ಸಂಡೂರು ಪುರಸಭೆಯಲ್ಲಿ ವಿಕಲಚೇತನರಿಗೆ ಸೌಲಭ್ಯಗಳ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ

0
125

ಸಂಡೂರು:ಡಿ:28:- ಸಂಡೂರು ಪಟ್ಟಣದ ಪುರಸಭೆ ಅವರಣದಲ್ಲಿ, ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಅಂಗವಿಕಲರಿಗೆ ಸೌಲಭ್ಯಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿತ್ತು.

ಸಭೆಯಲ್ಲಿ ಮೊದಲಿಗೆ ಪಂಡಿತ್ ಪುಟ್ಟರಾಜ್ ಗವಾಯಿ ಅವರ ಬಾವಚಿತ್ರಕ್ಕೆ ಪೂಜೆಯನ್ನು ಮಾಡಿ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭಿಸಿದರು, ಕಾರ್ಯಕ್ರಮವನ್ನು ಉದ್ದೇಶಿಸಿ ಪುರಸಭೆಯ ಅಧಿಕಾರಿ ಶ್ರೀ ಇಮಾಮ್ ಸಾಹೇಬ್ ಅವರು ಮಾತನಾಡುತ್ತ..ನೀವುಗಳು ದೇಹದಲ್ಲಿ ಅಂಗ ವೈಕಲ್ಯತೆಯನ್ನು ಹೊಂದಿರುವಿರಿ ಆದರೆ ನಾವುಗಳೆಲ್ಲರೂ ಬುದ್ಧಿಯಲ್ಲಿ ಅಂಗವೈಕಲ್ಯತೆಯನ್ನು ಹೊಂದಿದ್ದೇವೆ ಇದು ವಿಪರ್ಯಾಸ.

ನಿಮ್ಮಲ್ಲಿ ಆತ್ಮಸ್ಟೈರ್ಯ, ಹಾಗೂ ಒಗ್ಗಟ್ಟು ಮುಖ್ಯವಾಗಿ ಎದ್ದುಕಾಣುತ್ತದೆ, ಅದು ನಮ್ಮಲ್ಲಿಲ್ಲ, ಎಲ್ಲರೂ ಸಹ ಕೋವಿಡ್ ವ್ಯಾಕ್ಸಿನ್ ತಪ್ಪದೆ ಹಾಕಿಸಿಕೊಳ್ಳಿ, ಯಾವುದೇ ಹೆದರಿಕೆ ಅಂಜಿಕೆ ಬೇಡ ಎಂದರು, ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಇರುವವರು ಯಾರಾದರೂ ಇದ್ದರೆ ನನ್ನ ಗಮನಕ್ಕೆ ತನ್ನಿ ನಾನು ತಾಲೂಕು ವೈದ್ಯಾಧಿಕಾರಿಗಳಾದ ಡಾ ಕುಶಾಲ್ ರಾಜ್ ಅವರನ್ನು ಸಂಪರ್ಕಿಸಿ ನೀವರಲ್ಲಿಯೇ ವ್ಯಾಕ್ಸಿನ್ ಹಾಕುಸಿಕೊಳ್ಳಲು ವ್ಯವಸ್ಥೆ ಮಾಡುತ್ತೇನೆ ಎಂದರು.

ನಿಮ್ಮಗಳ ಸೇವೆಗೆ ನಾನು ಹಾಗೂ ನಮ್ಮ ಪುರಸಭೆಯ ಸದಸ್ಯರು, ಸಿಬ್ಬಂದಿಗಳು ದಿನದ 24 ಗಂಟೆಯೂ ಸದಾ ಸಿದ್ಧವಿರುತ್ತೇವೆ ಎಂದು ತಿಳಿಸಿದರು ಹಾಗೇ ಪುರಸಭೆ ಕಾರ್ಯಾಲಯಕ್ಕೆ ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಲು ಇಚ್ಛಿಸುವುವವರು ಯಾರಾದರೂ ಇದ್ರೆ ಪುರಸಭೆ ಕಚೇರಿಗೆ ಅರ್ಜಿಗಳನ್ನು ಹಾಕಿ ಅಂತವರಿಗೆ ಟೈಲರಿಂಗ್ ಮಿಷನ್,ಶ್ರವಣದೋಷ ಉಪಕರಣ, ಲ್ಯಾವ್ ಟ್ಯಾಪ್ ತ್ರಿಚಕ್ರ ವಾಹನಗಳ ನ್ನು ನೀಡಲಾಗುತ್ತದೆ ಇದೆಲ್ಲವೂ ನಮ್ಮ ಪುರಸಭೆಯ ಅಧ್ಯಕ್ಷರ ಮುಂದಾಳತ್ವದಲ್ಲಿ ನೀಡಲಾಗುತ್ತತೆ.

ಅಧ್ಯಕ್ಷರಾದ ಶ್ರೀಮತಿ ಅನಿತಾ ವಸಂತ್ ಕುಮಾರ್ ಅವರು ಮಾತನಾಡುತ್ತ ಅಂಗವಿಕಲರು ನಮ್ಮ ನಿಮ್ಮಷ್ಟೇ ಶಕ್ತರು ಎಂಬುದನ್ನು ಈ ಸಂಧರ್ಭದಲ್ಲಿ ಹೇಳಲು ಸಂತೋಷವಾಗುತ್ತದೆ ವಿಕಲಚೇತನರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನಾನು ಯಾವುದೇ ರೀತಿಯಾಗಿ ರಾಜಕೀಯವಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ಸಿಗುವಂತಾಗಲು ನಾನು ಇರೋವರೆಗೂ ಶ್ರಮಿಸುತ್ತೇನೆ,

ಈ ಸಂಧರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ವಸಂತ್ ಕುಮಾರ್, ಉಪಾಧ್ಯಕ್ಷರಾದ ಈರೇಶ್ ಸಿಂದೆ,ಮುಖ್ಯ ಅಧಿಕಾರಿ ಇಮಾಮ್ ಸಾಹೇಬ್,ಸದಸ್ಯರಾದ
ದುರ್ಗಮ್ಮ, ದೀಪಾ, ಲಕ್ಷ್ಮಿ, ಹನುಮೇಶ್, ಎಂ ಆರ್ ಡಬ್ಲೂ ಕರಿಬಸಪ್ಪ,ತೋಟಪ್ಪ,ಪರಿಸರ ಅಭಿಯಂತರ ಅನ್ನಪೂರ್ಣ,ಕಮ್ಯುನಿಟಿ ಆಫೀಸರ್ ಪ್ರಭುರಾಜ್,ಹಾಗೂ ಇತರ ಪುರಸಭೆ ಸದಸ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here