ಕೊಟ್ಟೂರು ತಾಲ್ಲೂಕಿನಲ್ಲಿ ಇಬ್ಬರು ಇ.ಒ. ಇದ್ದಾರೆ..!! ಹೈಕೊರ್ಟ್ ಆದೇಶ ಉಲ್ಲಂಘನೆ, ಕಮ್ಯುನಿಷ್ಟ್ ಪಕ್ಷದ ಆರೋಪ

0
711

ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕು ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅಂಗಳಕ್ಕೆ ಹೋಗಿದ್ದು, ಹೈಕೋರ್ಟ್ ತಡೆಯಾಜ್ಞೆ ನೀಡಿರುತ್ತದೆ. ಇದನ್ನು ಉಲ್ಲಂಘಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹೇಳಿಕೆ ಈಗ ಕಮ್ಯುನಿಸ್ಟ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.
ಇದೇ ತಿಂಗಳ ನಾಲ್ಕರಂದು ವಿಜಯವಾಣಿ ಪತ್ರಿಕೆಯಲ್ಲಿ ಬಿತ್ತರವಾದ ಸುದ್ದಿಯನ್ವಯ ಕೊಟ್ಟೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ವಿಜಯವಾಣಿ ಪತ್ರಿಕೆಗೆ, ಚಿರಿಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ತಡೆ ನೀಡಿದ್ದರಿಂದ ಈ ಪಂಚಾಯಿತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಉಳಿದ ಪಂಚಾಯಿತಿಗಳಲ್ಲಿ ಹಾಲಿ ಅಧ್ಯಕ್ಷರೇ ಮುಂದುವರೆಯುತ್ತಾರೆ ಎಂಬ ಹೇಳಿಕೆ ಬಿತ್ತರವಾಗಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ) ಲಿಬರೇಷನ್ ಸಂಘಟನೆಯು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಕರೆದಿತ್ತು.

ವಿಷಯವನ್ನು ಸರಿಯಾಗಿ ತಿಳಿದುಕೊಳ್ಳದೇ ಈ ರೀತಿಯಾಗಿ ರಾಜ್ಯಮಟ್ಟದ ಪತ್ರಿಕೆಯಲ್ಲಿ ನ್ಯಾಯಾಂಗದ ಆದೇಶವನ್ನು ಪಾಲಿಸದೇ ತಮಗೆ ಬೇಕಾದ ಹಾಗೆ ಹೇಳಿಕೆ ನೀಡಿರುವುದು ಖಂಡನೀಯ ಈ ರೀತಿಯಾಗಿ ಹೇಳಿಕೆ ನೀಡಿರುವ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮೂರು ದಿನಗಳೊಳಗಾಗಿ ಈ ಬಗ್ಗೆ ಲಿಖಿತ ಸಮಜಾಯಿಷಿ ಕೊಡಬೇಕೆಂದು ಒತ್ತಾಯಿಸಿದರು. ಒಂದು ವೇಳೆಗೆ ಈ ಬಗ್ಗೆ ಸಮಜಾಯಿಷಿ ಕೊಡದೇ ಇದ್ದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು. ಮುಂದುವರೆದು ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ ಎಂದು ತಾಲ್ಲೂಕು ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ ಆರೋಪಿಸಿದರು. ಈ ಬಗ್ಗೆ ಪತ್ರದ ಮುಖೇನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಪಷ್ಟನೆ ಕೇಳಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ) ಲಿಬರೇಷನ್ ಸಂಘಟನೆಯ ಜಿಲ್ಲಾ ಸಹಕಾರ್ಯದರ್ಶಿ ಬಾಲಗಂಗಾಧರ, ತಾಲ್ಲೂಕು ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ, ಪರಶುರಾಮ, ಕರಿಬಸವ ಸ್ವಾಮಿ ಉಪಸ್ಥಿತರಿದ್ದರು.

■ನಾನು ಈ ರೀತಿಯ ಹೇಳಿಕೆಯನ್ನು ಪತ್ರಿಕೆಗೆ ನೀಡಿರುವುದಿಲ್ಲ. ಪತ್ರಿಕೆಯಲ್ಲಿ ತಪ್ಪಾಗಿ ವರದಿ ಮಾಡಿದ್ದರೆ ನಾನು ಜವಾಬ್ದಾರನಲ್ಲ. ವರದಿಗಾರರಿಗೆ ಈ ಬಗ್ಗೆ ಸ್ಪಷ್ಟನೆ ಕೇಳುತ್ತೇನೆ. ನನ್ನ ಹೆಸರೂ ಸಹ ಕೆ.ಪರಮೇಶ್ವರಪ್ಪ ಎಂದು ತಪ್ಪಾಗಿ ವರದಿ ಮಾಡಿದ್ದಾರೆ.
–ಜಿ.ಪರಮೇಶ್ವರ,
ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕೊಟ್ಟೂರು.

■ಕೊಟ್ಟೂರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಬ್ಬರಿದ್ದಾರೆ ಎನ್ನುವುದು ರಾಜ್ಯದಲ್ಲೇ ಎಲ್ಲೂ ಕೇಳಿ ಇರದ ಸಂಗತಿ. ಒಬ್ಬರು ಕೆ.ಪರಮೇಶ್ವರಪ್ಪ, ತಾಲ್ಲೂಕು ಪಂಚಾಯಿತಿ ಇಒ, ಎಂದು ಪತ್ರಿಕೆಯ ವರದಿಯ ಇ.ಒ. ಇವರು. ಇನ್ನೊಬ್ಬ ನಿಜವಾದ ಇ.ಒ. ಈ ಹೇಳಿಕೆಯನ್ನೇ ಕೊಟ್ಟಿರುವುದಿಲ್ಲ ಎಂದು ಜಿ.ಪರಮೇಶ್ವರಪ್ಪ ಕೊಟ್ಟೂರು ತಾಲ್ಲೂಕು ಇಒ ಸ್ಪಷ್ಟನೆ ನೀಡಿದ್ದಾರೆ. ಎರಡನ್ನು ಗಮನಿಸಿದಾಗ ವರದಿಗಾರರ ದಿವ್ಯ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ.
–ಬಾಲಗಂಗಾದರ
ಜಿಲ್ಲಾ ಸಹಕಾರ್ಯದರ್ಶಿ

■ಕೊಟ್ಟೂರು ತಾಲ್ಲೂಕು ಪಂಚಾಯಿತಿಯ ವ್ಯಾಪ್ತಿಯ ೧೪ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಸಹ ಕಾರ್ಯನಿರ್ವಾಹಕ ಅಧಿಕಾರಿಗಳ ಈ ರೀತಿಯ ಹೇಳಿಕೆ ನೀಡಿರುವುದು ಖಂಡನೀಯ ಹಾಗೂ ಪತ್ರಿಕೆಯಲ್ಲಿ ಚಿರಿಬಿ ಗ್ರಾಮ ಪಂಚಾಯಿತಿಯನ್ನು ಮಾತ್ರ ಬಿತ್ತರಿಸಿರುವುದು ನ್ಯಾಯಾಂಗದ ಉಲ್ಲಂಘನೆ ಅಲ್ಲವೇ?
–ದೇವೀರಮ್ಮ
ಮಾಜಿ ಅಧ್ಯಕ್ಷರು, ಚಿರಿಬಿ ಗ್ರಾಮ ಪಂಚಾಯಿತಿ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here