ಕ್ರೀಡಾಪಟುಗಳಿಗೆ ತಾಳ್ಮೆ ಬಹು ಮುಖ್ಯವಾದದ್ದು |ಉತ್ತಮ ದೇಹದಾಢ್ಯ ಬೆಳೆಸಿಕೊಳ್ಳುವುದು ಅವಶ್ಯಕ |ಸಿದ್ದರಾಮ ಕಲ್ಮಠ

0
267

ಕೊಟ್ಟೂರು ಕೊಟ್ಟೂರೇಶ್ವರ ಮಹಾವಿದ್ಯಾಲಯ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು ದೈಹಿಕ ಶಿಕ್ಷಣ ವಿಭಾಗದಿಂದ ಗುರುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಸಿದ್ದರಾಮ ಕಲ್ಮಠ ಮಾತನಾಡಿ ಕ್ರೀಡಾಪಟುಗಳಿಗೆ ತಾಳ್ಮೆ ಬಹು ಮುಖ್ಯವಾದದ್ದು ,ಉತ್ತಮ ದೇಹದಾಢ್ಯ ಬೆಳೆಸಿಕೊಳ್ಳುವುದು ಅವಶ್ಯಕ. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸನ್ನು ಹೊಂದಿರಬೇಕು ಹಾಕಿ ಮಾಂತ್ರಿಕ ಧ್ಯಾನ್ ಚಂದ್ರವರ ಕ್ರೀಡಾ ಕೌಶಲ್ಯಗಳನ್ನು ವಿದ್ಯಾರ್ಥಿಗಳೆಲ್ಲರೂ ಮೈಗೂಡಿಸಿಕೊಳ್ಳುವಂತಹ ಸ್ಪೂರ್ತಿಯ ನುಡಿಗಳನ್ನು .

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾಕ್ಟರ್ ಎಂ ರವಿಕುಮಾರ್ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಹಾಗೂ ಕ್ರೀಡೆಯ ಪ್ರಾಮುಖ್ಯತೆಯನ್ನು ನೀವೆಲ್ಲರೂ ಸಹ ಅರಿತಿರಬೇಕು ಎಂದರು .

ಈ ಕಾರ್ಯಕ್ರಮದ ಪ್ರಾಸ್ತಾವಿಕತೆ ನುಡಿಯಲ್ಲಿ ಮಾತನಾಡಿದ ದೈಹಿಕ ಶಿಕ್ಷಣ  ನಿರ್ದೇಶಕರಾದ ಶಿಕ್ಷಣ ಡಾ. ಶಿವಕುಮಾರ್ ಮಾತನಾಡುತ್ತ ವಿದ್ಯಾರ್ಥಿಗಳು ಮೊಬೈಲ್ ಮತ್ತು ದುಶ್ಚಟಗಳಿಂದ ದೂರವಾಗಬೇಕಾದರೆ ಕ್ರೀಡೆಯಲ್ಲಿ ಆಸಕ್ತಿ ವಹಿಸಿದರೆ ಸಾಧ್ಯ ಎಂದು ತಿಳಿಸಿದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಮಹೇಶ್ವರ ಮೂರ್ತಿ ಮಾತನಾಡಿ ಕ್ರೀಡಾಪಟುಗಳು ಕಾಲೇಜಿಗೂ ವಿಶ್ವವಿದ್ಯಾಲಯಕ್ಕೂ ಹಾಗೂ ರಾಜ್ಯ ಮತ್ತು ದೇಶದಲ್ಲಿ ಕೀರ್ತಿಯನ್ನು ಬೆಳಗಿಸುವಂತ ರೀತಿಯಲ್ಲಿ ಆಸಕ್ತಿವಹಿಸಿ ಎಂದು ನುಡಿದರು .

ಈ ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಕೆ ಬಿ ಮಲ್ಲಿಕಾರ್ಜುನ್ ಕೋರಿ ಬಸವರಾಜ್ ಮತ್ತು ಅಡಿಕೆ ಮಂಜುನಾಥ್ ರವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಪ್ರಾರ್ಥನಾ ಗೀತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥೆ ರಹಿಂಬಿ ನೆರವೇರಿಸಿದರೆ, ಪೃಥ್ವಿರಾಜ್ ಬೆಂಡರಿಗೆ ವಂದನಾರ್ಪಣೆಯನ್ನು ಕುಮಾರಿ ವಿದ್ಯಾ ಮತ್ತು ಭವಾನಿ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here