ಶಾಲಾ ಮಕ್ಕಳಿಗೆ ಆರೋಗ್ಯ ಕಾರ್ಯಕ್ರಮಗಳ ಕುರಿತು ವಿಡಿಯೋ ಪ್ರದರ್ಶನ,

0
275

ಸಂಡೂರು:ಜು:26:- ತಾಲೂಕಿನ ತೋರಣಗಲ್ಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿನೂತನ ” ಆರೋಗ್ಯ ಸಿಂಚನ ” ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹನುಮಂತಪ್ಪ ಮತ್ತು ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸಾದಿಯಾ ಹಾಗು ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ ಅವರು ಚಾಲನೆ ನಿಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರಪ್ರಥಮವಾಗಿ ಇಂತಹ ವಿಶೇಷವಾಗಿ ಶಾಲಾ ಮಕ್ಕಳಿಗೆ ಆರೋಗ್ಯ ಅರಿವನ್ನು ಹೆಚ್ಚು ಮಾಡಲು ಪ್ರಯತ್ನ ಮಾಡಲಾಗಿದೆ, ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ಕುಷ್ಠರೋಗ,ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗಿ,ಚಿಕೂನ್ ಗುನ್ಯಾ,ಮೆದುಳು ಜ್ವರ,ಆನೆಕಾಲು, ಹದಿಹರೆಯದವರ ಆರೋಗ್ಯ, ಹೆಣ್ಣುಮಕ್ಕಳಿಗೆ ಋತುಚಕ್ರ ನೈರ್ಮಲ್ಯ, ಪರಿಸರ ಸ್ವಚ್ಚತೆ, ಕಸ ವಿಂಗಡನೆ ಕುರಿತು ಅನಿಮೇಷನ್‌ ವಿಡಿಯೋ ಮೂಲಕ ಒಟ್ಟು ಏಳು ವಿಡಿಯೋ ಪ್ರದರ್ಶನ ಮಾಡಿಸಲಾಗುತ್ತಿದೆ, ಒಂದೊಂದು ವಿಡಿಯೋ ನೋಡಿದ ನಂತರದಲ್ಲಿ ಪ್ರಶ್ನೆಗಳನ್ನು ಕೇಳಿ ಮನದಟ್ಟು ಮಾಡುವ ಕಾರ್ಯ ಇದಾಗಲಿದೆ ಎಂದು ತಿಳಿಸಿದರು,

ನಂತರ ಪಿ.ಡಿ.ಒ ಹನುಮಂತಪ್ಪ ಮಾತನಾಡಿ ಸಿ.ಇ.ಒ ಅವರ ಈ ಆರೋಗ್ಯ ಸಿಂಚನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ತಿಳಿಸಿದರು, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಅವರು ಮಾತನಾಡಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಉತ್ತಮವಾಗಿದೆ, ನಮ್ಮ ಶಾಲೆಯಲ್ಲಿ ಪ್ರಾರಂಭ ಮಾಡಿರುವುದು ಸಂತಸ ತಂದಿದೆ, ರಾಜ್ಯಕ್ಕೆ ಮಾದರಿಯಾಗೋಣ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಹೆಚ್.ಹೊನ್ನೂರಪ್ಪ, ಡಾ.ಸಾದಿಯಾ, ಡಾ.ಪ್ರಿಯಾಂಕಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ನಿಜಾಮುದ್ದೀನ್, ಶಾಲೆಯ ಸಹ ಶಿಕ್ಷಕರಾದ ಅಶೋಕ್, ದೊಡ್ಡಬಸವ, ವಿಶ್ವನಾಥ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here