SKME-FOMENTO-ZTC-VESCO-BKG-ಮೈನಿಂಗ್ ಕಂಪನಿಗಳಲ್ಲಿ ಮೊಳಗಿತು ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತೆಗಳ ಗಾಯನ

0
289

ಸಂಡೂರು:ಅ:28:- ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಆಶಯದಂತೆ ಇಂದು ರಾಜ್ಯೋತ್ಸವವನ್ನು “ಕನ್ನಡಕ್ಕಾಗಿ ನಾವು” ಎಂಬ ಶೀರ್ಷಿಕೆಯಡಿ ಅಭಿಯಾನವಾಗಿ ಅಚರಿಸುವ ನಿಟ್ಟಿನಲ್ಲಿ ಸಂಡೂರು ತಾಲೂಕಿನ
SKME-FOMENTO-ZTC- VESCO-BKG-ಮೈನಿಂಗ್ ಕಂಪನಿಯ ಕಚೇರಿಯಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತೆಗಳ ಸಾಮೂಹಿಕಗಾಯನ ಏಕಕಾಲದಲ್ಲಿ ಮೊಳಗಿತು.

ಕನ್ನಡದ ಶ್ರೇಷ್ಠತೆಯನ್ನು ಸಾರುವ ಕುವೆಂಪುರವರ “ಬಾರಿಸು ಕನ್ನಡ ಡಿಂಡಿಮವ”, ಡಾ.ಕೆ.ಎಸ್.ನಿಸಾರ್ ಅಹಮ್ಮದ್ ರವರ “ಜೋಗದ ಸಿರಿ ಬೆಳಕಿನಲ್ಲಿ”, ಹಾಗೂ ಹಂಸಲೇಖರವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಈ ಮೂರು ಹಾಡುಗಳನ್ನು ಕಚೇರಿಯಲ್ಲಿ ಏಕಕಾಲದಲ್ಲಿ ಹಾಡಲು ವ್ಯವಸ್ಥೆಗೊಳಿಸಲಾಯಿತು.

ಸಾಮೂಹಿಕ ಗಾಯನದಲ್ಲಿ SKME-FOMENTO-ZTC- VESCO-BKG- ಮೈನಿಂಗ್ ಕಂಪನಿಯ ಮಾಲಿಕರು/ಅಧಿಕಾರಿಗಳು/ನೌಕರರು ಭಾಗವಹಿಸಿ ಕನ್ನಡದ ಶ್ರೇಷ್ಠ ಗೀತೆಗಳಿಗೆ ಧ್ವನಿಯಾಗಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ತಾಲೂಕಿನ ಪ್ರತಿಷ್ಠಿತ ಮೈನಿಂಗ್ ಕಂಪನಿಗಳು ಈ ದಿನದಂದು ಕನ್ನಡಾಭಿಮಾನಕ್ಕೆ ಒತ್ತು ನೀಡಿ ಎಲ್ಲರೂ ಸೌಹಾರ್ದಯುತವಾಗಿ ಬಾಗವಹಿಸಿದ್ದು ನಮಗೆ ಖುಷಿಯನ್ನು ತಂದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಪಿ. ರಾಜು ಅವರುಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

LEAVE A REPLY

Please enter your comment!
Please enter your name here