ಪೋಷಕಾಂಶಗಳು ನಷ್ಟ ವಾಗದ ಹಾಗೆ ಆಹಾರ ತಯಾರಿಸುವುದು ಒಂದು ಕಲೆ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
420

ಸಂಡೂರು: ಸೆ: 06: ತಾಲೂಕಿನ ತೋರಣಗಲ್ಲು ಗ್ರಾಮದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕುರಿತು ಅರಿವಿನ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಪೂರ್ವಿಕರು ಕಾಲ ಕಾಲಕ್ಕನುಗುಣವಾಗಿ ಆಹಾರ ಪದಾರ್ಥಗಳನ್ನು ಉಪಯೋಗಿಸುವ ಹಬ್ಬ ಹರಿದಿನಗಳನ್ನು ಮಾಡಿಕೊಂಡಿದ್ದು ಶಿಸ್ತು ಬದ್ಧವಾಗಿದೆ, ಶ್ರಾವಣ ಮಾಸದಲ್ಲಿ ಉಂಡಿ ಕಟ್ಟುವ ನೆಪದಲ್ಲಿ ಎಲ್ಲಾ ಬೇಳೆ ಕಾಳುಗಳು, ಏಕ ದಳ ಕಾಳುಗಳು, ಬೆಲ್ಲವನ್ನು ಉಪಯೋಗಿಸಿ ಪೌಷ್ಟಿಕಾಹಾರ ಸೇವಿಸುವಂತೆ ಮಾಡಿದ್ದಾರೆ, ತರಕಾರಿಗಳು, ಸೊಪ್ಪುಗಳು, ಹಣ್ಣಗಳನ್ನು, ಹಾಗೆ ಖನಿಜಾಂಶಗಳ ಇರುವ ಒಣ ಹಣ್ಣುಗಳನ್ನು ಬಳಸುವಂತೆ ಹಬ್ಬಗಳನ್ನು ಮಾಡಿದ್ದು ನಾವುಗಳು ಅವರು ಹಾಕಿಕೊಟ್ಟ ಮಾರ್ಗಗಳನ್ನೆ ನವೀನ ಹೆಸರಿನೊಂದಿಗೆ ಆಚರಣೆ ಮಾಡುತ್ತಿದ್ದೇವೆ, ಫಾಸ್ಟ್ ಫುಡ್, ಜಂಕ್ ಫುಡ್, ಬೇಕರಿ ಫುಡ್ ಕೈ ಬಿಡಬೇಕು, ಮನೆಯಲ್ಲೇ ತರತರದ ಉಂಡಿ,ಕಿಚಡಿ, ತರಕಾರಿ ಮಿಶ್ರಿತ ರೊಟ್ಟಿಯಂತಹ ಅಡುಗೆ ಮಾಡಿಕೊಂಡು, ತುಪ್ಪ,ಮೊಸರು ಜೊತೆಗೆ ಊಟ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು, ಅನ್ನ ಬಸಿಯುವುದು,ತರಕಾರಿ ಕತ್ತರಿಸಿ ತೊಳೆಯುವುದು, ಕಾಳು ತರಕಾರಿಗಳನ್ನು ಕುದಿಸಿ ಬಸಿಯುವುದು ಒಳ್ಳೆಯದಲ್ಲ, ಪೋಷಕಾಂಶಗಳು ನಷ್ಟವಾಗುತ್ತವೆ, ಗರ್ಭಿಣಿ ಮಹಿಳೆಯರು ರಕ್ತದ ಕೊರತೆ ಎದುರಿಸುವುದು ಸಹಜ, ಹೆಚ್ಚು ಹೆಚ್ಚು ಪೌಷ್ಟಿಕ ಆಹಾರ, ಮೊಳಕೆ ಕಟ್ಟದ ಕಾಳು,ಹಾಲು,ಹಸಿರು ಸೊಪ್ಪುಗಳು, ತರಕಾರಿ ಸೇರಿದಂತೆ ಐ.ಎಫ್.ಎ ಮತ್ತು ಕ್ಯಾಲ್ಸಿಯಂ ಮಾತ್ರೆ ಸೇವನೆ ಮಾಡಿದರೆ ರಕ್ತ ಹೀನತೆಯನ್ನು ಸುಲಭವಾಗಿ ಹೋಗಲಾಡಿಸಬಹುದು, ಖನಿಜಾಂಶಗಳು ದೇಹಕ್ಕೆ ಸೇರಿಸಲು ತಡೆಯೊಡ್ಡುವ ಟೀ ಬದಲು ಹಾಲು ಸೇವನೆ ಉತ್ತಮ, ಮೊಟ್ಟೆ, ಮಾಂಸ ಸೇವಿಸುವವರು ಚೆನ್ನಾಗಿ ಬೇಯಿಸಿ ಉಪಯೋಗಿಸಬಹುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಹಿರಿಯ ಮಹಿಳೆ ಶ್ರೀಮತಿ ಎ. ದೇವಮ್ಮ ಮಾತನಾಡಿ ಹಿಂದಿನ ಕಾಲದ ಅಡುಗೆಗಳ ಬಗ್ಗೆ ಮಾತನಾಡಿದ್ದು, ಆ ದಿನಗಳನ್ನು ನೆನಪು ಮಾಡಿದ್ದು ಸಂತಸ ತಂದಿದೆ, ಆಗಿನ ಕಾಲದ ಹೆಣ್ಣುಮಕ್ಕಳು ಒಳ್ಳೆಯ ಆಹಾರ ಸೇವಿಸುತ್ತಿದ್ದರು, ಗಟ್ಟಿ ಮುಟ್ಟಾಗಿ ಇರುತ್ತಿದ್ದರು,ಸೂಜಿ-ಡಬ್ಬಳ ಕಾಣೆವು, ಈಗ ಸೂಕ್ಷ್ಮ ಕಾಲ ಬಂದಿದೆ ಗುಳ್ಳಿಯಲ್ಲಿ ಅಡುಗೆ ಮಾಡಿ ಬೆರಳಿನಲ್ಲಿ ನೆಕ್ಕುವರು ಇಂತಹ ಕಾಲ ಬಂದಿದೆ, ಬರಿ ಆಸ್ಪತ್ರೆ ಕಡೆ ತಿರುಗವರು ಎಂದು ಅವರು ತಿಳಿಸಿದರು, ಅವರ ಮಾತು ಕೇಳಿ ಎಲ್ಲರಿಗೂ ಬೆರಗು ಆಯಿತು,

ಈ ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಾದ ಭವಾನಿ,ವಸಂತ,ಅನುಷು ದೇವಿ, ಹಿರಿಯ ಮಹಿಳೆಯರಾದ ಲಕ್ಷ್ಮಿದೇವಿ,ನಿರ್ಮಲ,ಲಲಿತಮ್ಮ,ಶಶಿರೇಖಾ,ರೆಷ್ಮಾ,ಶ್ರೀದೇವಿ, ಕಾಂಚನದೇವಿ,ಈರಮ್ಮ, ಕಿರಣ್ ಕುಮಾರಿ,ಅಂಗನವಾಡಿ ಕಾರ್ಯಕರ್ತೆ ಸ್ವಾತಿ,ಸಹಾಯಕಿ ಆಶಾ ಕಾರ್ಯಕರ್ತೆ ನೀಲಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here