ಆ 15 ರಂದು ಕಾರ್ಗಿಲ್ ನಲ್ಲಿ ಮೋಹನ್ ದಾನಪ್ಪರಿಂದ ಜಾಗೃತಿ ಮ್ಯಾರಥಾನ್, ಸಚಿವ ಸಂತೋಷ್ ಲಾಡ್ ರಿಂದ ಮೆಚ್ಚುಗೆ!

0
680

ಬೆಂಗಳೂರು: ಜು 24, ವಿಧಾನ ಸೌಧದಲ್ಲಿ “ಸಲಾಂ ಸೊಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ಯುವಕರು ಸೇನೆ ಸೇರುವ ಕುರಿತು ಕಾಶ್ಮೀರದ ಕಾರ್ಗಿಲ್ ನಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಹಮ್ಮಿಕೊಂಡಿರುವ ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನು ಕರ್ನಾಟಕ ರಾಜ್ಯದ ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಎಸ್ ಲಾಡ್ ಮತ್ತು ಸಂಡೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಈ. ತುಕಾರಾಂರವರು ಶುಭ ಹಾರೈಸಿದರು!

ಈ ಸಂಧರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಸಚಿವರ ಆಪ್ತರಾದ ಅಲಿ ಗೊರವನಕೊಳ್ಳರವರು ಉಪಸ್ಥಿತಿಯಲ್ಲಿದ್ದರು!

LEAVE A REPLY

Please enter your comment!
Please enter your name here