಮಾತನಾಡಿ ಪೋಷಣ ಅಭಿಯಾನ ಯೋಜನೆ ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾಗಿದ್ದು ದೇಶದಲ್ಲಿ ಮಕ್ಕಳ ಅಪೌಷ್ಟಿಕತೆ ಹಾಗೂ ಗರ್ಭಿಣಿ-ಬಾಣಂತಿಯರ ರಕ್ತ ಹೀನತೆ ತಡೆಯಲಿಕ್ಕಾಗಿ ಜಾರಿಗೊಳಿಸಲಾಯಿತು. ಹಾಗೂ ಕಾರ್ಯಕ್ರಮದಲ್ಲಿ ಭಾವಹಿಸಿದಂತಹ ಎಲ್ಲಾ ತಾಯಂದಿರು ದೇಶಕ್ಕೆ ಸದೃಢವಾದ ದೇಹ ಮತ್ತು ಸದೃಢ ಮನಸ್ಸನ್ನುಳ್ಳ ಮಗುವನ್ನು ನೀಡಿ ಎಂದರು ಹಾಗೂ ಅದರೊಂದಿಗೆ ನಮ್ಮ ಇಲಾಖೆಯಿಂದ ಬರುವಂತಹ ಎಲ್ಲಾ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸಮುದಾಯ ಅರೋಗ್ಯ ಅಧಿಕಾರಿಯಾದ ನಿರ್ಮಲ ಮಾತನಾಡಿ ಗರ್ಭಿಣಿ ತಾಯಂದಿರು ಆಗಾಗ ಅರೋಗ್ಯ ತಪಾಸಣೆ ಮಾಡಿಸಿ ಅದರೊಂದಿಗೆ ಕೋವಿಡ್-19 ಲಸಿಕೆಯನ್ನು ಭಯವನ್ನುಬಿಟ್ಟು ಹಾಕಿಸಿಕೊಳ್ಳಿ ಎಂದು ತಿಳಿಸಿದರು ಹಾಗೂ ಮಗುವನ್ನು ಯಾವ ರೀತಿ ಅರೋಗ್ಯವಾಗಿ ನೋಡಿಕೊಳ್ಳಬೇಕೆಂದು ತಿಳಿಸಿದರು.

ಗ್ರಾಮಪಂಚಾಯತಿ ಸದಸ್ಯರಾದ ಕುಮಾರಸ್ವಾಮಿ, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಗ್ರಾಮದ ಎಲ್ಲಾ ತಾಯಂದಿರು ಇಲಾಖೆಯಿಂದ ನೀಡುವಂತಹ ಪೌಷ್ಟಿಕ ಆಹಾರವನ್ನು ಪಡೆದುಕೊಳ್ಳಿ ನಾವು ಇಲಾಖೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತೇವೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯಾರಾದ ಟಿ. ವೀಣಾ, ಸುಮಾ,ರಾಮಕ್ಕ, ಲಕ್ಷ್ಮೀ ಜಯಲಕ್ಷ್ಮಿ, ಶೋಭಾ ಹಾಗೂ ಆಶಾ ಕಾರ್ಯಕರ್ತೆ ಗಂಗಮ್ಮ, ಗ್ರಾಮದ ಮುಖಂಡರು, ತಾಯಂದಿರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here