ಕುರೆಕುಪ್ಪ ಗ್ರಾಮದಲ್ಲಿ ಡಾ. ರೇಖಾ ಎಸ್. ಕುಷ್ಠರೋಗ ಪತ್ತೆ ಸಮೀಕ್ಷೆಯ ಕಾರ್ಯ ಪರಿಶೀಲನೆ

0
193

ಸಂಡೂರು:ಆಗಸ್ಟ್:೨೬:ಸಂಡೂರು ತಾಲೂಕಿನಲ್ಲಿ ಕುಷ್ಠರೋಗ ಪತ್ತೆ ಸಮೀಕ್ಷೆಯು ನಡೆಯುತ್ತಿದ್ದು ಇಂದು ಕುರೇಕುಪ್ಪ ಗ್ರಾಮಕ್ಕೆ ಡಾ. ರೇಖಾ ಎಸ್,ಉಪ ನಿರ್ದೇಶಕರು ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ,ಬೆಂಗಳೂರು, ಇವರು ಬೇಟಿ ನೀಡಿ ಸಮೀಕ್ಷೆಯನ್ನು ಪರಿಶೀಲನೆ ಮಾಡಿದರು,
ಸಮೀಕ್ಷೆ ಮಾಡಿದ ಮನೆಗಳಿಗೆ ಬೇಟಿ ಕೊಟ್ಟು ವಿಚಾರಣೆ ಮಾಡಿದರು ಹಾಗೆಯೇ ಆಶಾ ಕಾರ್ಯಕರ್ತೆ ‌ಮತ್ತು ಸ್ವಯಂ ಸೇವಕರು ಸಮೀಕ್ಷೆಯಲ್ಲಿ ಪತ್ತೆ ಹಚ್ಚಿದ ಶಂಕಿತರನ್ನೂ ಪರೀಕ್ಷೆ ಮಾಡಿದರು, ಶಂಕಿತರ ಚರ್ಮ ಲೇಪನ ಸಂಗ್ರಹ ಮಾಡಲು ಸೂಚಿಸಿದರು,

ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಾಧಿಕಾರಿ ಡಾ.ರಾಜಶೇಖರ ರೆಡ್ಡಿ ಮಾತನಾಡಿ ತಾಲೂಕಿನ 18 ಹಳ್ಳಿಗಳ 22 ಸ್ಥಳಗಳನ್ನು ಸಮೀಕ್ಷೆಗೆ ಗುರುತಿಸಿದ್ದು, 5248 ಮನೆಗಳ 25200 ಜನರನ್ನು ಸಮೀಕ್ಷೆಗೆ ಒಳ ಪಡಿಸಲಿದ್ದಾರೆ ಎಂದು ಅವರಿಗೆ ತಾಲೂಕಿನ ಮಾಹಿತಿ ನೀಡಿದರು, ಉಪ ನಿರ್ದೇಶಕರಾದ ಡಾ.ರೇಖಾ ಅವರು ಆಶಾ ಕಾರ್ಯಕರ್ತೆ ಮತ್ತು ಸ್ವಯಂ ಸೇವಕ ರನ್ನು ಉದ್ದೇಶಿಸಿ ಮಾತನಾಡಿ ಸಮೀಕ್ಷೆಗೆ ಆಯ್ಕೆ ಮಾಡಿಕೊಂಡ ಎಲ್ಲಾ ಜನರನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಿ ಶಂಕಿತರನ್ನು ಪತ್ತೆ ಮಾಡಿ ಕುಷ್ಠರೋಗ ಮುಕ್ತ ದೇಶ ರೂಪಿಸಲು ಆಶಾ ಕಾರ್ಯಕರ್ತೆರ ಶ್ರಮ ತುಂಬಾ ಇದೆ ಎಂದು ಮೆಚ್ಚುಗೆಯ ಮಾತಗಳನ್ನು ತಿಳಿಸಿದರು, ಹಾಗು ಯಾವುದೇ ಸಮೀಕ್ಷೆ ಯಶಸ್ವಿಯಾಗಲು ಮೇಲ್ವಿಚಾರಣೆ ಅತೀ ಮುಖ್ಯ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ಬೇಟಿ ಕೊಟ್ಟು ಮೇಲ್ವಿಚಾರಣೆ ಮಾಡಿ ಸಮೀಕ್ಷೆ ಹೇಗೆ ನಡಿತಿದೆ ಎಂಬುದನ್ನು ವರದಿ ಮಾಡಿ ಎಂದು ಸೂಚಿಸಿದರು,

ನಿಮ್ಮ ತಾಲೂಕಿನಲ್ಲಿ ಪ್ರತಿ ಹತ್ತು ಸಾವಿರಕ್ಕೆ 0.24 ರಷ್ಟು ರೋಗಿಗಳು ಇದ್ದು ಈ ಸಮೀಕ್ಷೆಯಲ್ಲಿ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಮುಂದಿನ ದಿನಗಳಲ್ಲಿ ಹೊಸ ರೋಗಿಗಳ ಸಂಖ್ಯೆ 0 ಗೆ ತನ್ನಿ ಎಂದು ಸೂಚಿಸಿದರು,ಕುಷ್ಠರೋಗ ಮುಕ್ತ ದೇಶವಾಗಲು ಕೆಲವೇ ದಿನಗಳು ಇವೆ ಈ ಹಂತದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ತಿಳಿಸಿದರು, ಮೊದಲಿಗೆ ಆಶಾ ಕಾರ್ಯಕರ್ತೆಯರು ತಾವೇ ಸುಂದರವಾಗಿ ತಯಾರಿಸಿದ ಹೂವಿನ ಗುಚ್ಚಗಳನ್ನು ಉಪ ನಿರ್ದೇಶಕರು, ಮತ್ತು ಎಲ್ಲಾ ಅಧಿಕಾರಿಗಳಿಗೆ ನೀಡಿ ಸ್ವಾಗತಿಸಿದರು,

ಈ ಸಂದರ್ಭದಲ್ಲಿ ಸ್ವಯಂ ಸೇವಕ ಕುಷ್ಠರೋಗ ಸಂಪರ್ಕಾಧಿಕಾರಿ ಸುಧಾಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್, ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣ ಅಧಿಕಾರಿ ಅರುಣ್, ಕಾಶೀಮ್, ಬಂಡೆಗೌಡ,ಶಕೀಲ್ ಅಹಮದ್, ಉಮಾ,ಆಶಾ ಕಾರ್ಯಕರ್ತೆಯರಾದ ಬಸಮ್ಮ, ನೀಲಮ್ಮ, ತಿಮ್ಮಕ್ಕ, ಸುಶೀಲಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here