ಮಣಿಪುರ ಹಿಂಸಾಚಾರ ನಿಯಂತ್ರಿಸಲು ಬಾರತ ಕಮ್ಯುನಿಸ್ಟ್ ಪಕ್ಷ ಆಗ್ರಹ

0
164

ಕೊಟ್ಟೂರು:ಜು:25:- ಇತ್ತೀಚೆಗೆ ಮಣಿಪುರದಲ್ಲಿ ನಡೆದಿರುವ ಮಹಿಳಾ ಹಿಂಸಾಚಾರ, ಗಲಭೆ ಸಂಘರ್ಷಗಳನ್ನು ತಡೆಗಟ್ಟುವಲ್ಲಿ ಬಿಜೆಪಿ ಸರ್ಕಾರಗಳು ವಿಫಲವಾಗಿವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ತಹಶೀಲ್ದಾರರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರವ್ಯಾಪಿ ಮಣಿಪುರ ಸೌಹಾರ್ದ ದಿನದ ಆಚರಣೆ ೨೫ ಜುಲೈ ೨೦೨೩ ಮಂಗಳವಾರದಂದು ಮಣಿಪುರದಲ್ಲಿ ನಡೆದ ಗಲಭೆ, ಹಿಂಸಾಚಾರ ಹಾಗೂ ಸಂಘರ್ಷಗಳನ್ನು ನಿಭಾಯಿಸಲಾಗದೆ, ಸಾಮಾನ್ಯ ಮತ್ತು ಅಮಾಯಕರ ಪ್ರಾಣಗಳ ಜೊತೆ ಆಟವಾಡುತ್ತ ಅಮಾಯಕರ ಮೇಲೆ ಸುಳ್ಳಿ ಕೇಸುಗಳನ್ನು ದಾಖಲಿಸುತ್ತಾ ಸಹಸ್ರಾರು ಜನರ ಅಶಾಂತಿಗೆ ಕಾರಣರಾಗಿರುವ ಮಣಿಪುರ ಸರ್ಕಾರವನ್ನು ವಿರೋಧಿಸಿ ರಾಜ್ಯವ್ಯಾಪಿ ಈ ದಿನ ಹೋರಾಟದ ಮೂಲಕ ಮೌನವಹಿಸಿರುವ ಕೇಂದ್ರ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗಲಭೆಗಳನ್ನು ನಿಯಂತ್ರಿಸಲು ವಿಫಲವಾದ ಮಣಿಪುರದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಜನರಿಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಬೇಕು, ಅಕ್ರಮವಾಗಿ ಅರಣ್ಯದಲ್ಲಿ ಬೆಳೆಯುತ್ತಿರುವ ಗಸಗಸೆ (ಮಾದಕ ವಸ್ತು) ಕೃಷಿಯನ್ನು ತಡೆಯಬೇಕು, ಅಕ್ರಮ ವಲಸೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು, ಮಣಿಪುರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿ ಜನತೆಗೆ ಅಗತ್ಯ ಆಹಾರವಸ್ತು ಮತ್ತು ಔಷಧ ಸರಬರಾಜು ಮಾಡಬೇಕು, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು, ಅದಾನಿ ಮತ್ತಿತರ ಕಾರ್ಪೊರೆಟ್ ಕಂಪನಿಗಳಿಗೆ ಗಣಿಗಾರಿಕೆ ನಡೆಸಲು ನೀಡಬೇಕೆಂದಿರುವ ೬೫೦೦೦ ಎಕರೆ ಅರಣ್ಯ ಭೂಮಿಯ ಪ್ರಸ್ತಾವವನ್ನು ಕೈಬಿಡಬೇಕು, ಎನ್.ಎಫ್.ಐ.ಡಬ್ಲು ನಾಯಕಿಯರ ಮೇಲೆ ದಾಖಲಿಸಿರುವ ಎಫ್‌ಐಆರ್ ಕೂಡಲೇ ರದ್ದುಗೊಳಿಸಬೇಕೆಂಬ ಹಕ್ಕೊತ್ತಾಯಗಳನ್ನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here