ಮತದಾರರ ಜಾಗೃತಿ ಕಾರ್ಯಕ್ರಮ

0
118

ಹಗರಿ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ 2023 ರಲ್ಲಿ ನಡೆಯಲಿರುವ ಚುನಾವಣೆಯ ಪ್ರಯುಕ್ತ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಮಂಗಳವಾರ ಕೊಟ್ಟೂರು ತಾಲೂಕು ಮಾನ್ಯ ತಹಸಿಲ್ದಾರರು ಹಾಗೂ ತಾಲೂಕು ದಂಡಾಧಿಕಾರಿ ಶ್ರೀ ಎಂ. ಕುಮಾರಸ್ವಾಮಿ ನೇತೃತ್ವದಲ್ಲಿ ಮತದಾನ ಜಾಗೃತಿ ಅಭಿಯಾನದ ಅಡಿಯಲ್ಲಿ ಪಟ್ಟಣದ ಮತದಾರರ ಮನೆ ಮನೆ ಭೇಟಿ ಮಾಡಿ ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಸಂಧರ್ಭದಲ್ಲಿ ತಾಲೂಕು ದಂಡಾದಿಕಾರಿಯಾದ ಎಂ.ಕುಮಾರಸ್ವಾಮಿರವರು ಮಾತನಾಡಿ ಕೊಟ್ಟೂರು ತಾಲೂಕು ಸಾರ್ವಜನಿಕರು ಯಾವುದೇ ಭಯವಿಲ್ಲದೆ ಎಲ್ಲಾ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಬೇಕುನ್ನುವುದು ನಮ್ಮೆಲ್ಲರ ಗುರಿ ೧೮ ವರ್ಷ ತುಂಬಿರುವವರು ಮತದಾರರ ಪಟ್ಟಿಯಲ್ಲಿ ನೋಡಿ ಮತದಾನ ಕೇಂದ್ರಕ್ಕೆ ಬಂದು ತಮ್ಮ ಮತದಾನ ಚಲಾಯಿಸಿ ಪ್ರಜಾಪ್ರಭುತ್ವವನ್ನು ಬಲ ಪಡಿಸಬೇಕು ರಾಜ್ಯಾದ್ಯಂತ ಚುನಾವಣೆ ನಡೆಯುತ್ತದೆ ಮತದಾರರು ಯಾವುದೇ ಭಯ ಪಡದೆ ನಿರ್ಭೀತಿಯಿಂದಮತದಾನ ಮಾಡಬೇಕೆಂದು ಹೇಳಿದರು ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಶ್ರೀ ನಸುರುಲ್ಲಾ ಮಾತನಾಡಿ 2018 ರಲ್ಲಿ ನಡೆದ ವಿಧಾನ ಸಭಾ ಚುನಾವಣೆ ಸಂಬಂಧಿಸಿದಂತೆ ಕೊಟ್ಟೂರು ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು 72 ಪರ್ಸಂಟ್ ಗಿಂತ ಮತದಾನ ಆಗಿರಿವುದರಿಂದ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮಾನ್ಯ ಜಿಲ್ಲಾ ಸ್ವೀಪ್ ಸಮಿತಿ ಮುಖ್ಯ ಅಧಿಕಾರಿಗಳು ಹೊಸಪೇಟೆ ರವರ ಸೂಚನೆಯಂತೆ ನಾವು ಪಟ್ಟಣದ ವ್ಯಾಪ್ತಿಯಲ್ಲಿ ಮತದಾರರಿಗೆ ಮತದಾನ ಮಾಡಲು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ನಮ್ಮ ಪಟ್ಟಣದಲ್ಲಿ 25 ಮತಗಟ್ಟೆಗಳು ಇದ್ದು ಈ ಮತಗಟ್ಟೆಗಳಲ್ಲಿ ಸಾರ್ವಜನಿಕರಿಗೆ ಮತದಾರರಗೆ ಅವಶ್ಯ ಇರುವ ಎಲ್ಲಾ ಸೌಲಭ್ಯಗಳ ಕಲ್ಪಸಲಾಗಿದೆ 25 ಮತಗಟ್ಟೆಗಳಲ್ಲಿ 1 ಮಾದರಿ ಮತಗಟ್ಟೆ 1 ಮಹಿಳೆಯರ ಮತಗಟ್ಟೆ 1ಯುವಕರ ಮತಗಟ್ಟೆ ಮತದಾರರು ಮತಗಟ್ಟೆಗಳನ್ನು ಗುರಿತಿಸಿ ಮತದಾರರು ಯಾವುದೇ ಭಯವಿಲ್ಲದೆ ತಮ್ಮ ಮತದಾನವನ್ನು ಮೇ 10 ನೇ ದಿನಾಂಕದಂದು ನಡೆಯಲಿರುವ ಈ ವಿಧಾನ ಸಬಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾರರು ಮತದಾನ ಮಾಡಿ ಎಂದು ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಯಾದ ಮೈದೂರು ಶಶಿಧರ, ಪಟ್ಟಣ ಪಂಚಾಯಿತಿ ಸಿಬ್ಬಂದಿ, ಬಿ ಎಲ್ ಓ ಗಳು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here