ತಾಲೂಕಿನ ಸುತ್ತಮುತ್ತಲು ಬಿತ್ತನೆ ಜೋರು ರೈತರ ಮುಖದಲ್ಲಿ ಮಂದಹಾಸ

0
273

ಕೊಟ್ಟೂರು ತಾಲೂಕಿನ ಸುತ್ತಮುತ್ತಲು ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಒಂದಿಷ್ಟು ಸೋಮವಾರದಂದು ಉತ್ತಮ ಮಳೆಯಾಗಿದೆ. ರೈತರಲ್ಲಿ ಸಂತಸ ಮೂಡಿಸಿದೆ.ಇದರಿಂದ ಖುಷಿಗೊಂಡಿರುವ ರೈತರು ರಾಂಪುರ, ಕೋಡಿಹಳ್ಳಿ ,ಕಂದಗಲ್, ಗಜಾಪುರ, ಬಿತ್ತನೆ ಜೋರಾಗಿದೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ತಾಲೂಕಿನ ಬಹುತೇಕ ಕಡೆ ಮುಂಗಾರು ಮಳೆಯಾಗಿರುವುದರಿಂದ ರೈತರು ಜಮೀನುಗಳನ್ನು ಹದ ಮಾಡಿಕೊಂಡು ಬಿತ್ತನೆಯನ್ನು ಶುರು ಆರಂಭಿಸಿದ್ದಾರೆ.

ರೈತರು ತಮಗೆ ಅವಶ್ಯವಾದ ಬೀಜ, ಗೊಬ್ಬರಗಳನ್ನು ಖಾಸಗಿ ವ್ಯಾಪಾರಸ್ಥರಿಂದ ಖರೀದಿಸುತ್ತಿದ್ದಾರೆ. ಮಳೆ ಬಂದರೆ ಫಸಲು ಚೆನ್ನಾಗಿ ಬರುತ್ತದೆ ಎಂಬ ವಾಡಿಕೆಯಂತೆ ರೈತರು ಇದೇ ಮಳೆಗೆ ಜೋಳ, ಮುಂತಾದವುಗಳನ್ನು ಬಿತ್ತನೆ ಮಾಡುತ್ತಿದ್ದಾರೆ.

ಬಿತ್ತನೆ ಕಾರ್ಯ ಆರಂಭವಾಗುತ್ತಿದ್ದಂತೆ ಬೀಜ ಮತ್ತು ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತದೆ. ಇದರ ಲಾಭ ಪಡೆಯಲು ಖಾಸಗಿ ವ್ಯಾಪಾರಸ್ಥರು ದಾಸ್ತಾನು ಇದ್ದರು ಬೀಜ, ಗೊಬ್ಬರ ಕೃತಕ ಅಭಾವ ಸೃಷ್ಟಿಸಿ ರೈತರಿಂದ ಹೆಚ್ಚಿನ ಬೆಲೆ ಪಡೆದುಕೊಳ್ಳುತ್ತಾರೆ. ಎಂದು ಪ್ರತಿ ವರ್ಷದ ಮುಂಗಾರಿನಲ್ಲಿ ದೂರುಗಳು ಕೇಳಿ ಬರುತ್ತವೆ.

ಆದರೆ ಅಧಿಕಾರಿಗಳು ಇದಾವುದಕ್ಕೂ ತಲೆ ಕೆಡಿಸಿಕೊಳ್ಳದಿರುವುದರಿಂದಾಗಿ, ರೈತರ ಸಮಸ್ಯೆ ಬಗೆ ಹರಿಯದಂತಾಗಿದೆ. ಇನ್ನು ಕೃಷಿ ಕೇಂದ್ರಗಳಲ್ಲಿ ಖರೀದಿ ಮಾಡಬೇಕೆಂದರೆ ಸಕಾಲದಲ್ಲಿ ಬೀಜ, ಗೊಬ್ಬರ ಪೂರೈಕೆಯಾಗುವುದಿಲ್ಲ. ಪೂರೈಕೆಯಾದರೂ ರೈತರಿಗೆ ಸಾಕಾಗುವಷ್ಟು ಬರುವುದಿಲ್ಲ ಇದರಿಂದ ರೈತರು ಅನಿವಾರ್ಯವಾಗಿ ಖಾಸಗಿ ಕೇಂದ್ರಗಳನ್ನು ಅವಲಂಬಿಸಬೇಕಾಗುತ್ತದೆ.

ಇನ್ನು ಕಳೆದ ವರ್ಷ ಕೆಲ ಬೀಜಗಳ ಕೊರತೆ ಉಂಟಾಗಿತ್ತು. ಸೂಕ್ತ ಬೀಜಗಳನ್ನು ಖರೀದಿಸಲು ರೈತರಿಗೆ ಹೆಚ್ಚಿನ ಮಾರ್ಗದರ್ಶನ ನೀಡಬೇಕು. ಯಾವುದು ಉತ್ತಮ ಬೀಜ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಇಲಾಖೆಯಿಂದ ಆಗಬೇಕಾಗಿದೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here