ತಾಯಕನಹಳ್ಳಿ ಗ್ರಾಮದಲ್ಲಿ ಡಾ ಬಿ.ಆರ್ ಅಂಬೇಡ್ಕರ್ ಅವರ 131ನೇ ಜಯಂತಿ ಆಚರಣೆ

0
97

ವಿಜಯನಗರ:26:- ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಇಂದು ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವ ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿಶೇಷ ಉಪನ್ಯಾಸ ನೀಡಿದ ಪರಮೇಶ್ ಅವರು ಅಂಬೇಡ್ಕರ್ ಅವರು ಈ ದೇಶದ ಭವ್ಯ ಮತ್ತು ಶ್ರೇಷ್ಠ ಪರಂಪರೆಯ ನಾಗರಿಕತೆಯ ಇತಿಹಾಸದ ಕಾಣಿಕೆ ಈ ದೇಶದ ಒಳಗಡೆ ಇಡೀ ಜಗತ್ತೇ ಬೆಚ್ಚಿಬೀಳುವಂತಹ ಇತಿಹಾಸವನ್ನು ನಮ್ಮ ಡಾ ಬಿ.ಆರ್ ಅಂಬೇಡ್ಕರ್ ಅವರು ಸೃಷ್ಟಿ ಮಾಡಿದ್ದಾರೆ ಎಂದರು. ಕೆಪಿಸಿಸಿ ಸದಸ್ಯರು ಲೋಕೇಶ್ ವಿ ನಾಯಕ್ ಅವರು ಮಾತನಾಡಿ ಅಂಬೇಡ್ಕರ್ ಅವರು ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಿಸಬೇಡಿ ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಶಿಕ್ಷಣವನ್ನು ನೀಡಿ. ಕೂಲಿ ಕೆಲಸಕ್ಕೆ ಕಳಿಸಬೇಡಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ, ಪ್ರತಿಯೊಬ್ಬರೂ ಶಿಕ್ಷಣಕ್ಕೆ ಮಹತ್ವ ನೀಡಿ ಎಂದು ಹೇಳಿದ್ದಾರೆ ಎಂದರು

ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ನಾಗೇಶ್ ಎಸ್ ಜಿ ಸಂಶೋಧಕರು, ಪ್ರಾರ್ಥನೆ ಶೋಭಾ ವೈ, ಸ್ವಾಗತ ಬಸವರಾಜ್ ಸಂಶೋಧಕರು, ವಂದನಾರ್ಪಣೆ ಶ್ರೀ ನವೀನ್ ಕುಮಾರ್, ಪ್ರಾಸ್ತಾವಿಕ ನುಡಿ ರವಿ ಎಸ್ಎಲ್ ಸಂಶೋಧಕರು, ಬಳ್ಳಾರಿ ಸಂಸದ ಶ್ರೀ ದೇವೇಂದ್ರಪ್ಪನವರ ಮಗ ಶ್ರೀ ರಂಗನಾಥ, ಹಾಗೂ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸಿದ್ದಯ್ಯನಕೋಟೆ, ಹೂಡೇಂ ಗ್ರಾ.ಪಂ ಅಧ್ಯಕ್ಷೆ ಕರಿಬಸಮ್ಮ ದುರುಗಪ್ಪ, ಉಪಾಧ್ಯಕ್ಷರಾದ ಕೆ.ಎನ್ ರಾಘವೇಂದ್ರ, ಸದಸ್ಯರು ಶ್ರೀಮತಿ ಪ್ಯಾರಿಮಾಬಿ ಘನಿಸಾಹೇಬ್,ರಾಮಚಂದ್ರಪ್ಪ ಸದಸ್ಯರು, ಮಾಜಿ ತಾ.ಪಂ ಸದ್ಯಸ್ಯರು ಜಿ ಪಾಪನಾಯಕ, ಕೊಟ್ರೇಶ್ ಎಚ್.ಓ, ಪಿ.ಕೆ.ಜಿ ಬ್ಯಾಂಕ್ ಮ್ಯಾನೇಜರ್ ತಿಪ್ಪೇಸ್ವಾಮಿ, ಬಿ.ಟಿ ಮಂಜುನಾಥ್, ಶ್ರೀಮತಿ ಕರಿಬಸಮ್ಮ ಶಿಕ್ಷಕಿ, ಮಹಾದೇವ ಹಳೆಮನೆ, ದುರ್ಗೇಶ್ ಕೆಆರ್, ಸೇರಿದಂತೆ ತಾಯಕನಹಳ್ಳಿ ಗ್ರಾಮದ ಜೈ ಭೀಮ ಯುವಕರು, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಊರಿನ ಹಿರಿಯ ಮುಖಂಡರು, ಮಹಿಳೆಯರು ಇದ್ದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here