ಸಂಡೂರು ತಾಲೂಕಿನ ತಾಳೂರು ಗ್ರಾಮದಲ್ಲಿ ರಕ್ತದಾನ ಶಿಬಿರ ಹಾಗೂ ವಿವಿಧ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳ ಜಾಗೃತಿ ಅಭಿಯಾನ

0
117

ಸಂಡೂರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು
ಕೋವಿಡ್‌ ಸಾಂಕ್ರಾಮಿಕ ಕಾಲಘಟ್ಟದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ಸಂಡೂರು ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅತ್ಯಂತ ಉತ್ಸಾಹದಿಂದ ತಾಳೂರು ಗ್ರಾಮಸ್ಥರು ಆಗಮಿಸಿ ರಕ್ತದಾನ ಮಾಡಿದರು

ಮಕ್ಕಳ ಸುರಕ್ಷತೆಗೆ ಲಸಿಕೆಗಳು ಅಗತ್ಯ, ಈ ಹಿನ್ನಲೆಯಲ್ಲಿ TD ಮತ್ತು DPT ಲಸಿಕೆಯನ್ನು ಶಾಲಾ ಮಕ್ಕಳಿಗೆ ಹಾಕುವ ಮೂಲಕ ರೋಗದ ವಿರುದ್ದ ಜಾಗೃತಿ ಮೂಡಿಸಲಾಯಿತು

ಅನಾದಿ ಕಾಲದಿಂದಲೂ ಸಮುದಾಯದಲ್ಲಿ ಇರುವ ಅತ್ಯಂತ ಪ್ರಾಚೀನ ಕಾಯಿಲೆ ಕುಷ್ಠರೋಗ, ತಿಳಿ ಬಿಳಿ ತಾಮ್ರವರ್ಣದ ಮಚ್ಚೆಗಳು ಇದ್ದಲ್ಲಿ ತಕ್ಷಣ ವೈದ್ಯರ ಬಳಿ ಪರಿಕ್ಷಿಸಿಕೊಳ್ಳಬೇಕು ಎಂಬ ಸಂದೇಶವನ್ನು ಸಾರಲಾಯ್ತು

ಮಳೆಗಾಲದಲ್ಲಿ ಕಂಡುಬರುವ ಮಲೇರಿಯಾ ಇತ್ತೀಚಿನ ವರ್ಷಗಳಲ್ಲಿ ವರ್ಷ ಪೂರ್ತಿ ಪ್ರಕರಣಗಳು ಕಂಡುಬರುತ್ತಿವೆ. ನಿರ್ಲಕ್ಷಿಸಿದರೆ ಅತಿ ಹೆಚ್ಚು ಹಾನಿಯನ್ನುಂಟು ಮಾಡುವ ಜೋತೆಗೆ ಜೀವಹಾನಿ ಸಹ ಆಗಬಹುದು.ಅತಿಯಾದ ಜ್ವರ, ಅತಿಯಾದ ಚಳಿ,
ಅತಿಯಾದ ಮೈಬೆವರುವಿಕೆ, ಇದರ ಪ್ರಮುಖ ಲಕ್ಷಣಗಳಾಗಿವೆ.

ಇದರ ನಿಯಂತ್ರಣಕ್ಕಾಗಿ ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಖಡ್ಡಾಯವಾಗಿ ಮಾಡಿಸಬೇಕು.ಶೀಘ್ರ ಪತ್ತೆ -ತ್ವರಿತ ಚಿಕಿತ್ಸೆ ಎಂಬ ಘೋಷವಾಕ್ಯದೊಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಜಾಗೃತಿ ನೀಡಲಾಗುತ್ತಿದೆ.

ಕೋವಿಡ್ ಸೋಂಕಿತರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಪತ್ತೆ ಹಚ್ಚುವಿಕೆ ಮತ್ತು ಪರೀಕ್ಷೆ ಯನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಿದ್ದಲ್ಲದೆ, 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡುವ ಜೊತೆಗೆ ಜನಾಂದೋಲನದ ಮೂಲಕ ಜಾಗೃತಿ ಯನ್ನು ಸಹ ನೀಡಲಾಗುತ್ತಿದೆ,ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಮಕ್ಕಳ ಜನನದ ಮಧ್ಯ ಅಂತರವಿಡಲು ತಾತ್ಕಾಲಿಕ ವಿಧಾನಗಳು ಹಾಗೂ ಮಕ್ಕಳ ಜನನವನ್ನು ಪೂರ್ಣವಾಗಿ ತಡೆಯಲು ಶಾಶ್ವತ ವಿಧಾನಗಳ ಕುರಿತು ಜನಾಂದೋಲನ.

2025 ಕ್ಕೆ ಕ್ಷಯಮುಕ್ತ ಭಾರತ ಎಂಬ ಮಹತ್ವಾಕಾಂಕ್ಷಿ ಯೋಜನೆ ಅನ್ವಯ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಇದರಡಿಯಲ್ಲಿ ಈಗಿನಿಂದಲೇ ಸಾವಿನ ಪ್ರಮಾಣ ಕಡಿಮೆಯಾಗಬೇಕು, ಟಿಬಿ ಪ್ರಕರಣಗಳನ್ನು ಕಡಿಮೆ ಮಾಡಬೇಕು ಹಾಗೂ ಪ್ರತಿ ರೋಗಿಯ ಚಿಕಿತ್ಸಾ ವೆಚ್ಚವನ್ನು ಶೂನ್ಯಕ್ಕೆ ತಲುಪಿಸಬೇಕು ಎಂಬುದು ಗುರಿಯಾಗಿದೆ,

ಭಾರತದಲ್ಲಿ ಪ್ರತಿದಿನ ಸುಮಾರು 6000 ರೋಗಿಗಳಿಗೆ ಕ್ಷಯರೋಗ ಕಂಡುಬರುತ್ತಿದ್ದು ಸುಮಾರು 600 ಜನ ಸಾವನಪ್ಪುತ್ತಿದ್ದಾರೆ, ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ಅತಿಮುಖ್ಯವಾಗಿದ್ದು ಸತತ ಎರಡು ವಾರಗಳ ಕೆಮ್ಮು ಮತ್ತು ಕಫ, ಸಂಜೆ ಸಮಯದಲ್ಲಿ ಜ್ವರ ಬರುವುದು ಎದೆನೋವು ರಾತ್ರಿವೇಳೆ ಬೆವರುವುದು ತೂಕ ಕಡಿಮೆಯಾಗುವುದು ಮುಂತಾದ ಲಕ್ಷಣಗಳಿದ್ದರೆ ಕ್ಷಯರೋಗ ವಿರಬಹುದು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು., ಖಚಿತಪಟ್ಟಲ್ಲಿ ಉಚಿತವಾದ ಸೂಕ್ತ ಚಿಕಿತ್ಸೆ ಯನ್ನು ಪರಿಣಾಮಕಾರಿ ಅನುಷ್ಟಾನ ಮಾಡುತ್ತಾ ವಿಭಿನ್ನ ಚಟುವಟಿಕೆಗಳೊಂದಿಗೆ ಹತೋಟಿಗೆ ತರುವ ಕಾರ್ಯ ನಿರ್ವಹಿಸಲಾಗುತ್ತಿದೆ.

LEAVE A REPLY

Please enter your comment!
Please enter your name here